ಬ್ರೇಕಿಂಗ್ ನ್ಯೂಸ್
01-06-24 10:06 pm Mangalore Correspondent ಕರಾವಳಿ
ಉಳ್ಳಾಲ, ಜೂ.1: ಉಳ್ಳಾಲದ ಸಮುದ್ರ ತೀರ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಕಡಲ್ಕೊರೆತ ತೀವ್ರಗೊಳ್ಳಲು ಕಾಂಡ್ಲಾ ವನ ಮತ್ತು ಗಾಳಿ ಮರಗಳ ವಿನಾಶವೇ ಕಾರಣ. ಕಾಂಡ್ಲಾ ವನ ನಶಿಸಿರುವುದರಿಂದ ಸಮುದ್ರದಲ್ಲಿ ಬೆಳೆಯುವ ಜಲಚರಗಳು ಸಂಕಷ್ಟ ಅನುಭವಿಸುತ್ತಿದೆ. ಜಿಲ್ಲೆಯ ಜನರು ಸರಕಾರ ಹಾಗೂ ಅರಣ್ಯ ಇಲಾಖೆಯ ಕಿವಿ ಹಿಂಡಿ ಕಾಂಡ್ಲಾ ವನ ಹಾಗೂ ಗಾಳಿ ಮರಗಳನ್ನು ಬೆಳೆಸಬೇಕಿದೆ. ಇಲ್ಲದೇ ಹೋದಲ್ಲಿ ಹವಾಮಾನ ವೈಪರೀತ್ಯಕ್ಕೆ 2040ನೇ ಇಸವಿಯಲ್ಲಿ ಕರಾವಳಿಯ ಉಳ್ಳಾಲ ಮತ್ತು ಮಂಗಳೂರು ಪ್ರದೇಶಗಳು ಸಮುದ್ರ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ನಿವೃತ್ತ ವೈಜ್ಞಾನಿಕ ಅಧಿಕಾರಿ ಡಾ| ದೊಡ್ಡ ಅಶ್ವಥ್ ನಾರಾಯಣಸ್ವಾಮಿ ಬೆಂಗಳೂರು
ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ "ತಿಂಗಳ ಬೆಳಕು-ಗೌರವ ಅತಿಥಿ" ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಮಾಧ್ಯಮದ ಜೊತೆಗಿನ ಸಂವಾದದಲ್ಲಿ ಅವರು ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. 1993ರಲ್ಲಿ ಸಿಆರ್ ಝಡ್ ನಕ್ಷೆ ತಯಾರಿ ಸಂದರ್ಭ ಉಳ್ಳಾಲದಿಂದ ತಲಪಾಡಿಯುದ್ಧಕ್ಕೂ ಕಾಂಡ್ಲಾ ವನಗಳ ಸಸ್ಯ ಸಂಪತ್ತೇ ಕಾಣುತ್ತಿತ್ತು. ಕ್ರಮೇಣ ಅದನ್ನು ಕಡಿದ ಪರಿಣಾಮ ಕಡಲ್ಕೊರೆತ ಹಂತ ಹಂತವಾಗಿ ತೀವ್ರಗೊಂಡು ರಸ್ತೆ, ಜನವಸತಿ ಪ್ರದೇಶಗಳನ್ನು ಆಹುತಿ ಪಡೆದಿದೆ. ಶ್ರೀಲಂಕಾ, ಸಿಂಗಾಪುರ, ವಿಯೆಟ್ನಾಂ ಸೇರಿದಂತೆ ಕೇರಳದಲ್ಲಿಯೂ ಕಾಂಡ್ಲಾ ವನ ವ್ಯಾಪಕವಾಗಿ ಬೆಳೆಸಲು ಸರಕಾರ ಪ್ರೋತ್ಸಾಹಿಸುತ್ತಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಕಾಂಡ್ಲಾ ವನಗಳು ಸಂಪೂರ್ಣ ನಶಿಸಿಹೋಗಿದೆ. ಉಳ್ಳಾಲ ವಲಯದ ಕಾರ್ಯನಿರತ ಪತ್ರಕರ್ತರು ಮುಂದೆ ನಿಂತು ಉಳ್ಳಾಲದಿಂದ- ಬಟ್ಟಪ್ಪಾಡಿ ಸಮುದ್ರ ತೀರದ ವರದಿಯನ್ನು ನೀಡಿ ಪ್ರಯೋಗಾರ್ಥ ಕಾಂಡ್ಲಾ ವನ ಬೆಳೆಸುವಂತೆ ಸರಕಾರವನ್ನ ಒತ್ತಾಯಿಸಬೇಕಿದೆ.
ಪರಿಸರ ವಿಚಾರಗಳನ್ನು ಅರ್ಥೈಸಿದ್ದ ಧೀರ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1981 ರಲ್ಲಿ ನಶಿಸುವ ಹಂತದಲ್ಲಿದ್ದ ಒಂದು ಕಾಲಿನ ಏಡಿಗಳ ಸಂತತಿಯನ್ನು ಬೆಳೆಸುವುದು ಹಾಗೂ ಉಳಿಸುವ ಕಲ್ಪನೆಯನ್ನು ಹೊಂದಿದ್ದರು. ಕಡಲತೀರ ಸಂರಕ್ಷಣೆಯ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿ ಕಡಲ ತೀರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಂರಕ್ಷಣಾ ಕ್ರಮಗಳಿಗೆ ಒತ್ತಾಯಿಸಿದ ಪತ್ರ ಕಳುಹಿಸಿರುವ ಸಾಕ್ಷಿಯಿದೆ. ದೇಶದುದ್ದಕ್ಕೂ ಪರಿಸರ ವ್ಯವಸ್ಥಾಪನಾ ಯೋಜನೆ ತಯಾರಿಸಬೇಕು ಅನ್ನುವ ಕೇಂದ್ರ ಸರಕಾರದ ಅಧಿಸೂಚನೆಯನ್ನು ಪಾಲಿಸದ ಸಂದರ್ಭ ಸರ್ವೋಚ್ಛ ನ್ಯಾಯಾಲಯ 1991ರಲ್ಲಿ ಪ್ರಶ್ನಿಸಿ, ರಾಜ್ಯಗಳಿಗೆ ನಿರ್ದೇಶಿಸುವಂತೆ ಆದೇಶಿಸಿತ್ತು. ಈ ಆದೇಶದಂತೆ 1993ರಲ್ಲಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ದಕ್ಷಿಣ ಕನ್ನಡ, ಉಡುಪಿ, ಕಾರವಾರ ಸಮುದ್ರ ತೀರದಲ್ಲಿ 21 ಮಧ್ಯಸ್ಥಿಕೆಗಳ ಅನುಷ್ಠಾನಕ್ಕೆ ಮುಂದಾದರು. ಅದಕ್ಕಾಗಿ ಡೆನ್ಮಾರ್ಕ್ ಸರಕಾರದಿಂದ ಧನಸಹಾಯಕ್ಕೆ ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ 2 ವರ್ಷ ಕಾಲ ರಾಜ್ಯದ ಸಮುದ್ರತೀರದ ಪ್ರದೇಶಗಳಲ್ಲಿ ಅಧ್ಯಯನಕ್ಕೆ ಸರಕಾರ ನಿಯೋಗ ರಚಿಸಿತ್ತು. ನಿಯೋಗದ ವರದಿಗಳಲ್ಲಿ ರಾಜ್ಯದಲ್ಲಿರುವ ಕಡಲತೀರದ ಸಂಪನ್ಮೂಲಗಳು ಬೇರೆ ಎಲ್ಲಿಯೂ ಇಲ್ಲ. ಏರುಬ್ಬರ, ಇಳಿಯುಬ್ಬರ ರೇಖೆಗಳನ್ನು ಗುರುತಿಸಿ ಸಿಆರ್ ಝೆಡ್ -1 ಹಾಗೂ 2 ವಲಯದ ನಕ್ಷೆಗಳನ್ನು ಅಂದು ತಯಾರಿಸಲಾಗಿತ್ತು. ನಕ್ಷೆ ತಯಾರಿಸುವ ಸಂದರ್ಭ ಉಳ್ಳಾಲದಿಂದ ತಲಪಾಡಿ ವರೆಗೂ ಕಾಂಡ್ಲಾ ವನ ರಾಶಿ ತುಂಬಿತ್ತು ಎಂಬುದು ದಾಖಲೆಗಳಲ್ಲಿ ಉಲ್ಲೇಖವಿದೆ.
ಪೃಕೃತಿಗೆ ವಿರುದ್ಧವಾದ ಚಟುವಟಿಕೆಗಳಿಂದ ಕೇಡುಕಾಲ
ಪ್ರಕೃತಿಗೆ ವಿರುದ್ಧವಾದ ಚಟುವಟಿಕೆಗಳು ನಡೆದಾಗ ಪ್ರಕೃತಿ ಮುನಿದಿರುವುದಕ್ಕೆ ಉಳ್ಳಾಲವೇ ಉದಾಹರಣೆ. ಕಾಂಡ್ಲಾ ವನ ಇರುತ್ತಿದ್ದರೆ ಉಳ್ಳಾಲದಲ್ಲಿ ರಸ್ತೆ, ಮನೆ, ಕಟ್ಟಡಗಳ ವಿನಾಶ ಸಂಭವಿಸುತ್ತಿರಲಿಲ್ಲ. ಇದಕ್ಕೆ ವಿಯೆಟ್ನಾಂ, ಸಿಂಗಾಪುರದಲ್ಲಿನ ಸಮುದ್ರ ತೀರಗಳೇ ಉದಾಹರಣೆ. ಉಳ್ಳಾಲದಲ್ಲಿ ಮರಳು ಗಣಿಗಾರಿಕೆಯೂ ವ್ಯಾಪಕವಾಗಿರುವುದರಿಂದ ಕಡಲ್ಕೊರೆತ ಮತ್ತಷ್ಟು ಉಲ್ಭಣಗೊಂಡಿದೆ ಎಂದರು.
ಮೆಸ್ಕಾಂನ ಕಿರಿಯ ಅಭಿಯಂತರ ನಿತೇಶ್ ಹೊಸಗದ್ದೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ಈ ಸಂದರ್ಭ ಗ್ಯಾನ್ ವೇದಾಂತ್ ಫೌಂಡೇಷನ್ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಸೂರಿಂಜೆ, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ, ಉಪಾಧ್ಯಕ್ಷರುಗಳಾದ ದಿನೇಶ್ ನಾಯಕ್, ಆರೀಫ್ ಕಲ್ಕಟ್ಟ, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಕಾರ್ಯದರ್ಶಿ ವಜ್ರ ಗುಜರನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಿವಶಂಕರ್ ಕಿದೂರು, ಆಸೀಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್, ಪತ್ರಕರ್ತೆ ಸುಶ್ಮಿತ ಸಾಮಾನಿ, ರೇಡಿಯೋ ಸಾರಂಗ್ ನ ಎಡ್ವರ್ಡ್ ಡಿ ಸೋಜ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಟ್ಬಾಲ್ ತರಬೇತುದಾರರಾದ ಸಾಜಿದ್ ಉಳ್ಳಾಲ್, ಸಮಾಜ ಸೇವಕ ಸಿರಿಲ್ ಡಿ ಸೋಜ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ನಿರೂಪಿಸಿದರು. ಕಾರ್ಯದರ್ಶಿ ಡಾ.ಸತೀಶ್ ಕೊಣಾಜೆ ವಂದಿಸಿದರು. ದಯಾನಂದ ಪೈ-ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು ಕಾರ್ ಸ್ಟ್ರೀಟ್ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.
Ashwath Narayanswami talks about often sea erosion in ullal Mangalore. He spoke at the press club in ullal.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm