ಬ್ರೇಕಿಂಗ್ ನ್ಯೂಸ್
07-06-24 10:38 pm Mangalore Correspondent ಕರಾವಳಿ
ಮಂಗಳೂರು, ಜೂನ್ 7: ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಹೇಳಿಕೊಳ್ಳಲು ಸರಕಾರಿ ಜಿಲ್ಲಾಸ್ಪತ್ರೆ. ಆದರೆ ಅದು ನಡೆಯೋದು ಪೂರ್ತಿಯಾಗಿ ಖಾಸಗಿಯವರ ಕೈಯಲ್ಲಿ. ನರ್ಸ್, ಡಾಕ್ಟರ್, ಆಯಾಗಳು, ಡಿ ಗ್ರೂಪ್ ನೌಕರರೆಲ್ಲ ಖಾಸಗಿ ಕಂಪನಿಗಳ ಗುತ್ತಿಗೆ ಕಾರ್ಮಿಕರಾಗಿಯೇ ದುಡಿಯುತ್ತಿದ್ದಾರೆ. ಆಸ್ಪತ್ರೆ ನಿರ್ವಹಣೆಯ ಹೊಣೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ಹೊತ್ತುಕೊಂಡಿದ್ದರೆ, ಕೆಳಗಿನ ಹಂತದ ಕಾರ್ಮಿಕರ ಗುತ್ತಿಗೆಯನ್ನು ಬೇರೆ ಬೇರೆ ಕಂಪನಿಗಳು ವಹಿಸಿಕೊಂಡಿವೆ. ಖಾಸಗಿ ಕಂಪನಿಗಳು ಸಂಬಳವನ್ನು ವಿಳಂಬ ಮಾಡುತ್ತಿದ್ದು ತಮ್ಮನ್ನು ಸತಾಯಿಸುತ್ತಿದ್ದಾರೆಂದು ಡಿ ಗ್ರೂಪ್ ಕಾರ್ಮಿಕರು ದೂರಿದ್ದಾರೆ. ಎರಡು ತಿಂಗಳಿಂದ ಚುನಾವಣಾ ನೀತಿಸಂಹಿತೆ ಇದ್ದ ನೆಪದಲ್ಲಿ ಡಿ ಗ್ರೂಪ್ ನೌಕರರು ಸಂಬಳ ಇಲ್ಲದೆ ಪರಿತಪಿಸುವ ಸ್ಥಿತಿಯಾಗಿದೆ.
900 ಬೆಡ್ ಸಾಮರ್ಥ್ಯದ ವೆನ್ಲಾಕ್ ಆಸ್ಪತ್ರೆಯಲ್ಲಿ 198 ಮಂದಿ ಡಿ ಗ್ರೂಪ್ ನೌಕರರಿದ್ದಾರೆ. ವಾರ್ಡ್ ಒಳಗೆ ನರ್ಸ್ ಗಳಿಗೆ ಸಹಾಯಕರು, ರೋಗಿಗಳಿಗೆ ಸಹಾಯಕರಾಗಿ, ಅವರ ಶುಶ್ರೂಷೆ ಮಾಡುವುದು, ಆಯುಷ್ಮಾನ್ ಬಿಲ್ಲಿಂಗ್ ಸೆಂಟರಲ್ಲಿ ಕೆಲಸ ಮಾಡುವವರೆಲ್ಲ ಡಿ ಗ್ರೂಪ್ ನೌಕರ ವಿಭಾಗದಲ್ಲಿದ್ದಾರೆ. ಇವರನ್ನು ಬೆಂಗಳೂರು ಮೂಲದ ಡಿಟೆಕ್ಟ್ ವೆಲ್ ಸಂಸ್ಥೆಯವರು ಗುತ್ತಿಗೆ ಪಡೆದಿದ್ದಾರೆ. ಆದರೆ ಈ ಕಂಪನಿಗೆ ನೀಡಲಾದ ಒಂದು ವರ್ಷದ ಟೆಂಡರ್ ಜನವರಿ 31ಕ್ಕೆ ಮುಗಿದಿದ್ದು, ಫೆಬ್ರವರಿ ತಿಂಗಳಲ್ಲಿ ಟೆಂಡರ್ ಕರೆದಿದ್ದಾಗ ಇದೇ ಕಂಪನಿ ಮಾತ್ರ ಬಿಡ್ ಹಾಕಿತ್ತು. ಬಿಡ್ ಸಂದರ್ಭದಲ್ಲಿ ಎಂಟು ಪರ್ಸೆಂಟ್ ಕಮಿಷನ್ ಹೆಚ್ಚುವರಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರಿಂದ ಜಿಲ್ಲಾಧಿಕಾರಿ ಒಪ್ಪಿಗೆ ನೀಡದೆ ಮರು ಟೆಂಡರ್ ಕರೆಯುವಂತೆ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರಿಗೆ ಸೂಚನೆ ನೀಡಿದ್ದರು.
ಆನಂತರ, ಮಾರ್ಚ್ ಎರಡನೇ ವಾರದಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಮರು ಟೆಂಡರ್ ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ, ಮುಂದಿನ ಟೆಂಡರ್ ಪ್ರಕ್ರಿಯೆ ಆಗೋ ವರೆಗೂ ಅಂದರೆ ಜೂನ್ ಕೊನೆ ವರೆಗೂ ಇದೇ ಕಂಪನಿಗೆ ಗುತ್ತಿಗೆ ಮುಂದುವರಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಈ ಮಧ್ಯೆ ತನ್ನ ಟೆಂಡರ್ ಒಪ್ಪಿಕೊಂಡಿಲ್ಲ ಎನ್ನುವ ಕಾರಣಕ್ಕೋ ಏನೋ ಬೆಂಗಳೂರಿನ ಡಿಟೆಕ್ಟ್ ವೆಲ್ ಕಂಪನಿಯವರು ಮಾರ್ಚ್ 31ಕ್ಕೆ ಗುತ್ತಿಗೆ ಕೊನೆಗೊಳಿಸುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಾಯಿ ಸೆಕ್ಯುರಿಟಿ ಎನ್ನುವ ಸಂಸ್ಥೆಯವರು ಡಿ ಗ್ರೂಪ್ ನೌಕರರ ಗುತ್ತಿಗೆಯನ್ನು ಹೊಂದಿದ್ದರು. ಕಳೆದ ಬಾರಿ ಬೆಂಗಳೂರಿನ ಸಂಸ್ಥೆ ಬಂದು ಕಡಿಮೆ ಕಮಿಷನ್ ಮೊತ್ತಕ್ಕೆ ಟೆಂಡರ್ ಪಡೆದು ವೆನ್ಲಾಕ್ ಸಂಸ್ಥೆಗೆ ಎಂಟ್ರಿಯಾಗಿತ್ತು.
ತಿಂಗಳಿಗೆ ಅಂದಾಜು 40 ಲಕ್ಷದ ವರೆಗೆ ಮೊತ್ತವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಡಿಟೆಕ್ಟ್ ವೆಲ್ ಕಂಪನಿಗೆ ನೀಡುತ್ತಿದೆ. ಕಾರ್ಮಿಕ ಇಲಾಖೆಯ ಮಾರ್ಗದರ್ಶಿ ಪ್ರಕಾರ, ಕಾರ್ಮಿಕರಿಗೆ ಪಿಎಫ್, ಇಎಸ್ಐ ಸೌಲಭ್ಯವನ್ನೂ ನೀಡುತ್ತಿದೆ. ಕಳೆದ ಎರಡು ತಿಂಗಳಲ್ಲಿ ಚುನಾವಣೆ ನೀತಿಸಂಹಿತೆಯ ಕಾರಣಕ್ಕೆ ಸಂಬಳದಲ್ಲಿ ವ್ಯತ್ಯಯ ಆಗಿದ್ದು ಹೌದು. ಆದರೆ, ಆರೋಗ್ಯ ಇಲಾಖೆಯಿಂದ ಗುತ್ತಿಗೆ ವಹಿಸಿಕೊಂಡ ಕಂಪನಿಗೆ ಹಣ ಸಂದಾಯ ಆಗುತ್ತಿದೆ. ಟೆಂಡರ್ ಪ್ರಕ್ರಿಯೆ ವಿಚಾರದಲ್ಲಿ ಸ್ವಲ್ಪ ವಿಳಂಬ ಆಗಿದ್ದರಿಂದ ತೊಂದರೆ ಆಗಿದೆ. ಮುಂದಿನ ವಾರದಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಜೆಸಿಂತಾ ತಿಳಿಸಿದ್ದಾರೆ.
Mangalore's Wenlock Hospital is a government district hospital. But it is entirely in the hands of private individuals. Nurses, doctors, nannies, D group employees are all working as contract workers of private companies enter.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm