ಮರಳಿ ಬಿಜೆಪಿ ಸೇರಿದ ಹಿರಿಯ ಮುಖಂಡ ಸತೀಶ್ ಪ್ರಭು ; ದಕ್ಷಿಣ ಕನ್ನಡ ಜಿಲ್ಲೆಯ ಜನ ಪ್ರಧಾನಿ ಮೋದಿಯ ಋಣದಲ್ಲಿದ್ದಾರೆ, ದಾಖಲೆಯ ಅಂತರದಿಂದ ಗೆಲ್ಲಿಸುವುದು ಜವಾಬ್ದಾರಿ ಎಂದ ಸಂಸದ ನಳಿನ್

25-03-24 10:50 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಜನರು ಪ್ರಧಾನಿ ಮೋದಿಯ ಋಣದಲ್ಲಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕಳೆದ ಹತ್ತು ವರ್ಷದಲ್ಲಿ ಒಂದು ಲಕ್ಷ ಕೋಟಿ ಕೊಟ್ಟಿದ್ದಾರೆ. ಅದಕ್ಕಾಗಿ ಮೋದಿ ಋಣ ತೀರಿಸಲು ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕಾಗಿದೆ. ನಮ್ಮ ಅಭ್ಯರ್ಥಿ ಬೃಜೇಶ್ ಚೌಟ ಅವರನ್ನು 3 ಲಕ್ಷ ಮತಗಳಿಂದ ದಾಖಲೆಯ ಅಂತರದಿಂದ ಗೆಲ್ಲಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕರೆ ಕೊಟ್ಟಿದ್ದಾರೆ.

ಮಂಗಳೂರು, ಮಾ.25: ದಕ್ಷಿಣ ಕನ್ನಡ ಜಿಲ್ಲೆಯ ಜನರು ಪ್ರಧಾನಿ ಮೋದಿಯ ಋಣದಲ್ಲಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕಳೆದ ಹತ್ತು ವರ್ಷದಲ್ಲಿ ಒಂದು ಲಕ್ಷ ಕೋಟಿ ಕೊಟ್ಟಿದ್ದಾರೆ. ಅದಕ್ಕಾಗಿ ಮೋದಿ ಋಣ ತೀರಿಸಲು ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕಾಗಿದೆ. ನಮ್ಮ ಅಭ್ಯರ್ಥಿ ಬೃಜೇಶ್ ಚೌಟ ಅವರನ್ನು 3 ಲಕ್ಷ ಮತಗಳಿಂದ ದಾಖಲೆಯ ಅಂತರದಿಂದ ಗೆಲ್ಲಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕರೆ ಕೊಟ್ಟಿದ್ದಾರೆ.

ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ಟಿವಿ ರಮಣ್ ಪೈ ಸಭಾಂಗಣದಲ್ಲಿ ನಡೆದ ಶಕ್ತಿಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ನಳಿನ್ ಮಾತನಾಡಿದರು. ನಳಿನ್ ಮುಂದೇನು ಎಂದು ಕಾರ್ಯಕರ್ತರು ಕೇಳುತ್ತಿರಬಹುದು. ಆರೆಸ್ಸೆಸ್ ಸ್ವಯಂಸೇವಕನಾಗಿ ಸಾರ್ವಜನಿಕ ಜೀವನಕ್ಕೆ ಬಂದವನು. ಮೊದಲ ಬಾರಿಗೆ ಸಂಸದ ಸ್ಥಾನದ ಅವಕಾಶ ಕೊಟ್ಟಾಗಲೂ ನನ್ನನ್ನು ಕೇಳಿ ಕೊಟ್ಟಿಲ್ಲ. ಎರಡನೇ ಬಾರಿ, ಮೂರನೇ ಬಾರಿಯೂ ಹಿರಿಯರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾಲ್ಕನೇ ಬಾರಿ ನೀನು ಬೇಡ, ಬೃಜೇಶ್ ಚೌಟ ಆಗಲಿ ಎಂದು ನಿರ್ಣಯ ಮಾಡಿದ್ದಾರೆ. ಎಂದಿಗೂ ಅಧಿಕಾರಕ್ಕಾಗಿ ಅಂಟಿಕೊಂಡವನಲ್ಲ.

ಸಾಮಾನ್ಯ ಕಾರ್ಯಕರ್ತನಾಗಿದ್ದವನನ್ನು ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ ಮಾಡಿದೆ. ನಾಲ್ಕೂವರೆ ವರ್ಷ ರಾಜ್ಯಾಧ್ಯಕ್ಷ ಪದವಿಯಲ್ಲಿದ್ದೆ. ಆಗೇನಾದರೂ ತಪ್ಪುಗಳಾಗಿದ್ದರೆ, ಕಾರ್ಯಕರ್ತರು ಕ್ಷಮಿಸಬೇಕು. ಮುಂದೇನು ಅನ್ನುವ ಚಿಂತೆಯಿಲ್ಲ. ಎಂದಿಗೂ ಕಾರ್ಯಕರ್ತನಾಗಿರುತ್ತೇನೆ. ಈಗ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಜವಾಬ್ದಾರಿಯಿದೆ. ಸಮರ್ಥ, ದೇಶಕ್ಕಾಗಿ ದುಡಿದ ಯುವಕನನ್ನು ಲೋಕಸಭೆಗೆ ಆಯ್ಕೆ ಮಾಡಲು ಪಕ್ಷ ನಿರ್ಣಯಿಸಿದೆ. ನಾವು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ದಾಖಲೆ ಸ್ಥಾಪಿಸಬೇಕಿದೆ. ಮೋದಿಯವರು ಈ ಜಿಲ್ಲೆಗೆ ಸ್ಮಾರ್ಟ್ ಸಿಟಿ ಸೇರಿದಂತೆ ನೂರಾರು ಯೋಜನೆಗಳನ್ನು ಕೊಟ್ಟಿದ್ದಾರೆ. ಇಡೀ ದೇಶದ ಅಭಿವೃದ್ಧಿಗೆ ಕೊಡುಗೆ ಕೊಟ್ಟಿದ್ದಾರೆ. ನನಗೆ ಗ್ಯಾರಂಟಿ ಇದೆ, ನಾವು 28ರಲ್ಲಿ 18 ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲುತ್ತೇವೆ. ಮೋದಿಯವರು ಇಡೀ ದೇಶದಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ನಳಿನ್ ಹೇಳಿದರು.

ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಮಾತನಾಡಿ, ಈ ಜಿಲ್ಲೆಯ ಜನರು ಏನೂ ಇಲ್ಲದಿದ್ದ ಕಾಲದಲ್ಲಿ ಐದು ಬ್ಯಾಂಕ್ ಗಳನ್ನು ಸ್ಥಾಪಿಸಿ ನೂರಾರು ಮಂದಿಗೆ ಉದ್ಯೋಗ ಕೊಟ್ಟವರು. ಇಲ್ಲಿಂದ ಬೇರೆ ಬೇರೆ ಕಡೆ ಹೋಗಿ ಉದ್ಯಮ ಸ್ಥಾಪಿಸಿದ್ದಾರೆ. ಇಂಥ ಸುಶಿಕ್ಷಿತ ಜನರಿರುವ ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾಗುವ ಅವಕಾಶ ಸಿಕ್ಕಿದ್ದು ಪುಣ್ಯ. ಜಿಲ್ಲೆಯ ಎಲ್ಲ ಕಾರ್ಯಕರ್ತರ ಹಾರೈಕೆ ಮತ್ತು ಪ್ರೀತಿ ನನ್ನ ಜೊತೆಗಿರಲಿ. ಜಿಲ್ಲೆಯ ಜನರ ಸೇವೆ ಮಾಡುವ ಶಕ್ತಿಯನ್ನು ದೇವರು ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದರು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಹಿರಿಯ ಆರೆಸ್ಸೆಸ್ ಮುಖಂಡ ಸತೀಶ್ ಪ್ರಭು ಇದೇ ವೇಳೆ ಮರಳಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಒಳಗೆ ಆಗುತ್ತಿರುವ ವೈಪರೀತ್ಯಗಳನ್ನು ನೋಡಿ ಬೇಸತ್ತು ಬಿಜೆಪಿ ಬಿಡುತ್ತಿದ್ದೇನೆ ಎಂದು ಕಳೆದ ಬಾರಿ ಸತೀಶ್ ಪ್ರಭು ಹೇಳಿದ್ದರು. ಅವರನ್ನು ಮತ್ತೆ ಮನವೊಲಿಸಿ, ಮೋದಿ ಅವರನ್ನು ಗೆಲ್ಲಿಸುವುದಕ್ಕಾಗಿ ಪಕ್ಷಕ್ಕೆ ಕರೆತರಲಾಗಿದೆ ಎಂದು ಸಂಘಟಕರು ಹೇಳಿದರು.

The people of Dakshina Kannada district are in debt to Prime Minister Narendra Modi. In the last 10 years, he has given Rs 1 lakh crore for the development of the district. For that, Modi has to win him over once again to repay the debt. Our candidate Brajesh Chowta should be defeated by a record margin of 3 lakh votes," nalin kumar said.