ಬ್ರೇಕಿಂಗ್ ನ್ಯೂಸ್
14-05-25 06:33 pm Mangalore Correspondent ಕರಾವಳಿ
ಮಂಗಳೂರು, ಮೇ 14 : ಗ್ರಾಪಂ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತಿಗೊಂಡು ಮೃತಪಟ್ಟಿದ್ದ ತನ್ನ ಗಂಡನ ಪಿಂಚಣಿ ಮೊತ್ತವನ್ನು ಕೇಳಲು ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಒಡ್ಡಿದ್ದ ಬಂಟ್ವಾಳ ತಾಲೂಕಿನ ಇಬ್ಬರು ಕಂದಾಯ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದೂರುದಾರ ಮಹಿಳೆಯ ಗಂಡ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಒಂದರಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದು 2023ರ ಅಕ್ಟೋಬರ್ ತಿಂಗಳಿನಲ್ಲಿ ನಿವೃತ್ತಿ ಹೊಂದಿದ್ದರು. ಆನಂತರ, 2024ರ ಜೂನ್ ತಿಂಗಳಿನಲ್ಲಿ ಅವರು ದಿಢೀರ್ ಮೃತಪಟ್ಟಿದ್ದರು. ಗಂಡನ ಹೆಸರಿಗೆ ಬರುತ್ತಿದ್ದ ಪಿಂಚಣಿ ಮೊತ್ತವನ್ನು ತನ್ನ ಹೆಸರಿಗೆ ಮಾಡಿಸಲು ಮಹಿಳೆ ಬಂಟ್ವಾಳ ತಾಲೂಕು ಕಂದಾಯ ಇಲಾಖೆ ಮುಖ್ಯ ಲೆಕ್ಕಿಗ ಭಾಸ್ಕರ್ ಎಂಬವರ ಬಳಿಗೆ ತೆರಳಿದ್ದರು. ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿರಲಿಲ್ಲ. ಇತ್ತೀಚೆಗೆ ಮಹಿಳೆಯ ಖಾತೆಗೆ ಗಂಡನ ಪಿಂಚಣಿ ಮೊತ್ತ ಜಮೆ ಮಾಡಿಸಿದ್ದು ಪ್ರತಿಯಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೆ ಗೌಡ ಬಿ.ಎನ್. ಎಂಬವರು ತಲಾ 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇದರಿಂದ ನೊಂದ ಮಹಿಳೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರಂತೆ, ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೆ ಗೌಡ ಲಂಚದ ಹಣ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನೂ ಬಂಧಿಸಿದ್ದಾರೆ.
Mangalore The Karnataka Lokayukta, Mangaluru division, has taken into custody two officials from the Bantwal taluk treasury office after they were caught red-handed accepting a bribe from a complainant. The complainant’s husband, who was working as a secretary in a gram panchayat under Bantwal taluk, had retired in October 2023. He
09-06-26 07:04 pm
HK News Staffer
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
08-06-26 09:11 pm
HK News Staffer
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
09-06-26 08:58 pm
ರಿಚರ್ಡ್ | Richard
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
ಮಳೆಗಾಲ ಹಿನ್ನೆಲೆ ; ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ...
08-06-26 09:21 pm
ಮಂಗಳೂರಿನಲ್ಲಿ ಡಿಎಚ್ಓಗೆ ಸಚಿವ ಯು.ಟಿ ಖಾದರ್ ಕ್ಲಾಸ್...
08-06-26 04:55 pm
UT Khader, Mangalore: ಎಂಬಿಬಿಎಸ್ ಆದವರಿಗೆ ಕಲಿತ...
07-06-26 03:38 pm
09-06-26 05:03 pm
HK News Staffer
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 98 ಲಕ್ಷ ರೂ. ದೋಚಿದ...
08-06-26 10:41 pm
ಹೃದಯಾಘಾತ ; ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗದೆ ಕೊಕ್ಕ...
08-06-26 04:42 pm