ವೆಲೆನ್ಸಿಯಾ ; ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

06-11-20 06:33 pm       Mangalore Correspondent   ಲೀಡರ್ಸ್ ರಿಪೋರ್ಟ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವೆಲೆನ್ಸಿಯಾ ವಾರ್ಡಿನ ರೆಡ್ ಬಿಲ್ಡಿಂಗ್ ಲೇನ್ ಬಳಿಯ ರಸ್ತೆ ಡಾಂಬರೀಕರಣಕ್ಕೆ ಶಾಸಕ ಡಿ.ವೇದವ್ಯಾಸ್ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು. 

ಮಂಗಳೂರು, ನವೆಂಬರ್ 06: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವೆಲೆನ್ಸಿಯಾ ವಾರ್ಡಿನ ರೆಡ್ ಬಿಲ್ಡಿಂಗ್ ಲೇನ್ ಬಳಿಯ ರಸ್ತೆ ಡಾಂಬರೀಕರಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು. 

ಈ ವೇಳೆ ಮಾತನಾಡಿದ ಶಾಸಕ ಕಾಮತ್, ರೆಡ್ ಬಿಲ್ಡಿಂಗ್ ಪರಿಸರದ ರಸ್ತೆ ಹದಗೆಟ್ಟಿರುವ‌ ಕುರಿತು ಕಾರ್ಪೊರೇಟರ್ ಸಂದೀಪ್ ಗರೋಡಿ ಮಾಹಿತಿ ನೀಡಿದ್ದರು. ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿರುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆಗೊಳಿಸಲಾಗಿದೆ. ತಕ್ಷಣವೇ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಕಾರ್ಪೊರೇಟರ್ ಸಂದೀಪ್ ಗರೋಡಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಜೇಮ್ಸ್ ಡಿಸೋಜಾ, ಪ್ರಭಾ ಮಾಲಿನಿ, ಭಾಸ್ಕರಚಂದ್ರ ಶೆಟ್ಟಿ, ಆಶಾ ಡಿ ಸಿಲ್ವಾ, ಸಬಿತಾ ಮಿಸ್ಕಿತ್, ಬಿಜೆಪಿ ಪ್ರಮುಖರಾದ ಜಗದೀಶ್ ಕೆ, ಕಿರಣ್ ರೈ, ಪ್ರಕಾಶ್ ಗರೋಡಿ, ಶಶಿರಾಜ್ ಅಂಬಟ್, ಗಣೇಶ್ ನಾಗುರಿ, ತಿಲಕರಾಜ್ ನಾಗುರಿ, ಪದ್ಮನಾಭ ನಗುರಿ, ಶಕ್ತಿಕೇಂದ್ರದ ಪ್ರಮುಖರಾದ ಜಗದೀಶ್ ಶೆಟ್ಟಿ, ಬೂತ್ ಪ್ರಮುಖರಾದ ಅಕ್ಷಯ್ ಗರೋಡಿ, ಜಯರಾಜ್ ನಾಗುರಿ, ವರುಣ್ ರಾಜ್ ಅಂಬಟ್, ಅಜಿತ್ ಡಿಸಿಲ್ವಾ ಉಪಸ್ಥಿತರಿದ್ದರು.