ಬ್ರೇಕಿಂಗ್ ನ್ಯೂಸ್
12-10-24 12:45 pm Udupi Correspondent ಕರಾವಳಿ
ಉಡುಪಿ, ಅ.12: ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಅಧಿಕಾರಿಯೆಂಬ ಹೆಸರಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ವಿಶೇಷ ದರ್ಶನ ವ್ಯವಸ್ಥೆ ಮಾಡಿಕೊಂಡ ಪ್ರಸಂಗ ನಡೆದಿದ್ದು ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅ.9ರಂದು ಉದಯ್ ಹೆಸರಿನ ವ್ಯಕ್ತಿ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಅವರಿಗೆ ಕರೆ ಮಾಡಿದ್ದು, ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ. ನಾವು ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದ. ಅದರಂತೆ ಅ.9ರಂದು ಭಾರತ ಸರಕಾರ ಎಂದು ಬರೆದ ಇನ್ನೋವಾ ಕಾರಿನಲ್ಲಿ ಆಗಮಿಸಿದ ಡಾ| ಉದಯ್ ಹಾಗು ಕುಟುಂಬಸ್ಥರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಅ. 10ರಂದು ಬೆಳಗ್ಗೆ ವಿಶೇಷ ದರ್ಶನ ಮಾಡಿಸಲಾಗಿತ್ತು.
ಆದರೆ ಅವರ ವರ್ತನೆಯಿಂದ ಅನುಮಾನಗೊಂಡು ವಿಚಾರಿಸಿದಾಗ ಸೂಕ್ತ ಉತ್ತರವನ್ನು ನೀಡದೇ ತೆರಳಿದ್ದಾರೆ. ಪ್ರಧಾನ ಮಂತ್ರಿಗಳ ವೆಬ್‌ಸೈಟ್ ಪರಿಶೀಲಿಸಿದಾಗ ಇವರ ಬಗ್ಗೆ ಸಮರ್ಪಕ ಮಾಹಿತಿ ದೊರೆತಿಲ್ಲ. ಕೇಂದ್ರ ಸರಕಾರದ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಶ್ರೀ ಮಠಕ್ಕೆ ಆಗಮಿಸಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಠದ ಮ್ಯಾನೇಜರ್ ನಂದನ್ ದೂರು ನೀಡಿದ್ದು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A case has been filed against an individual who posed as the parliamentary chief secretary of the Prime Minister's Office (PMO) and obtained a special darshan of Lord Krishna at the Sri Krishna Math in Udupi.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 03:26 pm
Bangalore Correspondent
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm