ಬಿರುಕು ಬಿಟ್ಟ ಚಾರ್ಮಾಡಿ ಘಾಟ್ ರಸ್ತೆ: ಸಂಚಾರ ಬಂದ್

07-08-20 11:53 am       Headline Karnataka News Network   ಕರಾವಳಿ

ರಸ್ತೆ ಮಧ್ಯೆ ಮಣ್ಣು ಬಿದ್ದಿರುವುದರಿಂದ ಕೊಟ್ಟಿಗೆಹಾರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.

ಬೆಳ್ತಂಗಡಿ, ಆ. 07: ರಾಜ್ಯದೆಲ್ಲೇಡೆ ಮಳೆರಾಯನ ಆರ್ಭಟ ಜೋರಾಗಿದ್ದು ಹಲವೆಡೆ ಪ್ರಕೃತಿ ವಿಕೋಪಗಳು ಉಂಟಾಗುತ್ತಿದ್ದು, ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 234 ರ ಮಧ್ಯ ಅಲೇಖಾನ್ ಸಮೀಪ ಘಾಟ್ ರಸ್ತೆ ಬಿರುಕು ಬಿಟಿದ್ದು ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಇಂದು ಬೆಳಗ್ಗೆ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದ್ದರಿಂದ ಸಂಚಾರ ಸ್ಥಿತವಾಗಿತ್ತು, ನಂತರ ತೆರವು ಕಾರ್ಯ ಪೂರ್ಣಗೊಳಿಸಿದ್ದು, ಇದೀಗ ಅಲೇಖಾನ್ ರಸ್ತೆ ಬಿರುಕಿನಿಂದ ಮತ್ತೆ ಸಂಚಾರಕ್ಕೆ ತೊಂದರೆಯಾಗಿದೆ.

ರಸ್ತೆ ಮಧ್ಯೆ ಮಣ್ಣು ಬಿದ್ದಿರುವುದರಿಂದ ಕೊಟ್ಟಿಗೆಹಾರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಭಾರೀ ಮಳೆಯ ಮಧ್ಯೆಯೂ ವಾಹನಗಳು ಸಾಲುಗಟ್ಟಿ ನಿಂತಿವೆ. ಇದರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.