ಬ್ರೇಕಿಂಗ್ ನ್ಯೂಸ್
25-05-24 12:40 pm Udupi Correspondent ಕರಾವಳಿ
ಉಡುಪಿ, ಮೇ 25: ಉಡುಪಿ, ಮೇ 25: ಶಾಂತವಾಗಿದ್ದ ಉಡುಪಿಯಲ್ಲಿ ಮತ್ತೆ ಪುಡಿ ರೌಡಿಗಳು ಬಾಲ ಬಿಚ್ಚುತ್ತಿದ್ದಾರೆ. ರೌಡಿಗಳ ತಲವಾರು ಕಾಳಗ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಯಾವ ಸಿನಿಮಾ ದೃಶ್ಯಕ್ಕೂ ಕಮ್ಮಿ ಇಲ್ಲದಂತೆ ಗ್ಯಾಂಗ್ ವಾರ್ ಮಾಡಿದ್ದಾರೆ.
ವಾರದ ಹಿಂದೆ ಉಡುಪಿಯಲ್ಲಿ ನಡೆದ ಗ್ಯಾಂಗ್‌ವಾರ್‌ನ ವಿಡಿಯೋ ವೈರಲ್ ಆಗಿದೆ. ನಗರ ಭಾಗದಲ್ಲೇ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಕುಂಜಿಬೆಟ್ಟು ರಸ್ತೆಯಲ್ಲಿ ರಾತ್ರಿ ವೇಳೆ ಎರಡು ಗ್ಯಾಂಗ್‌ಗಳು ಹೊಡೆದಾಡಿವೆ.
ಮೂಲಗಳ ಪ್ರಕಾರ, ಮೇ 18ರಂದು ರಾತ್ರಿ ಈ ಘಟನೆ ನಡೆದಿದೆ. ಬಿಳಿ ಮತ್ತು ಕಪ್ಪು ಬಣ್ಣದ ಕಾರ್‌ಗಳಲ್ಲಿ ಇದ್ದ ಎರಡು ತಂಡಗಳು ರಸ್ತೆ ಮಧ್ಯದಲ್ಲಿ ಹೊಡೆದಾಟ ಮಾಡಿದ್ದು, ಗಲಾಟೆ ತಾರಕಕ್ಕೇರಿ ಕಾರ್‌ನಿಂದ ಒಂದಕ್ಕೊಂದು ಗುದ್ದಿದೆ. ಆಗ ವಿರೋಧಿ ಗ್ಯಾಂಗ್‌ನ ಒಬ್ಬ ಸದಸ್ಯ ಮತ್ತೊಂದು ತಂಡದ ಮೇಲೆ ತಲವಾರ್ ಬೀಸಿದ್ದಾನೆ. ಆತ ಬೀಸಿದ ತಲವಾರ್ ಏಟು ಕಾರ್‌ಗೆ ಬಿದ್ದು ಕಾರ್ ಗಾಜು ಪುಡಿ ಪುಡಿಯಾಗಿದೆ.






ಈ ವೇಳೆ ಸಿಟ್ಟಿಗೆದ್ದ ಆ ಗ್ಯಾಂಗ್ ಕಾರ್‌ನ್ನು ಮುಂದಕ್ಕೆ ಚಲಾಯಿಸಿ ವಾಪಸ್ ಬಂದು ಮತ್ತೆ ವಿರೋಧಿ ಗ್ಯಾಂಗ್‌ನ ಕಾರ್‌ಗೆ ಗುದ್ದಿದೆ. ಅಷ್ಟೇ ಅಲ್ಲದೇ ವೇಗವಾಗಿ ಕಾರ್ ಚಲಾಯಿಸಿ ಆ ಗ್ಯಾಂಗ್ ಸದಸ್ಯನೊಬ್ಬನ ಮೇಲೆ ಕಾರ್ ಹರಿಸಿದ್ದಾರೆ. ಕಾರು ಹರಿಸಿದ ವೇಗಕ್ಕೆ ಆತ ರಸ್ತೆಯಲ್ಲೇ ಬಿದ್ದಿದ್ದಾನೆ. ಇದನ್ನು ಯಾರೋ ಮೇಲಿನ ಕಟ್ಟಡದಿಂದ ವಿಡಿಯೋ ಮಾಡಿದ್ದು ವಿಡಿಯೋ ವೈರಲ್ ಆಗಿದ್ದು, ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡುರಸ್ತೆಯಲ್ಲಿ ತಲವಾರು ಹಿಡಿದು ಹೊಡೆದಾಟ ನಡೆಸಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗರುಡ ಗ್ಯಾಂಗ್ ನ ಆಶಿಕ್ ಮತ್ತು ರಾಕಿಬ್ ಹೆಸರಿನ ಯುವಕರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಆಶಿಕ್ ಕಾಪು ಮೂಲದವ ಮತ್ತು ರಾಕಿಬ್ ಗುಜ್ಜರಬೆಟ್ಟದವನು. ವಿಡಿಯೋ ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸ್ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಬಳಕೆಯಾಗಿದ್ದ 2 ಕಾರು, ಒಂದು ಬೈಕ್, ತಲ್ವಾರ್ ಹಾಗೂ ಡ್ಯಾಗರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ದೃಶ್ಯವನ್ನು ಸಮೀಪದ ಕಟ್ಟಡ ಮೇಲಿಂದ ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇಷ್ಟೊಂದು ಕ್ರೂರವಾಗಿ ನಗರದಲ್ಲಿ ಗ್ಯಾಂಗ್ ವಾರ್ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಗೆ ಜೂ. 1 ರ ವರೆಗೆ ನ್ಯಾಯಂಗ ಬಂಧನ ವಿಧಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Deadly #Gangwar in #Udupi Two gangs engaged in a fight on the national highway. It is reported that the youths from both gangs are from #Kaup #BreakingNews #udupinews pic.twitter.com/GVIhDpi0sE
— Headline Karnataka (@hknewsonline) May 25, 2024
Udupi deadly gang war video goes viral, culprits arrested. Two gangs engaged in a fight on the national highway between Udupi and Manipal on May 18. Two gangs engaged in a fight on the national highway between Udupi and Manipal on May 18. It is reported that the youths from both gangs are from Kaup. A video of the incident went viral on social media.
11-02-26 11:02 pm
HK News Desk
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
11-02-26 06:47 pm
HK News Desk
ಹಗಲಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್, ರಾತ್ರಿ ವೇಳೆ...
11-02-26 04:22 pm
ಮಥುರಾದಲ್ಲಿ ಮೂವರು ಮಕ್ಕಳಿಗೆ ವಿಷವುಣಿಸಿ ದಂಪತಿ ಸಾವ...
10-02-26 07:31 pm
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
11-02-26 06:00 pm
Mangalore Correspondent
ಎಡಪದವು ಬಳಿ ಹೊಸ ಹೆದ್ದಾರಿಗೆ ಅಗೆತ - ಹಳೆ ರಸ್ತೆ ಕು...
11-02-26 03:45 pm
Love Jihad, Mangalore: ಬಿಎಸ್ಸಿ ಕ್ರಿಮಿನಾಲಜಿ ಓದ...
10-02-26 11:03 pm
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
11-02-26 10:54 pm
Udupi Correspondent
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm
ಸಚಿವ ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾ...
10-02-26 09:05 pm
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am