ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಬಂದ ಬೆಂಗಳೂರಿನ ಪ್ರವಾಸಿ ನೀರುಪಾಲು

25-12-20 12:12 pm       Mangalore Correspondent   ಕರಾವಳಿ

ಸೈಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಯೊಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮಲ್ಪೆ, ಡಿ.25 : ಇಲ್ಲಿನ ಸೈಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಯೊಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಬೆಂಗಳೂರು ಕನಕಪುರ ನಿವಾಸಿ ಮಹೇಶ್ (43) ಮೃತರು ಎಂದು ಗುರುತಿಸಲಾಗಿದೆ. ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಗುರುವಾರ ಮಲ್ಪೆ ಸೈಂಟ್ ಮೇರಿ ದ್ವೀಪಕ್ಕೆ ವಿಹಾರಕ್ಕಾಗಿ ಬಂದಿದ್ದರು. ಸಂಜೆ ವೇಳೆಗೆ ಕುಟುಂಬ ನೀರಿನಲ್ಲಿ ಆಡುತ್ತಿದ್ದಾಗ ಮಹೇಶ್ ಹೆದ್ದೆರೆಗಳ ಮಧ್ಯೆ ಮುಳುಗಿದ್ದಾರೆ.

ಕೂಡಲೇ ಸ್ಥಳೀಯ ಹನುಮಾನ್ ಬೋಟಿನ ಸಿಬ್ಬಂದಿ ಗಮನಿಸಿದ್ದು ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿ ಉಡುಪಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

Man drowns in St Mary's Island in Udupi. The deceased has been identified as Mahesh (43) from Bangalore.