Mangalore, Swimming pool, Death, Madikeri: ಚಿಕ್ಕಮಗಳೂರು ಟೂರ್ ಹೋಗಿ ಸ್ವಿಮ್ಮಿಂಗ್ ಪೂಲಿನಲ್ಲಿ ಡೈವ್ ಮಾಡಲೆತ್ನಿಸಿದ್ದ ಮಡಿಕೇರಿ ಯುವಕ ; ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು 

24-03-25 01:35 pm       Mangalore Correspondent   ಕರಾವಳಿ

ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಟೂರ್ ಹೋಗಿದ್ದ ವೇಳೆ ಕೊಡಗಿನ ಕುಶಾಲನಗರ ಮೂಲದ ಯುವಕನೊಬ್ಬ ಸ್ವಿಮ್ಮಿಂಗ್ ಪೂಲ್ ನಲ್ಲಿ ತಲೆ ಕೆಳಗಾಗಿಸಿ ಡೈವ್ ಮಾಡಿದ್ದು ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.  

ಮಂಗಳೂರು, ಮಾ.24 : ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಟೂರ್ ಹೋಗಿದ್ದ ವೇಳೆ ಕೊಡಗಿನ ಕುಶಾಲನಗರ ಮೂಲದ ಯುವಕನೊಬ್ಬ ಸ್ವಿಮ್ಮಿಂಗ್ ಪೂಲ್ ನಲ್ಲಿ ತಲೆ ಕೆಳಗಾಗಿಸಿ ಡೈವ್ ಮಾಡಿದ್ದು ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.  

ಕುಶಾಲನಗರದ ಮೊಬೈಲ್ ಗ್ಯಾಲರಿ ಶಾಪ್ ಮಾಲೀಕ ನಿಶಾಂತ್ (32) ಮೃತ ಯುವಕ. ಈಜಾಟಕ್ಕಾಗಿ ಈಜುಕೊಳದ ಯುವಕ ಮೇಲಿನಿಂದ ತಲೆ ಕೆಳಗಾಗಿಸಿ ಹಾರಿದ್ದು ಈ  ಸಂದರ್ಭ ತಲೆಗೆ ತಳಪಾಯ ಡಿಕ್ಕಿ ಹೊಡೆದು ಈಜುಕೊಳದಲ್ಲೇ ಅಸ್ವಸ್ಥರಾಗಿದ್ದಾರೆ. ನೀರಿನಲ್ಲಿ ಅಂಗಾತ ಬಿದ್ದ ಅವರನ್ನು ಕೂಡಲೇ ಸ್ನೇಹಿತರು ಮೇಲಕ್ಕೆತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವು ಕಂಡಿದ್ದಾರೆ.  ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.


 
ಕೊನೆ ಕ್ಷಣದಲ್ಲಿ ನಿಶಾಂತ್ ನೀರಿಗೆ ಹಾರುವುದು ಮತ್ತು ಕೂಡಲೇ ಸ್ನೇಹಿತರು ಎತ್ತಿ ಆರೈಕೆ ಮಾಡಿರುವುದು ದೃಶ್ಯದಲ್ಲಿ ದಾಖಲಾಗಿದೆ.

Madikeri Youth Dies in Mangalore hospital after Attempting Dive in Swimming Pool During Chikmagalur Tour. In a tragic incident, a young man from Madikeri lost his life while on a holiday in Chikmagalur. The victim, identified as Nishant, was the owner of a mobile gallery shop in Kushalnagar.