ಮಲ್ಪೆ ; ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ಸಮುದ್ರಪಾಲು 

28-01-24 03:43 pm       Udupi Correspondent   ಕರಾವಳಿ

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಬ್ಯಾಂಕ್‌ ಉದ್ಯೋಗಿಯೊಬ್ಬರು ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಕೋಡಿಬೆಂಗ್ರೆಯ ಡೆಲ್ಟಾ ಬೀಚ್‌ನಲ್ಲಿ ಶನಿವಾರ ನಡೆದಿದೆ. 

ಉಡುಪಿ, ಜ.28: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಬ್ಯಾಂಕ್‌ ಉದ್ಯೋಗಿಯೊಬ್ಬರು ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಕೋಡಿಬೆಂಗ್ರೆಯ ಡೆಲ್ಟಾ ಬೀಚ್‌ನಲ್ಲಿ ಶನಿವಾರ ನಡೆದಿದೆ. 

ನಾಪತ್ತೆಯಾದವರನ್ನು ಬೆಂಗಳೂರಿನ ಬ್ಯಾಂಕ್‌ ಉದ್ಯೋಗಿ ನಿತಿನ್‌ (35) ಎಂದು ಗುರುತಿಸಲಾಗಿದೆ. ರಜೆಯ ಹಿನ್ನೆಲೆಯಲ್ಲಿ ಜ.26ರಂದು ಇಬ್ಬರು ಸ್ನೇಹಿತರೊಂದಿಗೆ ಉಡುಪಿಗೆ ಬಂದಿದ್ದ ಅವರು, ಶನಿವಾರ ಹೊರಡುವ ಹಿನ್ನೆಲೆಯಲ್ಲಿ ಡೆಲ್ಟಾ ಬೀಚ್‌ಗೆ ತೆರಳಿದ್ದರು ಎನ್ನಲಾಗಿದೆ. ಸಮುದ್ರದ ನೀರಿನಲ್ಲಿ ಆಡುತ್ತಿರುವಾಗ ನಿತಿನ್‌ ಅಲೆಗಳೊಂದಿಗೆ ಕೊಚ್ಚಿ ಹೋಗಿದ್ದು ನಾಪತ್ತೆಯಾಗಿದ್ದಾರೆ. ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bangalore based bank employee drowns at Malpe beach in udupi. The Deceased has been Identifed as Nitin.