ಬ್ರೇಕಿಂಗ್ ನ್ಯೂಸ್
17-07-24 09:58 am Mangalore Correspondent ಕರಾವಳಿ
ಮಂಗಳೂರು, ಜುಲೈ 17: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ಮತ್ತು ಮುಂಬೈ, ಬೆಂಗಳೂರಿಗೆ ಪ್ರಯಾಣಿಸುವ ವಿಮಾನಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಏರ್ ಇಂಡಿಯಾ ಮತ್ತು ಇಂಡಿಗೋ ಸಂಸ್ಥೆಯಿಂದ ಪ್ರತಿದಿನದ ವಿಮಾನ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಮಂಗಳೂರಿನಿಂದ ಜೆದ್ದಾಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಎಪ್ರಿಲ್ 3ರಿಂದ ವಾರಕ್ಕೊಮ್ಮೆ ಸಂಚರಿಸುತ್ತಿದೆ. ಇದೀಗ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಅಬುಧಾಬಿಗೆ ಈಗ ಇರುವ ವಾರದ ನಾಲ್ಕು ದಿನಗಳ ಬದಲು ಏರ್ ಇಂಡಿಯಾದಿಂದ ಪ್ರತಿದಿನ ವಿಮಾನ ವ್ಯವಸ್ಥೆಗೆ ಮುಂದಾಗಿದೆ. ಜುಲೈ 22ರಂದು ರಾತ್ರಿ 8.15ಕ್ಕೆ ಅಬುಧಾಬಿಯಿಂದ ಐಎಕ್ಸ್ 819 ಹೆಸರಿನ ವಿಮಾನ ಸಂಚಾರ ಆರಂಭಿಸಲಿದೆ. ಈ ಹೊಸ ವಿಮಾನ ಸೋಮವಾರ, ಬುಧವಾರ, ಶುಕ್ರವಾರ ಮಂಗಳೂರಿಗೆ ಬರಲಿದೆ. ಏರ್ ಇಂಡಿಯಾ ಸಂಸ್ಥೆ ಮಂಗಳೂರಿನಿಂದ ಅಬುಧಾಬಿ, ಬೆಹ್ರೈನ್, ದುಬೈ, ದಮ್ಮಾಮ್, ದೋಹಾ, ಜೆದ್ದಾ, ಕುವೈ ಮತ್ತು ಮಸ್ಕತ್ ನಡುವೆ ನೇರ ವಿಮಾನ ವ್ಯವಸ್ಥೆ ಹೊಂದಿದೆ.
ಇದೇ ವೇಳೆ, ಇಂಡಿಗೋ ಸಂಸ್ಥೆ ಕೂಡ ಮಂಗಳೂರಿನಿಂದ ಅಬುಧಾಬಿಗೆ ಪ್ರತಿದಿನದ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದೆ. ಆಗಸ್ಟ್ 9ರಿಂದ ಪ್ರತಿ ದಿನ ಸಂಚಾರ ಆರಂಭಿಸುವ ಬಗ್ಗೆ ಇಂಡಿಗೋ ಸುಳಿವು ನೀಡಿದೆ. ದುಬೈ- ಮಂಗಳೂರು ನಡುವೆ ವಾರದಲ್ಲಿ ನಾಲ್ಕು ದಿನ ಇಂಡಿಗೋ ವಿಮಾನ ಸಂಚಾರ ಇದೆ. ಹೊಸತಾಗಿ ಆಗಸ್ಟ್ 9ರಿಂದ ಅಬುಧಾಬಿಯಿಂದ ಸಂಜೆ 4 ಗಂಟೆಗೆ 6ಇ 1443 ವಿಮಾನ ಹೊರಡಲಿದ್ದು, ಮಂಗಳೂರಿನಿಂದ ಅದೇ ದಿನ ರಾತ್ರಿ 9.40ಕ್ಕೆ 6ಇ 1442 ಹೆಸರಿನ ವಿಮಾನ ಹೊರಡಲಿದೆ.
ಇದೇ ವೇಳೆ, ದೇಸೀಯವಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಂಗಳೂರಿನಿಂದ ಬೆಂಗಳೂರಿಗೆ ಮತ್ತೊಂದು ಹೆಚ್ಚುವರಿ ವಿಮಾನವನ್ನು ಜುಲೈ 22ರಿಂದ ಆರಂಭಿಸಿದೆ. ಐಎಕ್ಸ್ 1789 ಹೆಸರಿನ ಏರ್ ಇಂಡಿಯಾ ವಿಮಾನ ಬೆಂಗಳೂರಿನಿಂದ ಮಂಗಳೂರಿಗೆ ಸಂಜೆ 6.45ಕ್ಕೆ ತಲುಪಲಿದ್ದು, ಇದು ಸೋಮವಾರ, ಬುಧವಾರ ಮತ್ತು ಶುಕ್ರವಾರ ಇದೇ ಸಮಯಕ್ಕೆ ಸಂಚಾರ ನಡೆಸಲಿದೆ. ಇದೇ ವೇಳೆ, ಐಎಕ್ಸ್ 1780 ಹೆಸರಿನ ವಿಮಾನ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ 7.05ಕ್ಕೆ ಮಂಗಳೂರಿನಿಂದ ಬೆಂಗಳೂರು ಹೊರಡಲಿದೆ.
ಜುಲೈ 16ರಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮುಂಬೈನಿಂದ ಮಂಗಳೂರಿಗೆ ಡೈಲಿ ಪ್ರಯಾಣ ನಡೆಸಲಿದೆ. ಐಎಕ್ಸ್ 1295 ಹೆಸರಿನ ವಿಮಾನವು ಮಧ್ಯಾಹ್ನ 12.30ಕ್ಕೆ ಮುಂಬೈನಿಂದ ಹೊರಡಲಿದ್ದು, 2.05ಕ್ಕೆ ಮಂಗಳೂರು ತಲುಪಲಿದೆ. ಐಎಕ್ಸ್ 1296 ಹೆಸರಿನ ಮತ್ತೊಂದು ವಿಮಾನವು ಮಂಗಳೂರಿನಿಂದ ಅಪರಾಹ್ನ 2.45ಕ್ಕೆ ಹೊರಡಲಿದ್ದು, ಸಂಜೆ 4.25ಕ್ಕೆ ಮುಂಬೈ ತಲುಪಲಿದೆ. ಇದರೊಂದಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ 25 ಶೇಕಡಾ ಏರಿಕೆ ಆದಂತಾಗಲಿದೆ. ಸದ್ಯ ವಾರದಲ್ಲಿ 276 ವಿಮಾನಗಳ ಸಂಚಾರ ಇದ್ದರೆ, ಆಗಸ್ಟ್ 9ರ ವೇಳೆಗೆ ಇದರ ಸಂಖ್ಯೆ 344 ಆಗಲಿದೆ.
The mangaluru international airport has further increased the number of flights to gulf countries and to Mumbai and Bengaluru. Daily flight arrangements have been made by Air India and IndiGo.
20-09-25 10:57 pm
HK News Desk
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm