ಬ್ರೇಕಿಂಗ್ ನ್ಯೂಸ್
27-02-25 10:31 pm Mangalore Correspondent ಕರಾವಳಿ
ಮಂಗಳೂರು, ಫೆ.27: ಅಂಕೋಲಾ ಬಳಿಯ ರಾಮನಗುಳಿ ಎಂಬಲ್ಲಿ ಮಂಗಳೂರಿಗೆ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ಒಂದೂವರೆ ಕೋಟಿ ರೂಪಾಯಿ ಹಣ ದೋಚಿದ ಪ್ರಕರಣದಲ್ಲಿ ಕಾರವಾರ ಪೊಲೀಸರು ಮಂಗಳೂರಿನ ನಟೋರಿಯಸ್ ತಲ್ಲತ್ ಗ್ಯಾಂಗಿನ ಇಬ್ಬರು ಸದಸ್ಯರನ್ನು ಬಂಧಿಸಿ ಕರೆದೊಯ್ದಿದ್ದಾರೆಂಬ ಮಾಹಿತಿ ಲಭಿಸಿದೆ.
ಜ.28ರಂದು ಅಂಕೋಲಾ ಬಳಿಯ ರಾಮನಗುಳಿ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಅನಾಥ ಕಾರು ಪತ್ತೆಯಾಗಿತ್ತು. ಹಿಂಬದಿ ಜಖಂ ಆಗಿದ್ದ ಸ್ಥಿತಿಯಲ್ಲಿದ್ದ ಕಾರಿನಲ್ಲಿ 1.14 ಕೋಟಿ ನಗದು ಪತ್ತೆಯಾಗಿತ್ತು. ಘಟನೆ ಬಗ್ಗೆ ಬೆನ್ನತ್ತಿದ ಪೊಲೀಸರಿಗೆ ಕಾರು ಮಂಗಳೂರಿನ ಜುವೆಲ್ಲರಿ ಮಾಲೀಕ ರಾಜೇಶ ಪವಾರ್ ಎಂಬವರದ್ದೆಂದು ತಿಳಿದುಬಂದಿತ್ತು. ಕೆಲವು ದಿನಗಳ ಬಳಿಕ ರಾಜೇಶ್ ಪವಾರ್ ಮತ್ತು ಕಾರಿನ ಚಾಲಕರು ಅಂಕೋಲಾ ಠಾಣೆಗೆ ತೆರಳಿ ದರೋಡೆ ಆಗಿರುವ ಬಗ್ಗೆ ದೂರು ನೀಡಿದ್ದರು.
ಜುವೆಲ್ಲರಿ ಬಂಗಾರವನ್ನು ಬೆಳಗಾವಿಯಲ್ಲಿ ವ್ಯಕ್ತಿಯೊಬ್ಬರಿಗೆ ನೀಡಿ, ಅಲ್ಲಿಂದ 2.80 ಕೋಟಿ ನಗದು ಹಣವನ್ನು ಹಿಂದೆ ತರುತ್ತಿದ್ದಾಗ ಅಂಕೋಲಾದಲ್ಲಿ ಅಡ್ಡಗಟ್ಟಿದ್ದ ತಂಡವೊಂದು ಚಾಲಕರಿಗೆ ಹಲ್ಲೆಗೈದು ಹಣವನ್ನು ದೋಚಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಚಾಲಕರಿಬ್ಬರನ್ನು ತನಿಖೆ ನಡೆಸಿದ್ದು ಕೆಲವು ಮಾಹಿತಿ ಹೊರಬಿದ್ದಿತ್ತು. ಇದೀಗ ಮಂಗಳೂರು ಹೊರವಲಯದ ಅಡ್ಯಾರ್, ಬಜಾಲ್ ನಲ್ಲಿ ಸಕ್ರಿಯವಾಗಿರುವ ತಲ್ಲತ್ ಗ್ಯಾಂಗ್ ಸದಸ್ಯರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಗ್ಯಾಂಗ್ ಪ್ರಮುಖರು ತಲೆಮರೆಸಿಕೊಂಡಿದ್ದಾರೆ.
Ankola cash Robbery case, two from Mangalore Talat gang arrested by police over cash robbery. The recovery of ₹ 1.15 crore in cash from a Hyundai Creta found abandoned in a forest near Karwar in coastal Karnataka on January 28 this year has revealed a case of robbery of ₹ 1.80 crore in cash and spotlighted gold smuggling rackets in the region.
27-02-25 05:50 pm
HK News Desk
Forest Fire, Kanakapura, Bangalore: ಒಣಹುಲ್ಲು...
27-02-25 05:48 pm
ಕುಂಭಮೇಳಕ್ಕೆ ಹೋಗಿರೋದು ತಪ್ಪಾದ್ರೆ ಡಿಕೆಶಿ ಅವರನ್ನು...
27-02-25 03:28 pm
DK Shivakumar, BJP, Amit Shah, congress: ಡಿಕೆ...
27-02-25 01:46 pm
ಸಿಎಂಗೆ ಕ್ಲೀನ್ ಚಿಟ್ ಕೊಟ್ಟರೂ, ಮುಡಾ ಹಗರಣದ ಬಗ್ಗೆ...
26-02-25 10:43 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
27-02-25 11:07 pm
Mangalore Correspondent
Kotekar Robbey case, Bhaskar Belchada, Saheb...
27-02-25 10:48 pm
Talat Gang Mangalore, Ankola Robbery case: ಅಂ...
27-02-25 10:31 pm
Mangalore News; ನಿವೃತ್ತ ಸರಕಾರಿ ನೌಕರರಿಗೆ 7ನೇ ವ...
27-02-25 10:09 pm
Yeddyurappas, Ravindra shetty, Mangalore: ಬಿಎ...
27-02-25 07:09 pm
26-02-25 10:48 pm
HK News Desk
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm