ಬ್ರೇಕಿಂಗ್ ನ್ಯೂಸ್
30-09-25 06:48 pm Mangalore Correspondent ಕರಾವಳಿ
ಉಳ್ಳಾಲ, ಸೆ.30: ಪಿಡಿಓ ದರ್ಜೆಯ ಅಧಿಕಾರಿ ನವೀನ್ ಹೆಗ್ಡೆ ಎಂಬವರನ್ನ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತರನ್ನಾಗಿ ನೇಮಿಸಿ ಜಿಲ್ಲಾಡಳಿತ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಜಿಲ್ಲಾಧಿಕಾರಿ ದರ್ಶನ್ ಅವರು ನವೀನ್ ಹೆಗ್ಡೆಯವರನ್ನ ಪ್ರಭಾರ ಪೌರಾಯುಕ್ತ ಹುದ್ದೆಯಿಂದ ವಿಮುಕ್ತಿಗೊಳಿಸಿ ಆದೇಶಿಸಿದ್ದಾರೆ. ಆ ಜಾಗಕ್ಕೆ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜಮೂರ್ತಿ ಎಂಬವರನ್ನು ನೇಮಿಸಲಾಗಿದೆ.
ಉಳ್ಳಾಲ ನಗರಸಭೆಯಲ್ಲಿ ಕಂದಾಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನವೀನ್ ಹೆಗ್ಡೆ ಅವರನ್ನ ಉಳ್ಳಾಲ ನಗರಸಭೆಯಲ್ಲಿ ಖಾಲಿಯಾಗಿದ್ದ ಪೌರಾಯುಕ್ತ ಹುದ್ದೆಗೆ ಪ್ರಭಾರ ನೆಲೆಯಲ್ಲಿ ನೇಮಿಸಿ ಕಳೆದ ಮೇ 31 ರಂದು ಜಿಲ್ಲಾಡಳಿತ ಆದೇಶಿಸಿತ್ತು. ಆದರೆ ಈ ರೀತಿ ಕಿರಿಯ ಶ್ರೇಣಿಯ ಅಧಿಕಾರಿಯನ್ನು ಜವಾಬ್ದಾರಿಯುತ ಹುದ್ದೆಗೆ ನೇಮಿಸಿದ್ದಕ್ಕೆ ಆಕ್ಷೇಪ ಉಂಟಾಗಿತ್ತು. ರಾಜಕೀಯ ಪ್ರಭಾವ ಇದ್ದ ಕಾರಣ ಬದಲಾವಣೆ ಆಗಿರಲಿಲ್ಲ.
ಈ ನಡುವೆ, ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತರನ್ನಾಗಿ ಪಿಡಿಒ ದರ್ಜೆಯ ಅಧಿಕಾರಿಯನ್ನು ನೇಮಿಸಿದ್ದನ್ನು ಆಕ್ಷೇಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರೂ ಕ್ರಮ ಜರಗದೇ ಇರುವುದು ಆಕ್ಷೇಪಕ್ಕೆ ಕಾರಣವಾಗಿತ್ತು. ಇದಲ್ಲದೆ, ನವೀನ್ ಹೆಗ್ಡೆಯನ್ನ ತಕ್ಷಣವೇ ಅವರ ಮಾತೃ ಇಲಾಖೆಗೆ ಕಳುಹಿಸಬೇಕೆಂದು ಉಳ್ಳಾಲ ನಗರಸಭೆಯಲ್ಲಿ ಕಳೆದ ಆಗಸ್ಟ್ 19 ರಂದು ನಡೆದ ಲೋಕಾಯುಕ್ತ ಅದಾಲತ್ತಲ್ಲಿ ವಕೀಲರಾದ ಅಫ್ಝಲ್ ಎಂಬವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ನವೀನ್ ಹೆಗ್ಡೆಯವರು ಸರಕಾರದ ಯಾವುದೇ ಸುತ್ತೋಲೆ, ಆದೇಶ, ಟಿಪ್ಪಣಿಗಳಿಲ್ಲದೆ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತಂತೆ ಆಗಸ್ಟ್ 5ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಜರಗಿಸದ್ದನ್ನು ಆಕ್ಷೇಪಿಸಿ ವಕೀಲ ಅಪ್ಝಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಪ್ಝಲ್ ಅವರ ದೂರನ್ನ ಪುರಸ್ಕರಿಸಿದ ಉಚ್ಚ ನ್ಯಾಯಾಲಯವು ನವೀನ್ ಹೆಗ್ಡೆ ಅವರ ನೇಮಕಾತಿ ಆದೇಶಕ್ಕೆ ತಡೆ ನೀಡಿದೆ.
ಸರಕಾರದ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಪ್ರಕಾರ ಸ್ಥಳೀಯಾಡಳಿತದ ಪೌರಾಯುಕ್ತರು ವರ್ಗಾವಣೆ ಅಥವಾ ತರಬೇತಿಗೆ ನಿಯೋಜನೆಗೊಂಡಲ್ಲಿ ಪ್ರಭಾರ ಪೌರಾಯುಕ್ತ ಸ್ಥಾನಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಅಥವಾ ಸಹಾಯಕ ಅಭಿಯಂತರರನ್ನ ನೇಮಿಸಬೇಕೆಂಬ ಆದೇಶವಿದೆ. ಆದರೆ ಈ ಆದೇಶಗಳನ್ನ ಧಿಕ್ಕರಿಸಿ ಪಿಡಿಒ ದರ್ಜೆಯ ನವೀನ್ ಹೆಗ್ಡೆ ಅವರನ್ನ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತ ಸ್ಥಾನದಲ್ಲಿ ಕುಳ್ಳಿರಿಸಿರೋದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಉಳ್ಳಾಲ ನಗರಸಭೆಯಲ್ಲಿ ಈ ಹಿಂದೆಯೂ ಸಮುದಾಯ ದರ್ಜೆಗೆ ಸೇರಿದ ಮಹಿಳೆಯೊಬ್ಬರು ಪ್ರಭಾರ ಪೌರಾಯುಕ್ತೆ ಸ್ಥಾನದಲ್ಲಿ ಕುಳಿತು ಸಾಕಷ್ಟು ಭ್ರಷ್ಟಾಚಾರ ಮಾಡಿದ್ದ ಬಗ್ಗೆ ಆರೋಪ ಕೇಳಿಬಂದಿತ್ತು. ಆದರೆ ಈಕೆಯ ವಿರುದ್ಧ ಯಾರೂ ಕಾನೂನು ರೀತಿ ಸಮರ ಮಾಡಿರಲಿಲ್ಲ. ಕಡೆಗೆ ಸ್ಪೀಕರ್ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರ ಆಕ್ರೋಶಕ್ಕೆ ಗುರಿಯಾದ ಮಹಿಳಾ ಅಧಿಕಾರಿ ಉಳ್ಳಾಲದಿಂದಲೇ ಎತ್ತಂಗಡಿಯಾಗಿದ್ದರು.
The Karnataka High Court has stayed the appointment of Naveen Hegde, a PDO-rank officer, as in-charge Commissioner of Ullal City Municipality. Following the order, Deputy Commissioner Darshan relieved Hegde from the post and appointed Assistant Executive Engineer Tejamurthy in his place. The petition, filed by advocate Afzal, argued that appointing a junior PDO officer to a key municipal post violated government circulars, which mandate that only Assistant Engineers or Assistant Executive Engineers can hold charge. The court’s decision is seen as a setback to the DC’s inaction and a pushback against politically influenced postings.
30-09-25 07:31 pm
Bangalore Correspondent
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
ಹೈದ್ರಾಬಾದ್ ನಲ್ಲಿ ಕಾಂತಾರ ಪ್ರಚಾರ ; ರಿಷಬ್ ಕನ್ನಡದ...
29-09-25 07:59 pm
30-09-25 04:08 pm
HK News Desk
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
ಪರಿಶಿಷ್ಟರ ಮತಾಂತರ ಜಾಲ ; 'ಪವಾಡ ಚಿಕಿತ್ಸೆ' ಆಮಿಷ ಒ...
29-09-25 10:52 pm
ಏಷ್ಯಾ ಕಪ್ ಫೈನಲ್ ಗೆದ್ದರೂ ಕಪ್ ಸ್ವೀಕರಿಸದೆ ಪಾಕಿಗೆ...
29-09-25 03:54 pm
ಕಾಲ್ತುಳಿತ ಘಟನೆ ಆಕಸ್ಮಿಕ ಅಲ್ಲ, ಪಿತೂರಿ ! ಕಲ್ಲು ತ...
28-09-25 10:02 pm
30-09-25 06:48 pm
Mangalore Correspondent
ಧರ್ಮಸ್ಥಳ ಪ್ರಕರಣ, ಕೋರ್ಟಿಗೆ ಚಿನ್ನಯ್ಯ ಹೊಸ ಹೇಳಿಕೆ...
29-09-25 11:02 pm
Mithun Rai, Pilinalikes 10th Anniversary, Man...
29-09-25 07:15 pm
ಮಂಗಳೂರು ದಸರಾ-2025 ರಾಜ್ಯ ಮಟ್ಟದ ಮ್ಯಾರಥಾನ್ ; ಪುರ...
28-09-25 08:12 pm
ಯುವಜನರಲ್ಲಿ ಹೃದಯದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್...
27-09-25 07:35 pm
29-09-25 01:24 pm
Mangalore Correspondent
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm
Robbery in Mangalore: ಒಂದೂವರೆ ಕೋಟಿ ಮೌಲ್ಯದ ಚಿನ...
28-09-25 12:25 pm