ಬ್ರೇಕಿಂಗ್ ನ್ಯೂಸ್
03-03-25 03:00 pm Mangalore Correspondent ಕರಾವಳಿ
ಮಂಗಳೂರು, ಮಾ.3: ಸಿಐಎಸ್ಎಫ್ ಮಹಿಳಾ ಅಧಿಕಾರಿಯಾಗಿರುವ ಯುವತಿಯೊಬ್ಬಳು ತನ್ನನ್ನು ಪ್ರೀತಿಸಿ ದೈಹಿಕ ಸಂಬಂಧ ಬೆಳೆಸಿ ಮೋಸ ಮಾಡಿದ್ದಾಳೆಂದು ಆರೋಪಿಸಿ ಉತ್ತರ ಪ್ರದೇಶ ಮೂಲದ ಯುವಕನೊಬ್ಬ ಮಂಗಳೂರಿನಲ್ಲಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಗಾಜಿಪುರ ನಿವಾಸಿ, ಚೆನ್ನೈಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಅಭಿಷೇಕ್ ಸಿಂಗ್ (40) ಎಂಬಾತ ಮಂಗಳೂರಿನ ರಾವ್ ಅಂಡ್ ರಾವ್ ಸರ್ಕಲ್ ನಲ್ಲಿರುವ ಲಾಡ್ಜ್ ಒಂದರಲ್ಲಿ ಎರಡು ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃತ್ಯಕ್ಕೂ ಮುನ್ನ ಸುದೀರ್ಘ 20 ನಿಮಿಷಗಳ ವಿಡಿಯೋ ಮಾಡಿದ್ದು ತನ್ನ ಸಾವಿಗೆ ಆಕೆಯೇ ಕಾರಣ ಎಂದು ಹೇಳಿ ವಿಡಿಯೋವನ್ನು ಇನ್ ಸ್ಟಾ ಗ್ರಾಮಿನಲ್ಲಿ ಅಪ್ಲೋಡ್ ಮಾಡಿದ್ದಾನೆ.
ಸಿಐಎಸ್ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಎಂದು ಹೇಳಲಾಗುತ್ತಿರುವ ಹರ್ಯಾಣ ಮೂಲದ ಮೋನಿಕಾ ಸಿಹಾಗ್ ಎಂಬಾಕೆ ತನಗೆ ಮೋಸ ಮಾಡಿದವಳು ಎಂದು ಅಭಿಷೇಕ್ ಆರೋಪ ಮಾಡಿದ್ದಾನೆ. ಮಂಗಳೂರಿನಲ್ಲಿ ಕಂಪನಿಯ ಹೆಸರಲ್ಲಿ ಎಕ್ಸಿಬಿಷನ್ ಒಂದಕ್ಕೆ ಆಗಮಿಸಿದ್ದ ಅಭಿಷೇಕ್ ಸಿಂಗ್, ತಾನು ಪ್ರೀತಿಸುತ್ತಿದ್ದ ಯುವತಿ ಮೋಸ ಮಾಡಿದ್ದಾಳೆಂದು ನೊಂದುಕೊಂಡು ಸಾವಿಗೆ ಶರಣಾಗಿದ್ದಾನೆ.
ಒಂದೂವರೆ ವರ್ಷಗಳ ಹಿಂದೆ ಜಾಲತಾಣದಲ್ಲಿ ಫ್ರೆಂಡ್ ಆಗಿದ್ದ ಆಕೆಯೊಡನೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೆ. ಮೊದಲು ಆಕೆಗೆ ಮದುವೆಯಾಗಿರುವುದನ್ನು ಮುಚ್ಚಿಟ್ಟಿದ್ದಳು. ಆನಂತರ, ಮದುವೆ ಆಗಿರುವುದು ಮತ್ತು ಮಗು ಇರೋದು ತಿಳಿದುಬಂದಿತ್ತು. ಆದರೆ ತನ್ನ ಗಂಡ ಸರಿ ಇಲ್ಲ, ನಿನ್ನನ್ನೇ ಮದುವೆಯಾಗುತ್ತೇನೆಂದು ಹೇಳಿ ನಂಬಿಸಿದ್ದಳು. ನಾವು ಲಿವಿಂಗ್ ರಿಲೇಶನ್ ಹೊಂದಿದ್ದೆವು. ಆದರೆ ಪ್ರೀತಿಯ ನೆಪದಲ್ಲಿ ತನಗೆ ಮೋಸ ಮಾಡಿದ್ದಾಳೆ. ತನ್ನಿಂದ ದೈಹಿಕ ಸುಖ, ಆರ್ಥಿಕ ಲಾಭ ಪಡೆದು ಮೋಸ ಮಾಡಿದ್ದಾಳೆ. ಆಗೆ ಹಲವರ ಜೊತೆಗೆ ಇದೇ ರೀತಿಯ ಸಂಬಂಧ ಇಟ್ಟುಕೊಂಡಿರುವುದು ತಿಳಿದುಬಂದಿದೆ.
ಮೋನಿಕಾಗೆ ಎಂಟು ಲಕ್ಷದಷ್ಟು ಮೌಲ್ಯದ ಚಿನ್ನಾಭರಣ ತೆಗೆದುಕೊಟ್ಟಿದ್ದೇನೆ. ರಾತ್ರಿಯಲ್ಲಿ ನಗ್ನ ವಿಡಿಯೋಗಳನ್ನು ಕಳಿಸಿ ಸೆಕ್ಸ್ ಗೆ ಆಹ್ವಾನಿಸುತ್ತಿದ್ದಳು. ಆಕೆ ಒಂದು ರೀತಿಯಲ್ಲಿ ವೇಶ್ಯೆಯಾಗಿದ್ದು, ಹಲವರೊಂದಿಗೆ ಮಲಗಿದ್ದಾಳೆ. ಇದೆಲ್ಲವನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಮುಗ್ಧ ಪ್ರೀತಿಯನ್ನು ಬದಿಗೊತ್ತಿ ಮೋಸ ಮಾಡಿದ್ದಾಳೆ. ಆಕೆಯನ್ನು ಹಾಗೆಯೇ ಬಿಡಬಾರದು, ಈ ವಿಡಿಯೋ ನೋಡಿದ ನನ್ನ ಬಂಧುಗಳು ಆಕೆಯನ್ನು ಗುಂಡಿಟ್ಟು ಸಾಯಿಸಬೇಕು. ಪೊಲೀಸ್ ಅಧಿಕಾರಿಗಳು ಇದೇ ವಿಡಿಯೋ ಮತ್ತು ನನ್ನ ಮೊಬೈಲ್ ನಲ್ಲಿರುವ ಆಕೆಯ ವಿಡಿಯೋಗಳನ್ನು ಆಧರಿಸಿ ಕೇಸು ದಾಖಲಿಸಬೇಕು. ಆಕೆ ಇದೇ ರೀತಿ ಹಲವರಿಗೆ ಮೋಸ ಮಾಡಿದ್ದಾಳೆ ಎಂದು ವಿಡಿಯೋದಲ್ಲಿ ಅಭಿಷೇಕ್ ಹೇಳಿಕೊಂಡಿದ್ದಾನೆ. ಮೋನಿಕಾ ಸಿಂಗ್, ಗುಜರಾತಿನ ಅಹ್ಮದಾಬಾದ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ ಎಂದು ಅಭಿಷೇಕ್ ಹೇಳಿಕೊಂಡಿದ್ದಾನೆ. ಘಟನೆ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A 40-year-old man from Chennai has tragically taken his own life in a lodge in Mangalore. In a video he uploaded prior to his death, he accused a woman named Monica Siyag, a CISF Commandant, of cheating him in love. The deceased has been identified as Abishek Singh. According to reports, the man alleged that Monica Siyag not only deceived him but also had married someone else and is raising a child. In the emotional video, he expressed feelings of despair and blamed her for his decision to end his life.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm