ಬ್ರೇಕಿಂಗ್ ನ್ಯೂಸ್
12-11-20 06:34 pm Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 12: ಚಿಂದಿಯಾಗಿ ಕಸದ ತೊಟ್ಟಿ ಸೇರುವ ಪ್ಲಾಸ್ಟಿಕ್ ಗಳನ್ನೇ ಬಳಸ್ಕೊಂಡು ಸುಂದರ ಮನೆ ಕಟ್ಟಬಹುದು ಎನ್ನುವುದನ್ನು ಊಹಿಸಲು ಸಾಧ್ಯವೇ..? ಆದರೆ, ಇದು ಬರೀಯ ಊಹನೆ ಮಾತ್ರ ಅಲ್ಲ. ವಾಸ್ತವದಲ್ಲಿ ಸಾಧ್ಯ ಎನ್ನುವುದನ್ನು ಇಲ್ಲೊಂದು ಪರಿಸರ ಪ್ರೀತಿಯ ಸಂಘಟನೆ ತೋರಿಸಿಕೊಟ್ಟಿದೆ. ಬಳಸಿ ಎಸೆಯುವ ಪಾಲಿಥೀನ್ ಬ್ಯಾಗ್, ಗುಟ್ಕಾ ಪ್ಯಾಕೆಟ್, ಚಾಕ್ಲೆಟ್ ರಾಪರ್ಸ್ ಗಳನ್ನು ಬಳಸಿ ಮನೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.
ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಷನ್ ಎನ್ನುವ ಸಂಘಟನೆ, ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪ್ಲಾಸ್ಟಿಕ್ ನಿರ್ಮಿತ ವಾಸದ ಮನೆಯನ್ನು ಮಂಗಳೂರಿನಲ್ಲಿ ರೆಡಿ ಮಾಡಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕ ವೃತ್ತಿಯಲ್ಲಿದ್ದು ನಿವೃತ್ತರಾದ ಕಮಲಾ ಎಂಬವರಿಗೆ ಪಚ್ಚನಾಡಿ ಎಂಬಲ್ಲಿ ಈ ಪ್ಲಾಸ್ಟಿಕ್ ಮನೆ ನಿರ್ಮಿಸಿಕೊಟ್ಟಿದ್ದು ಜನ ಹುಬ್ಬೇರುವಂತೆ ಮಾಡಿದ್ದಾರೆ.
ಮರು ಬಳಕೆ ಸಾಧ್ಯವಾಗದ ಚಿಂದಿ ಪ್ಲಾಸ್ಟಿಕ್‌ಗಳನ್ನು ಬಳಸಿ, ಪ್ಲಾಸ್ಟಿಕ್ ಶೀಟ್ ಗಳನ್ನು ರಚಿಸಲಾಗಿದೆ. ತಳದಲ್ಲಿ ಕಾಂಕ್ರೀಟ್ ಅಡಿಪಾಯ, ಗೋಡೆ ಮತ್ತು ಹಂಚಿಗೆ ಅದೇ ಪ್ಲಾಸ್ಟಿಕ್ ನಿರ್ಮಿತ ತಗಟು ಶೀಟ್. 350 ಚದರ ಅಡಿ ವಿಸ್ತೀರ್ಣದ ಈ ಮನೆಗೆ 1500 ಕಿಲೋ ಪ್ಲಾಸ್ಟಿಕ್ ಬಳಕೆಯಾಗಿದೆ. ಈ ರೀತಿಯ ಮನೆ ಕರ್ನಾಟಕದಲ್ಲಿ ಪ್ರಥಮವಾಗಿದ್ದು, ಗಾಳಿ, ಮಳೆಯ ಮೈಯೊಡ್ಡಿ 30 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ, ಯೋಜನಾ ನಿರ್ದೇಶಕಿ ಶಿಫ್ರಾ ಜೇಕಬ್ಸ್.
ನಿರ್ಮಾಣ ಕಾರ್ಯದಲ್ಲಿ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಸಂಘಟನೆ ಜೊತೆ ಹೈದರಾಬಾದ್ ಮೂಲದ ಬಾಂಬೂ ಹೌಸ್ ಎನ್ನುವ ಸಂಸ್ಥೆ ಕೈಜೋಡಿಸಿದೆ. ಗುಜರಿ ಅಂಗಡಿ, ತ್ಯಾಜ್ಯ ರಾಶಿಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕನ್ನು ಗುಜರಾತ್‌ಗೆ ಕಳುಹಿಸಿ ಅಲ್ಲಿನ ಕಾರ್ಖಾನೆಯಲ್ಲಿ ಪ್ಲಾಸ್ಟಿಕ್ ಶೀಟ್ ಗಳಾಗಿ ಪರಿವರ್ತಿಸಲಾಗಿದೆ. ಒಂದಿಷ್ಟು ರಾಸಾಯನಿಕ ಬಳಸಿ, ಒಂದಿಂಚು ದಪ್ಪದ ಶೀಟ್ ಗಳನ್ನು ರಚಿಸಲಾಗಿದೆ. ಈ ಮನೆಗೆ ಸುಮಾರು 4.5 ಲಕ್ಷ ರೂ. ತಗಲಿದ್ದು ಏಕಕಾಲದಲ್ಲಿ ಹಲವು ಮನೆಗಳನ್ನು ನಿರ್ಮಿಸುವುದಿದ್ದರೆ ವೆಚ್ಚ ಕಡಿಮೆ ಆಗಬಹುದು. ಟೆಂಟ್, ಜೋಪಡಿಯಲ್ಲಿ ವಾಸಿಸುವರಿಗೆ ಇದು ಅತ್ಯುತ್ತಮ ಪರ್ಯಾಯ ಎಂದು ಹೇಳುತ್ತಾರೆ, ಯೋಜನಾ ಸಂಯೋಜಕಿ ಜಯಂತಿ.
ಹಿಂದೆ ಜೋಪಡಿಯಲ್ಲಿದ್ದ ಪೌರ ಕಾರ್ಮಿಕ ಮಹಿಳೆ ಕಮಲಾ ಅವರ ಜೋಪಡಿ ಮುರಿದು ಹೋಗಿತ್ತು. ಇದನ್ನು ಕಂಡ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಸಂಘಟನೆ, ಉಚಿತವಾಗಿ ಮನೆ ನಿರ್ಮಿಸಿಕೊಡಲು ಮುಂದಾಗಿತ್ತು. ಒಟ್ಟಿನಲ್ಲಿ ಕಡಿಮೆ ಖರ್ಚು ಮತ್ತು ಪ್ಲಾಸ್ಟಿಕ್ ಮರು ಬಳಕೆಯಿಂದ ಮನೆ ನಿರ್ಮಿಸಿಕೊಳ್ಳಬಹುದು ಎಂಬುದನ್ನು ಈ ಸಂಘಟನೆ ತೋರಿಸಿಕೊಟ್ಟಿದೆ. ಈ ಚೊಕ್ಕಟ ಮನೆಯನ್ನು ನೋಡಿ, ಪೊಲೀಸ್ ಚೆಕ್ ಪೋಸ್ಟ್, ಸಾರ್ವಜನಿಕ ಶೌಚಾಲಯ, ಶಾಲೆ ನಿರ್ಮಾಣಕ್ಕೆ ಹಲವರು ಆಸಕ್ತಿ ತೋರಿದ್ದಾರೆ.
VIDEO:
The Plastics For Change (PFC) India Foundation has built a plastic house in Pachanady, Mangalore which is working to develop and improve the quality of life of informal waste-collectors in Karnataka.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm