ಬ್ರೇಕಿಂಗ್ ನ್ಯೂಸ್
02-10-23 11:09 pm Mangaluru Correspondent ಕರಾವಳಿ
ಮಂಗಳೂರು, ಅ.2: ನೂರಾರು ಬಸ್ ಸಿಬಂದಿಗೆ ನೆಚ್ಚಿನ ಧಣಿ, ಮಂಗಳೂರು – ಉಡುಪಿಯ ಅಷ್ಟೂ ಬಸ್ ಮಾಲಕರ ಪಾಲಿನ ನೆಚ್ಚಿನ ಮಿತ್ರ, ಯಾವುದಕ್ಕೂ ಕಮ್ಮಿಯಿಲ್ಲದ ಆಗರ್ಭ ಶ್ರೀಮಂತ.. ಅಪ್ಪನ ರೀತಿಯಲ್ಲೇ ದಿನವೂ ಬಸ್ಸುಗಳದ್ದೇ ಧ್ಯಾನ ಮಾಡುತ್ತಿದ್ದ ಮಹೇಶ್ ಮೋಟಾರ್ಸ್ ಮಾಲಕ ಪ್ರಕಾಶ್ ಶೇಖ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವುದನ್ನು ಯಾರೂ ನಂಬುತ್ತಿಲ್ಲ. ಎಂದಿನಂತೆ ಸಹಜವಾಗಿದ್ದ ಮನುಷ್ಯ ದಿಢೀರ್ ಆಗಿ ಸಾವಿಗೆ ಶರಣಾಗಿದ್ದನ್ನು ಬಸ್ಸಿನ ಸಿಬಂದಿಯಂತೂ ನಂಬುವುದೇ ಇಲ್ಲ. ಹೀಗಾಗಿ ಪ್ರಕಾಶಣ್ಣ ಸುಸೈಡ್ ಯಾಕೆ ಮಾಡಿದ್ದಾರೆ ಅನ್ನುವುದು ಬಸ್ ಸಿಬಂದಿ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಹೆಚ್ಚಿನ ಜನರು ಕೇಳುತ್ತಿರುವ ಪ್ರಶ್ನೆ.
ಕೇವಲ 15 ವರ್ಷಗಳಲ್ಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೂ ಊಹಿಸದ ರೀತಿ ಖಾಸಗಿ ಬಸ್ಸನ್ನು ಉತ್ತುಂಗಕ್ಕೇರಿಸಿದ್ದ ಪ್ರಕಾಶ್ ಶೇಖ ಭಾನುವಾರ ಬೆಳಗ್ಗೆ ಕದ್ರಿಯ ತನ್ನ ಅಪಾರ್ಟ್ಮೆಂಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಮಾರು 70ರಷ್ಟು ಬಸ್ಸುಗಳು, ಮಂಗಳೂರು ನಗರದಲ್ಲೇ ಅತಿ ಹೆಚ್ಚು ರೆಡಿ ಮಿಕ್ಸ್ ಟಿಪ್ಪರ್ ಲಾರಿ ಬಿಸಿನೆಸ್ ಹೊಂದಿದ್ದ ಪ್ರಕಾಶ್ ಅವರಿಗೆ ಬಸ್ಸಿನ ಬಗ್ಗೆ ತುಂಬ ಕ್ರೇಜ್ ಇತ್ತು ಅನ್ನೋದನ್ನು ಅವರ ಸ್ನೇಹಿತರೇ ಹೇಳುತ್ತಾರೆ. ಹಾಗಾಗಿಯೇ ಎರಡು ವಾರದ ಹಿಂದೆ ಹೊಸತಾಗಿ ಮೂರು ಹೈಫೈ ಬಸ್ ಗಳನ್ನು ಖರೀದಿಸಿದ್ದರು. ಅವನ್ನು ಟೂರಿಸ್ಟ್ ಬಸ್ಸಿಗೆ ಇಳಿಸುವುದಕ್ಕೆ ಬಾಡಿ ಶೇಪಿಂಗ್ ಮಾಡಲು ಬಿಟ್ಟಿದ್ದರು.
ಭಾನುವಾರ ಸಂಜೆಯಾಗುತ್ತಿದ್ದಂತೆ ಮಹೇಶ್ ಬಸ್ಸಿನ ಧಣಿ ಸುಸೈಡ್ ಮಾಡ್ಕೊಂಡಿದ್ದಾರೆ ಅನ್ನುವ ಸುದ್ದಿ ಬಿತ್ತರವಾಗುತ್ತಲೇ ಮೊದಲು ಶಾಕ್ ಆಗಿದ್ದು ಬಹುತೇಕ ಬಸ್ ಸಿಬಂದಿ. ಖಾಸಗಿ ಬಸ್ಸಿನಲ್ಲಿ ದುಡಿಯುವ ಮಂದಿಗೆಲ್ಲ ಪ್ರಕಾಶಣ್ಣ ಅವರದ್ದು ಪರಿಚಯ ಇತ್ತು. ಪ್ರಕಾಶ್ ಅವರು ಬಸ್ಸಿನ ಶೇಖ್ ಆಗಿದ್ದರೂ, ಸಿಬಂದಿ ಜೊತೆಗೆ ಹತ್ತಿರದ ಒಡನಾಟ ಇರಿಸಿಕೊಂಡಿದ್ದರು. ಅಗತ್ಯಕ್ಕೆ ಸಿಬಂದಿ ಇಲ್ಲ, ಡ್ರೈವರ್, ಕಂಡಕ್ಟರ್ ಇಲ್ಲಾಂದ್ರೆ ತಾನೇ ಆ ಕೆಲಸ ಮಾಡುವಷ್ಟರ ಮಟ್ಟಿಗೆ ಕೆಲಸದ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದ ಮನುಷ್ಯ. ಆದರೆ ಅಂಥವನಿಗೆ ಅದ್ಯಾವ ಘಳಿಗೆಯಲ್ಲಿ ಸಾಯುವ ಮನಸ್ಸು ಬಂತೋ ಗೊತ್ತಿಲ್ಲ ಅನ್ನುತ್ತಾರೆ, ಅವರ ಗೆಳೆಯ ಬಸ್ ಮಾಲೀಕ ದಿಲ್ ರಾಜ್ ಆಳ್ವ.
ಆತ್ಮಹತ್ಯೆ ಬಗ್ಗೆ ಕದ್ರಿ ಪೊಲೀಸರಲ್ಲಿ ಕೇಳಿದರೆ, ನಮಗೇನೂ ಗೊತ್ತಿಲ್ಲ ಅಂತಾರೆ. ಸಾವಿನ ಬಗ್ಗೆ ಸಂಶಯ, ಬೇರೇನಾದರೂ ಇದ್ದರೆ ಕುಟುಂಬದವರೇ ಹೇಳಬೇಕು. ಅದಿಲ್ಲಾಂದ್ರೆ ನಮಗೇನು ತನಿಖೆ ಮಾಡೋಕೆ ಸಾಧ್ಯ ಎನ್ನುತ್ತಾರೆ. ಆಪ್ತರಲ್ಲಿ ಕೇಳಿದರೆ, ಅವರಿಗೆ ಯಾವುದೇ ಅಂಥ ಚಟ ಇರಲಿಲ್ಲ. ಆರ್ಥಿಕ ನಷ್ಟವೂ ಇರಲಿಲ್ಲ. ಖಾಸಗಿತನದ ಬಗ್ಗೆ ಹೆಚ್ಚೇನು ತಿಳಿದಿಲ್ಲ ಅನ್ನುತ್ತಾರೆ. ಶಕ್ತಿ ಫ್ರೀ ಬಸ್ ಯೋಜನೆಯ ಎಫೆಕ್ಟ್ ನಿಂದಾಗಿ ಆರ್ಥಿಕ ನಷ್ಟವಾಗಿತ್ತೇ ಅನ್ನುವ ಪ್ರಶ್ನೆಯನ್ನು ಆಪ್ತರಲ್ಲಿ ಕೇಳಿದರೆ, ಖಾಸಗಿ ಬಸ್ಸುಗಳಿಗೆ ಒಂದಷ್ಟು ನಷ್ಟ ಆಗಿದ್ದು ಹೌದು. ಹಾಗಂತ, ಆ ಕಾರಣಕ್ಕೆ ಸಾಯುವ ಜಾಯಮಾನದವರಲ್ಲ ಪ್ರಕಾಶ್ ಎನ್ನುತ್ತಾರೆ.
ಸೋಮವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ ಎಜೆ ಆಸ್ಪತ್ರೆಯ ಬಳಿಯಲ್ಲೇ ಮಹೇಶ್ ಮೋಟಾರ್ಸ್ ಬಸ್ಸುಗಳು ಸಾಲುಗಟ್ಟಿದ್ದವು. 9.30ರ ಸುಮಾರಿಗೆ ಆಸ್ಪತ್ರೆಯಿಂದ ಶವವನ್ನು ಆಂಬುಲೆನ್ಸಲ್ಲಿ ಹೊರತರುತ್ತಲೇ ಬಸ್ಸುಗಳು ಕಣ್ಣೀರಿಡುತ್ತಲೇ ಮೆರವಣಿಗೆ ಹೊರಟಿದ್ದವು. ಕುಲಶೇಖರದ ಮನೆಯಲ್ಲಿ ಆಬಳಿಕ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಂದಾಜು 10 ಸಾವಿರಕ್ಕೂ ಹೆಚ್ಚು ಜನ ಬಂದು ದರ್ಶನ ಮಾಡಿ ಹೋಗಿದ್ದಾರೆ ಅನ್ನುತ್ತಾರೆ, ಆಪ್ತರು. ತಂದೆ 80ರ ಆಸುಪಾಸಿನ ಜಯರಾಮ ಶೇಖರು ಮಾತ್ರ ಇದ್ಯಾವುದನ್ನೂ ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದರು. ಅಪರಾಹ್ನ ಹೊತ್ತಿಗೆ ಶಕ್ತಿನಗರದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಬಸ್ ಸಿಬಂದಿ, ಆಪ್ತರು, ಸ್ನೇಹಿತರು, ಕುಟುಂಬಸ್ಥರು ಕಣ್ಣೀರು ಹಾಕುತ್ತಲೇ ನೆಚ್ಚಿನ ಪ್ರಕಾಶ ಶೇಖರಿಗೆ ವಿದಾಯ ಹೇಳಿದ್ದಾರೆ. ಆತ್ಮಹತ್ಯೆ ಅನ್ನುವುದು ಅರೆಕ್ಷಣದ ಮನಸ್ಸಿನಾಳದ ತೀರ್ಪು. ಕಹಿ ಘಳಿಗೆಯಲ್ಲಿ ಪ್ರಕಾಶ್ ಶೇಖ ಇಂಥ ನಿರ್ಧಾರಕ್ಕೆ ಯಾಕಾಗಿ ಬಂದರೋ ಅನ್ನುವ ಪ್ರಶ್ನೆಗಂತೂ ಯಾರಲ್ಲೂ ಉತ್ತರ ಇರಲಿಲ್ಲ.
Mahesh Travels bus owner Prakash suicide, what is the reason behind his mysterious death, story of great personality from Mangalore. In Udupi and Dakshina Kannada district, there are many city buses belonging to Mahesh Motors plying daily and is popular among commuters. Prakash Shekha was a member of Dakshina Kannada Bus Owners' Association and formerly, it's general secretary
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm