ಬ್ರೇಕಿಂಗ್ ನ್ಯೂಸ್
19-11-25 01:01 pm Mangalore Correspondent ಕರಾವಳಿ
ಮಂಗಳೂರು, ನ.19 : ಹೆಲ್ತ್ ಇನ್ಶುರೆನ್ಸ್ ಇದ್ದರೂ ಮೂಗಿನ ಸರ್ಜರಿಗೊಳಗಾದ ವ್ಯಕ್ತಿಗೆ ವಿಮಾ ಸೌಲಭ್ಯ ನಿರಾಕರಿಸಿದ ಕಂಪನಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯ ಚಾಟಿ ಬೀಸಿದ್ದು ಆಸ್ಪತ್ರೆ ವೆಚ್ಚದ ಜೊತೆಗೆ 25 ಸಾವಿರ ದಂಡ ಮತ್ತು ಹತ್ತು ಸಾವಿರ ವಕೀಲರ ವೆಚ್ಚವನ್ನು ಪಾವತಿಸುವಂತೆ ಆದೇಶ ಮಾಡಿದೆ.
ಮಂಗಳೂರಿನ ವ್ಯಕ್ತಿಯೊಬ್ಬರು ಎಸ್ ಬಿಐ ಜನರಲ್ ಇನ್ಶುರೆನ್ಸ್ ನಿಂದ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಡೆದಿದ್ದು 2018ರ ಆಗಸ್ಟ್ 1ರಿಂದ ಪ್ರತಿ ವರ್ಷ 12,500 ರೂ.ನಂತೆ ಪಾವತಿಸುತ್ತ ಬಂದಿದ್ದರು. 2024ರ ಆಗಸ್ಟ್ 9ರಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಬಲದ ಮೂಗಿನ ಒಳಗಡೆ ಉಸಿರಾಟಕ್ಕೆ ಸಮಸ್ಯೆ ಇದೆಯೆಂದು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೆಲ್ತ್ ಇನ್ಶೂರೆನ್ಸ್ ಇದ್ದುದರಿಂದ ಆಸ್ಪತ್ರೆ ವೆಚ್ಚ ಪಾವತಿಗಾಗಿ ಕಂಪನಿಯಿಂದ ಕ್ಲೈಮ್ ಕೇಳಿದ್ದರು.
ಆದರೆ ಮೂಗಿನ ಶಸ್ತ್ರಚಿಕಿತ್ಸೆ ಕಾಸ್ಮೆಟಿಕ್ ಸರ್ಜರಿ ವಿಭಾಗಕ್ಕೆ ಸೇರುವುದರಿಂದ ಅದಕ್ಕೆ ಇನ್ಶುರೆನ್ಸ್ ಸೌಲಭ್ಯ ಇರುವುದಿಲ್ಲ ಎಂದು ಹೇಳಿ ಎಸ್ ಬಿಐ ಜನರಲ್ ಇನ್ಶುರೆನ್ಸ್ ಕಂಪನಿಯವರು ವಿಮೆ ಪಾವತಿಗೆ ನಿರಾಕರಿಸಿದ್ದರು. ಈ ಬಗ್ಗೆ ವ್ಯಕ್ತಿ ತನ್ನ ಸರ್ಜರಿ ನಡೆಸಿದ ವೈದ್ಯರಿಂದ ಮೂಗಿನ ಶಸ್ತ್ರಚಿಕಿತ್ಸೆ ಕಾಸ್ಮೆಟಿಕ್ ಸರ್ಜರಿ ಅಲ್ಲವೆಂದು ಸರ್ಟಿಫಿಕೇಟ್ ನೀಡಿದರೂ ಕಂಪನಿ ಅಧಿಕಾರಿಗಳು ಒಪ್ಪಿರಲಿಲ್ಲ. ಬಳಿಕ ಆಸ್ಪತ್ರೆ ವೆಚ್ಚ 58,435 ರೂಪಾಯಿ ಆಗಿದ್ದನ್ನು ಸ್ವತಃ ಭರಿಸಿದ್ದ ವ್ಯಕ್ತಿ, ಈ ವಿಚಾರವನ್ನು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.
ಹೆಲ್ತ್ ಪಾಲಿಸಿ ಪ್ರಕಾರ, ಎಲ್ಲ ರೀತಿಯ ಆಸ್ಪತ್ರೆ ವೆಚ್ಚ ಮತ್ತು ಒಳರೋಗಿ ಚಿಕಿತ್ಸೆಗೆ ವಿಮೆ ಅನ್ವಯ ಆಗಬೇಕಿತ್ತು. ಅಲ್ಲದೆ, 12,500 ವಾರ್ಷಿಕ ಪ್ರೀಮಿಯಂ ಪ್ರಕಾರ 5 ಲಕ್ಷದ ವರೆಗೆ ಚಿಕಿತ್ಸಾ ವೆಚ್ಚ ವಿಮಾ ಕಂಪನಿ ಭರಿಸಬೇಕಿತ್ತು. ಈ ಪ್ರಕರಣದಲ್ಲಿ ಕಂಪನಿ ಅಧಿಕಾರಿಗಳು ಮೂಗಿನ ಸರ್ಜರಿಯನ್ನು ಕಾಸ್ಮೆಟಿಕ್ ಎನ್ನುವ ಕಾರಣಕ್ಕೆ ವಿಮಾ ಭದ್ರತೆಯಿಂದ ಹೊರಗಿಟ್ಟಿದ್ದರು.
ವೈದ್ಯರ ಪ್ರಮಾಣಪತ್ರ ಮತ್ತು ಸರ್ಜರಿಗೊಳಗಾದ ವ್ಯಕ್ತಿಯ ಪರವಾಗಿ ವಕೀಲ ಗೋವಿಂದರಾಜ್ ಕೋಣಾಜೆ ನಡೆಸಿದ ವಾದವನ್ನು ಪುರಸ್ಕರಿಸಿದ ಮಂಗಳೂರಿನ ಗ್ರಾಹಕರ ನ್ಯಾಯಾಲಯ ಆಸ್ಪತ್ರೆ ವೆಚ್ಚ 58,434 ರೂ.ವನ್ನು ಆ ದಿನಾಂಕದಿಂದ ವ್ಯಕ್ತಿಗೆ ಪಾವತಿಸುವ ದಿನಾಂಕದ ವರೆಗೆ 6 ಶೇಕಡಾ ಬಡ್ಡಿಯೊಂದಿಗೆ ಪಾವತಿಸಬೇಕು. ಆರೋಗ್ಯ ವಿಮೆ ಕಾರಣದಿಂದ ವ್ಯಕ್ತಿಗೆ ಮಾನಸಿಕ ವೇದನೆ ನೀಡಿದ್ದಕ್ಕಾಗಿ 25 ಸಾವಿರ ಪರಿಹಾರ ಮತ್ತು 10 ಸಾವಿರ ದೂರು ಅರ್ಜಿಯ ವೆಚ್ಚವನ್ನು ನೀಡುವಂತೆಯೂ ಕೋರ್ಟ್ ಆದೇಶ ಮಾಡಿದೆ.
The Dakshina Kannada District Consumer Court has ruled against SBI General Insurance for refusing to cover the medical expenses of a Mangaluru resident who underwent nasal surgery. Although the customer had been paying an annual group health insurance premium of ₹12,500 since 2018, the company rejected his claim by labelling the nasal procedure as a “cosmetic surgery.”
19-11-25 02:16 pm
Bangalore Correspondent
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
Deputy CM D.K. Shivakumar: ರಾಜ್ಯದ ಐದು ಕಡೆಗಳಲ್...
17-11-25 07:25 pm
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
19-11-25 11:10 am
HK News Desk
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
19-11-25 01:01 pm
Mangalore Correspondent
ಅಡ್ಯಾರ್ ಕಣ್ಣೂರಿನಲ್ಲಿ ಮಂಗಳೂರಿಗೆ ನೀರು ಪೂರೈಸುವ ಪ...
18-11-25 10:18 pm
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am