ಏಶ್ಯನ್ ಗೇಮ್ಸ್ ನಲ್ಲಿ ಪೂವಮ್ಮಗೆ ಚಿನ್ನ ; ರಾಜ್ಯ ಸರ್ಕಾರದಿಂದ ಯಾವ್ದೇ ಬೆಂಬಲ ಸಿಕ್ಕಿಲ್ಲ, ಕನಿಷ್ಠ ಒಂದು ಕರೆ, ವಿಶಸ್ ಕೂಡ ಮಾಡಿಲ್ಲ.. ಹೆತ್ತವರ ಬೇಸರ

01-10-26 08:10 pm       HK News Staffer   ಕರಾವಳಿ

ಮಂಗಳೂರಿನ ಹೆಮ್ಮೆಯ ಕುವರಿ ಎಂ.ಆರ್ ಪೂವಮ್ಮ ಏಶ್ಯನ್ ಗೇಮ್ಸ್ 4-400 ಮೀಟರ್ಸ್ ವುಮನ್ಸ್ ರಿಲೇಯಲ್ಲಿ ಚಿನ್ನದ ಪದಕ ಪಡೆದಿದ್ದು ಇಡೀ ರಾಜ್ಯಕ್ಕೆ ಹೆಮ್ಮೆ ತರುವಂತೆ ಮಾಡಿದ್ದಾರೆ. ಏಶ್ಯನ್ ಗೇಮ್ಸ್ ಅತ್ಲೆಟಿಕ್ಸ್ ನಲ್ಲಿ ಈ ಬಾರಿ ಇವರಿಗೆ ಮಾತ್ರ ಚಿನ್ನ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಪೂವಮ್ಮ ಸಾಧನೆಯನ್ನು ನಗಣ್ಯವಾಗಿಸಿದ್ದು ಒಂದು ಪ್ರಶಂಸೆಯ ಮಾತನ್ನೂ ಆಡಿಲ್ಲ.

ಮಂಗಳೂರು, ಅ.1: ಮಂಗಳೂರಿನ ಹೆಮ್ಮೆಯ ಕುವರಿ ಎಂ.ಆರ್ ಪೂವಮ್ಮ ಏಶ್ಯನ್ ಗೇಮ್ಸ್ 4-400 ಮೀಟರ್ಸ್ ವುಮನ್ಸ್ ರಿಲೇಯಲ್ಲಿ ಚಿನ್ನದ ಪದಕ ಪಡೆದಿದ್ದು ಇಡೀ ರಾಜ್ಯಕ್ಕೆ ಹೆಮ್ಮೆ ತರುವಂತೆ ಮಾಡಿದ್ದಾರೆ. ಏಶ್ಯನ್ ಗೇಮ್ಸ್ ಅತ್ಲೆಟಿಕ್ಸ್ ನಲ್ಲಿ ಈ ಬಾರಿ ಇವರಿಗೆ ಮಾತ್ರ ಚಿನ್ನ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಪೂವಮ್ಮ ಸಾಧನೆಯನ್ನು ನಗಣ್ಯವಾಗಿಸಿದ್ದು ಒಂದು ಪ್ರಶಂಸೆಯ ಮಾತನ್ನೂ ಆಡಿಲ್ಲ.

ಈ ಬಗ್ಗೆ ಸ್ವತಃ ಪೂವಮ್ಮ ಹೆತ್ತವರು ಬೇಸರ ವ್ಯಕ್ತಪಡಿಸಿದ್ದಾರೆ. ಪೂವಮ್ಮ ತಾಯಿ ಜಾಜಿ ಮಾಧ್ಯಮದ ಮುಂದೆ ಬೇಸರ ವ್ಯಕ್ತಪಡಿಸಿದ್ದು, ಆಕೆಗೀಗ 36 ವರ್ಷ. ಕಳೆದ 20 ವರ್ಷಗಳಿಂದ ಅತ್ಲೆಟಿಕ್ಸ್ ನಲ್ಲಿ ಶ್ರಮ ಹಾಕುತ್ತಿದ್ದಾಳೆ. ಆದರೆ ರಾಜ್ಯ ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಕ್ಕಿಲ್ಲ. ಬೇರೆ ರಾಜ್ಯಗಳಲ್ಲಿ ಅತ್ಲೀಟ್ ಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಆಕೆ ಇದನ್ನು ಹೇಳಿ ತುಂಬ ಬೇಜಾರು ಮಾಡಿದ್ಲು. ನನ್ನೊಂದಿಗೆ ಇರುವವರಿಗೆ ಸಚಿವರು ಕರೆ ಮಾಡಿದ್ದಾರೆ. ಆದರೆ ನನಗೆ ಯಾರು ಕೂಡ ಫೋನ್ ಮಾಡಿಲ್ಲ ಎಂದು ಬೇಸರ ಹೇಳಿಕೊಂಡಿದ್ದಾಳೆಂದು ಜಾಜಿ ಬೇಜಾರು ಹೇಳಿಕೊಂಡರು.

ಕ್ಯಾಶ್ ಪ್ರೈಸ್ ಕೊಡುವುದು ಒಂದು ಸೈಡ್ ಇರಲಿ, ಈ ಬಾರಿ ಇವರಿಗೆ ಮಾತ್ರ ದೇಶದಲ್ಲಿ ಚಿನ್ನ ಸಿಕ್ಕಿದೆ. ಆದರೆ ರಾಜ್ಯ ಸರಕಾರದಿಂದ ಇದಕ್ಕಾಗಲೀ ಒಂದು ವಿಶಸ್ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿನವರೇ ಆಗಿದ್ದರೂ ಒಂದು ಕರೆ ಮಾಡಿಲ್ಲ. ಉತ್ತರ ಪ್ರದೇಶ, ಕೇರಳದಲ್ಲಿ ಹೆಚ್ಚು ಪ್ರೋತ್ಸಾಹ ಕೊಡುತ್ತಾರೆ, ದೊಡ್ಡ ಮೊತ್ತದ ಬಹುಮಾನ ಪ್ರಕಟಿಸಿದ್ದಾರೆ. ನಮ್ಮಲ್ಲಿ ಒಂದು ಕರೆ ಮಾಡಲು ಪುರುಸೊತ್ತು ಸಿಕ್ಕಿಲ್ಲ. 

ಪೂವಮ್ಮ ಕಠಿಣ ತರಬೇತಿಯಿಂದ ಈ ಸಾಧನೆ ಮಾಡಿದ್ದಾಳೆಂಬ ಹೆಮ್ಮೆ ನಮಗಿದೆ. ಅತ್ಲೆಟಿಕ್ಸ್ ಅನ್ನುವುದು ಆಕೆಗೆ ಫ್ಯಾಶನ್ ಆಗಿಬಿಟ್ಟಿದೆ. 3-4 ವರ್ಷಗಳಿಂದ ಮಾಡಿದ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ನಾವು ಮಧ್ಯಮ ವರ್ಗದವರಾಗಿದ್ದು, ತರಬೇತಿಗಾಗಿ ಬಹಳಷ್ಟು ಖರ್ಚು ಆಗುತ್ತದೆ. ಸರಕಾರದಿಂದ ಬೆಂಬಲ ಸಿಕ್ಕಿದರೆ ಸಾಧನೆಗೆ ಸ್ಫೂರ್ತಿಯಾಗುತ್ತದೆ. ಆದರೆ ರಾಜ್ಯ ಸರಕಾರದಿಂದ ಕನಿಷ್ಠ ಗುರುತಿಸುವ ಕೆಲಸವೂ ಆಗಿಲ್ಲ ಎನ್ನುವುದಷ್ಟೇ ಬೇಜಾರು ಎಂದು ಜಾಜಿ ಅಳಲು ಹೇಳಿಕೊಂಡಿದ್ದಾರೆ.