ಬ್ರೇಕಿಂಗ್ ನ್ಯೂಸ್
14-03-25 09:39 pm Mangalore Correspondent ಕರಾವಳಿ
ಮಂಗಳೂರು, ಮಾ.14 : ದೇಶದ ಹತ್ತು ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ದೇಶದಲ್ಲಿ ಸೇನೆ, ರೈಲ್ವೇಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಮುಸ್ಲಿಮರು ಹೊಂದಿದ್ದಾರೆ. ಕರ್ನಾಟಕದ ಬಜೆಟ್ ನಲ್ಲಿ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ 4500 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಲವ್ ಜಿಹಾದ್ ಹೆಸರಲ್ಲಿ ಹಿಂದು ಯುವತಿಯರನ್ನು ಟಾರ್ಗೆಟ್ ಮಾಡಿ ಮುಸ್ಲಿಂ ಜನಸಂಖ್ಯೆ ಹೆಚ್ಚಿಸುತ್ತಿದ್ದಾರೆ. ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಲು ಮತ್ತು ಹಿಂದು ರಾಷ್ಟ್ರದ ಸ್ಥಾಪನೆ ಕಾರ್ಯಕ್ಕೆ ವೇಗ ನೀಡಲು ಬಂಟ್ವಾಳದಲ್ಲಿ ಮಾ.16ರಂದು ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನ ಆಯೋಜಿಸಲಾಗಿದೆ.
ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ್ದು ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ಅಧಿವೇಶನ ನಡೆಸುತ್ತಿದ್ದೇವೆ. ಬಿಸಿ ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಮಾ.16ರಂದು ಕಾರ್ಯಕ್ರಮ ನಡೆಯಲಿದ್ದು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಹಿಂದು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಕರಾವಳಿ ಜಿಲ್ಲೆಗಳ ವ್ಯಾಪ್ತಿಯ 150ರಷ್ಟು ವಕೀಲರು, ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಹಿರಿಯ ವಕೀಲ ಅರುಣ್ ಶ್ಯಾಮ್, ಅದಮಾರು ಮಠದ ಈಶಪ್ರಿಯ ಸ್ವಾಮೀಜಿ, ಒಡಿಯೂರು, ಮಾಣಿಲ ಸೇರಿದಂತೆ ಕರಾವಳಿಯ ವಿವಿಧ ಮಠಗಳ ಸ್ವಾಮೀಜಿಗಳು, ಸನಾತನ ಸಂಸ್ಥೆಯ ಧರ್ಮ ಪ್ರಸಾರಕ ಸಂತ ರಮಾನಂದ ಗೌಡ, ದೇವಸ್ಥಾನಗಳ ವಿಶ್ವಸ್ತರು ಭಾಗವಹಿಸಲಿದ್ದಾರೆ.
ಎಡ ಪಂಥೀಯರು ಇಕೋ ಸಿಸ್ಟಮ್ ಮಾಡಿರುವ ರೀತಿ ಹಿಂದು ಇಕೋ ಸಿಸ್ಟಮ್ ಮಾಡಬೇಕಾಗಿದೆ. ದೇಶ-ವಿದೇಶದಲ್ಲಿ ಹಿಂದುಗಳ ಮೇಲೆ ದಾಳಿಯಾದರೆ ಅದನ್ನು ಖಂಡಿಸಿ, ಪ್ರತಿಭಟನೆ ನಡೆಯಬೇಕಾಗಿದೆ. ಕರ್ನಾಟಕದ ಬಜೆಟ್ ನಲ್ಲಿ ಒಂದು ಕೋಮಿಗೆ ಅತಿಯಾಗಿ ಅನುದಾನ ಕೊಡುವುದನ್ನು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಬಹುದಾಗಿದೆ. ರಾಜ್ಯದಲ್ಲಿ ಒಂದು ಲಕ್ಷ ಎಕರೆ ಭೂಮಿ ವಕ್ಫ್ ಕೈಯಲ್ಲಿದ್ದು ಸಿರಿವಂತ ಸ್ಥಿತಿಯಲ್ಲಿದೆ. ಆದರೆ ಆ ಭೂಮಿಯನ್ನು ರಕ್ಷಿಸುವುದಕ್ಕಾಗಿ ರಾಜ್ಯ ಸರಕಾರ 150 ಕೋಟಿ ಅನುದಾನ ಕೊಟ್ಟಿದೆ. ಮುಸ್ಲಿಂ ಕಾಲನಿ ಅಭಿವೃದ್ಧಿಗೆ ಒಂದು ಸಾವಿರ ಕೋಟಿ, ಮುಸ್ಲಿಂ ಇಮಾಮರ ವೇತನ ಹೆಚ್ಚಿಸಿದೆ.
ರಾಜ್ಯದಲ್ಲಿ 34500 ದೇವಸ್ಥಾನಗಳು ಸರ್ಕಾರದ ಮುಜರಾಯಿ ಇಲಾಖೆ ಅಧೀನದಲ್ಲಿದ್ದರೂ, ಸಿ ಗ್ರೇಡ್ ದೇವಸ್ಥಾನಗಳ ಅರ್ಚಕರಿಗೆ ಸಂಬಳ ಇಲ್ಲ. ಇದು ಯಾಕೆ ಕೊಡುತ್ತಾ ಇಲ್ಲವೆಂದು ಕೇಳಬೇಕಾಗಿದೆ. ಹಿಂದುಗಳಲ್ಲಿ ಮಾತ್ರ ಜನಸಂಖ್ಯಾ ನಿಯಂತ್ರಣ ಇದೆ, ಮುಸ್ಲಿಮರಿಗೆ ಜನಸಂಖ್ಯೆ ನಿಯಂತ್ರಣ ಯಾಕೆ ಮಾಡಿಲ್ಲ, ರಿಸರ್ಚ್ ಪ್ರಕಾರ, 2050ರಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಮುಸ್ಲಿಂ ಜನರಿರುವ ದೇಶ ಭಾರತ ಆಗಲಿದೆ. ಇದನ್ನೆಲ್ಲ ಚರ್ಚಿಸಬೇಕಾಗಿದೆ ಎಂದು ಹೇಳಿದರು. ಅಧಿವೇಶನದಲ್ಲಿ ಭಾಗವಹಿಸಲು ಇಚ್ಚಿಸುವವರು 7204082652 ನಂಬರಿಗೆ ಸಂಪರ್ಕ ಮಾಡಬಹುದು ಎಂದರು. ಸುದ್ದಿಗೋಷ್ಟಿಯಲ್ಲಿ ಹಿಂದು ಯುವಸೇನೆಯ ಕಿರಣ್ ರೈ, ಉದ್ಯಮಿ ಎಂ.ಜೆ. ಶೆಟ್ಟಿ, ವಕೀಲ ಈಶ್ವರ್ ಕೊಟ್ಟಾರಿ, ಜನಜಾಗೃತಿ ಸಮಿತಿಯ ಚಂದ್ರ ಮೊಗವೀರ ಇದ್ದರು.
Hindu Rashtra Provincial Conference Set for March 16 in BC Road says Mohan Gowda in Mangalore. The Karnataka government has allocated a substantial Rs. 4500 crore in the state budget aimed at the welfare of a specific community. Critics have labelled this decision as an act of appeasement, while supporters argue it is an essential step towards addressing economic disparities.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm