ಬ್ರೇಕಿಂಗ್ ನ್ಯೂಸ್
30-05-25 12:56 pm Mangalore Correspondent ಕರಾವಳಿ
ಮಂಗಳೂರು, ಮೇ 30 : ಕರಾವಳಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಮಂಗಳೂರಿನ ಉಳ್ಳಾಲ ಭಾಗದಲ್ಲಿ ಮೇಘಸ್ಫೋಟ ಆಗಿರುವ ಶಂಕೆ ವ್ಯಕ್ತವಾಗಿದೆ. ಹವಾಮಾನ ಇಲಾಖೆಯವರು ನೀಡಿರುವ ಮಾಹಿತಿ ಪ್ರಕಾರ, ಉಳ್ಳಾಲ, ಕೋಟೆಕಾರು ಆಸುಪಾಸಿನಲ್ಲಿ 28ರಿಂದ 31 ಸೆಂಟಿ ಮೀಟರ್ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಇತರ ಕಡೆಗಳಲ್ಲಿ 8-10 ಸೆಮೀ ಮಳೆಯಾಗಿದ್ದರೆ, ಉಳ್ಳಾಲದಲ್ಲಿ ಮಾತ್ರ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಿದ್ದಿದೆ.
ಮೇ 30ರ ಬೆಳಗ್ಗೆ 8.30ರ ವರೆಗಿನ ಮಳೆ ಮಾಹಿತಿ ಪ್ರಕಾರ, ಉಳ್ಳಾಲ- ಕೋಟೆಕಾರಿನಲ್ಲಿ 31 ಸೆಮೀ(12 ಮಿಮೀ), ತಲಪಾಡಿಯಲ್ಲಿ 28, ಕಿನ್ಯಾದಲ್ಲಿ 28, ಉಳ್ಳಾಲದ ಮುನ್ನೂರಿನಲ್ಲಿ 26 ಸೆಮೀ ಮಳೆಯಾಗಿದೆ. ಮಂಗಳೂರಿನ ಬಾಳ ಸುರತ್ಕಲ್ 17, ಸುಳ್ಯ ತಾಲೂಕಿನ ಸಂಪಾಜೆಯಲ್ಲಿ 14, ಬಂಟ್ವಾಳ ಬಾಳೆಪುಣಿಯಲ್ಲಿ 14, ಬೋಳ್ಯಾರಿನಲ್ಲಿ 13, ವಿಟ್ಲಪದವು 13, ಐಕಳ 13, ಹರೇಕಳ 12 ಮಂಚಿ, ಇರಾ, ನೀರುಮಾರ್ಗದಲ್ಲಿ 11-12 ಸೆಮೀ ಮಳೆಯಾಗಿದೆ. ಉಳಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ, ಬೆಳ್ತಂಗಡಿ, ಉಪ್ಪಿನಂಗಡಿ, ಬಂಟ್ವಾಳ ಆಸುಪಾಸಿನಲ್ಲಿ 8ರಿಂದ 10 ಸೆಂಟಿ ಮೀಟರ್ ವರೆಗೆ ಮಳೆಯಾಗಿದೆ.
ಹವಾಮಾನ ಇಲಾಖೆಯ ಮಾಹಿತಿ ಅನುಸರಿಸಿ ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ, ಉಳ್ಳಾಲದಲ್ಲಿ ಮಾತ್ರ ಅತಿ ಹೆಚ್ಚು ಅಂದರೆ ಒಂದೇ ಕಡೆ ವಿಪರೀತ ಮಳೆ ನಿನ್ನೆ ರಾತ್ರಿಯಿಂದೀಚೆಗೆ ಬಿದ್ದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನಿನ್ನೆ ರಾತ್ರಿ ಸಹಜವಾಗಿದ್ದ ಕಡೆಗಳಲ್ಲಿ ಇಂದು ಬೆಳಗ್ಗೆ ನೆರೆ ಬಂದಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ತೇಲಿ ಹೋಗಿವೆ. ಕುಂಪಲ ಬೈಪಾಸ್ ನಲ್ಲಿ ಇದೇ ಮೊದಲ ಬಾರಿಗೆ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಅದೇ ಪ್ರದೇಶದಲ್ಲಿ ಥಾರ್ ಮತ್ತು ಬ್ರೀಜಾ ಕಾರುಗಳು ನೀರಿನಲ್ಲಿ ತೇಲಿ ಹೋಗಿದ್ದಲ್ಲದೆ, ರಸ್ತೆಯಲ್ಲಿ ಬಂದು ಬಿದ್ದಿದೆ. ಇದು ಮಳೆಯ ತೀವ್ರತೆ ಎಷ್ಟಿತ್ತು ಎನ್ನುವುದನ್ನು ಸೂಚಿಸುತ್ತಿದೆ.
ಉಳ್ಳಾಲ ಬೈಲಿನಲ್ಲಿ ಅಪಾರ್ಟ್ಮೆಂಟ್ ಸೇರಿದಂತೆ ಹಲವು ಕಡೆಗಳಲ್ಲಿ ನೀರು ನಿಂತಿದೆ. ಪಿಲಾರ್, ಸೋಮೇಶ್ವರದಲ್ಲಿ ಮನೆಗಳು ಅರ್ಧಕ್ಕೆ ಮುಳುಗಡೆಯಾಗಿವೆ. ಹಿರಿಯರು ಹೇಳುವ ಪ್ರಕಾರ, ಇಷ್ಟೊಂದು ಮಳೆ ನೀರು ಬಂದಿದ್ದನ್ನು ಈ ಹಿಂದೆ ನೋಡಿದ್ದಿಲ್ಲ. ಇತಿಹಾಸದಲ್ಲಿ ಕಂಡರಿಯದಷ್ಟು ಮಳೆಯಾಗಿದ್ದು, ನೆರೆ ಪರಿಸ್ಥಿತಿ ಉಂಟಾಗಿದೆ ಎಂದು ಹೇಳುತ್ತಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಈ ರೀತಿ ವಿಪರೀತ ಮಳೆಯಾಗುವುದು, ಮೇಘಸ್ಫೋಟ ಆಗುವುದು ಸಾಮಾನ್ಯವಾಗಿತ್ತು. ಅದರಿಂದಾಗಿ ಭೂಕುಸಿತಗಳೂ ಆಗುತ್ತಿದ್ದವು. ಇದೇ ಮೊದಲ ಬಾರಿಗೆ ಸಮುದ್ರ ತೀರದ ಪ್ರದೇಶದಲ್ಲಿ ಇಂಥ ಸ್ಥಿತಿಯಾಗಿದೆ. ಮೇಘಸ್ಫೋಟ ಆಗಿದೆಯೇ ಎನ್ನುವ ಬಗ್ಗೆ ತಜ್ಞರು ಅಧಿಕೃತ ಮಾಹಿತಿ ನೀಡಿಲ್ಲ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮೇ 30 ಮತ್ತು 31ರಂದು ಎರಡು ದಿನವೂ ಕರ್ನಾಟಕ ಮತ್ತು ಕೇರಳ ಕರಾವಳಿಯಲ್ಲಿ ವಿಪರೀತ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಕೇರಳದ ಆಳಪ್ಪುಳ, ಇಡುಕ್ಕಿ, ಕಣ್ಣೂರು, ಕಾಸರಗೋಡು, ಕೊಲ್ಲಂ, ಕೊಟ್ಟಾಯಂ, ತೃಶ್ಶೂರು, ಪಾಲಕ್ಕಾಡ್, ಪತ್ತನಂತಿಟ್ಟ, ತಿರುವನಂತಪುರಂ, ತೃಶ್ಶೂರು, ವಯನಾಡ್ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
Unprecedented Rain in Mangalore's Ullal! A suspected cloudburst dumped 31 cm rain in one night, flooding low-lying areas. In Kumpala, a parked car was swept away. Homes, roads submerged. IMD issues red alert for more heavy rain. Stay safe! 🌧️⚠️ #Mangalore #UllalRain #rain pic.twitter.com/dzUPioiE2n
— Headline Karnataka (@hknewsonline) May 30, 2025
Mangalore Ullal witnessed an unprecedented deluge on Thursday night, with rainfall touching a staggering 31 cm in a single location, raising suspicions of a cloudburst. This extreme weather event caused flash floods in several low-lying areas and disrupted normal life across the coastal town. In nearby Kumpala, a parked car was swept away by the gushing waters, highlighting the severity of the situation. Locals reported water entering homes and businesses, with several roads rendered impassable due to waterlogging and debris.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm