ಬ್ರೇಕಿಂಗ್ ನ್ಯೂಸ್
17-11-26 12:11 pm HK News Staffer ಕರಾವಳಿ
ಬೆಂಗಳೂರು, ನ.17: ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ವ್ಯವಸ್ಥೆಗಳಿಗಾಗಿ ಕರ್ನಾಟಕ ಸರ್ಕಾರವು ಜಿಎಸ್ಟಿ ಹೊರತುಪಡಿಸಿ 3.83 ಕೋಟಿ ರೂ. ಮಂಜೂರು ಮಾಡಿದೆ. ಒಂದೇ ದಿನದ ಸರ್ಕಾರಿ ಸಭೆಗಾಗಿ ಇಷ್ಟೊಂದು ದೊಡ್ಡ ಮೊತ್ತದ ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸೆಪ್ಟೆಂಬರ್ 17ರಂದು ಹೊರಡಿಸಲಾದ ಹಣಕಾಸು ಇಲಾಖೆಯ ಆದೇಶದ ಪ್ರಕಾರ, ಸಚಿವ ಸಂಪುಟ ಸಭೆಯ ಪೂರ್ವಸಿದ್ಧತೆ ಮತ್ತು ವಿವಿಧ ವ್ಯವಸ್ಥೆಗಳಿಗಾಗಿ 3,83,26,700 ರೂ. ಮಂಜೂರು ಮಾಡಲಾಗಿದೆ. ಈ ವೆಚ್ಚದಲ್ಲಿ ಸಿವಿಲ್ ಕಾಮಗಾರಿಗಳು, ಗಣ್ಯರು ಮತ್ತು ಹಿರಿಯ ಅಧಿಕಾರಿಗಳಿಗೆ ಆತಿಥ್ಯ, ಇಂಧನ, ಹೆಚ್ಚುವರಿ ವಾಹನಗಳ ಬಾಡಿಗೆ, ಸಾರಿಗೆ ವ್ಯವಸ್ಥೆ, ವೇದಿಕೆ ನಿರ್ವಹಣೆ ಸೇರಿದಂತೆ ಇತರ ಸಂಬಂಧಿತ ವ್ಯವಸ್ಥೆಗಳು ಸೇರಿವೆ.
ಎಲ್ಲ ಕಾಮಗಾರಿಗಳನ್ನು ನಿರ್ವಹಿಸುವುದು ಮತ್ತು ವ್ಯವಸ್ಥೆಗಳ ಸಮನ್ವಯದ ಜವಾಬ್ದಾರಿಯನ್ನು ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ವಿಶೇಷ ಅಂದರೆ, ಖರೀದಿ ಪ್ರಕ್ರಿಯೆಗಾಗಿ ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆಗಳ ಕಾಯ್ದೆ-1999ರ ನಿಯಮಗಳಿಂದ ವಿನಾಯಿತಿ ನೀಡಲು ಸರ್ಕಾರವು ಕಾಯ್ದೆಯ ಸೆಕ್ಷನ್ 4(ಜಿ) ನ್ನು ಅನ್ವಯಿಸಿದೆ.
ಹಣಕಾಸು ಇಲಾಖೆಯ ವೆಚ್ಚ ಕೋಶ ಹೊರಡಿಸಿರುವ ಆದೇಶದಲ್ಲಿ, ಸಮಂಜಸ ದರದಲ್ಲಿ ಗುಣಮಟ್ಟದ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ. ಸಭೆಯ ಆಯೋಜನೆಗಾಗಿ ಇತರ ವಿವಿಧ ಇಲಾಖೆಗಳ ಮೂಲಕವೂ ವೆಚ್ಚ ಮಾಡಿರುವ ಸಾಧ್ಯತೆಯಿದ್ದು, ಈ ಕುರಿತ ವಿವರಗಳು ಆದೇಶದಲ್ಲಿ ಉಲ್ಲೇಖವಾಗಿಲ್ಲ. ವಿವಿಧ ಇಲಾಖೆಗಳು ಹೆಚ್ಚುವರಿಯಾಗಿ ಮಾಡಿರಬಹುದಾದ ವೆಚ್ಚವನ್ನೂ ಪರಿಗಣಿಸಿದರೆ, ಒಂದೇ ಸಚಿವ ಸಂಪುಟ ಸಭೆ ನಡೆಸಲು ತಗುಲಿರುವ ಒಟ್ಟು ವೆಚ್ಚದ ಬಗ್ಗೆ ಮಾಹಿತಿ ಸಿಗಬಹುದು.
17-11-26 12:09 pm
HK News Staffer
ಆಟವಾಡುತ್ತಿದ್ದ ವೇಳೆ ದುರಂತ ; ಬಿಸಿ ಕೆಮಿಕಲ್ ಬಕೆಟ್...
14-11-26 09:24 pm
'ಕಾಸ್ಮೋಸ್ ಮೈಸೂರು' ದೇಶದ ಮೊದಲ ಎಲ್ಇಡಿ ಡೋಮ್ ತಾರಾಲ...
13-11-26 10:13 pm
ಬೆಂಗಳೂರು- ಮಂಗಳೂರು- ಮಡಗಾಂವ್ ವಂದೇ ಭಾರತ್ ರೈಲಿಗೆ...
13-11-26 04:23 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ವಿಡಿಯೋದಲ್ಲಿ ಕಾಣಿ...
09-11-26 07:45 pm
16-11-26 10:56 pm
Mangaluru Staffer
ಝಾಕಿರ್ ನಾಯ್ಕ್ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇ...
14-11-26 10:00 am
ಚೀನಾ ಗೂಢಚಾರಿಣಿ ಬಲೆಗೆ ಎನ್ವಿಡಿಯಾ ಸಿಇಒ? ವಿವಾಹೇತ...
09-11-26 04:45 pm
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
17-11-26 08:15 pm
HK News Staffer
ಸೌಜನ್ಯಾ ಪ್ರಕರಣ ; ಮೂವರು ತಜ್ಞ ವೈದ್ಯರ ಕಮಿಟಿ ರಚನೆ...
17-11-26 06:42 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ರೆಕಾರ್ಡ್ ಮಾಡಿದ್ದ...
17-11-26 03:15 pm
ಮಂಗಳೂರಿನ ಒಂದೇ ದಿನದ ಸಚಿವ ಸಂಪುಟ ಸಭೆಗೆ ಹಣಕಾಸು ಇಲ...
17-11-26 12:11 pm
ಸುರತ್ಕಲ್ ; ಸೂರಜ್ ಹೊಟೇಲ್, ಮೆಕ್ ಡೊನಾಲ್ಡ್ಸ್ ರೆಸ್...
16-11-26 09:58 pm
16-11-26 09:56 pm
HK News Staffer
ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ...
16-11-26 04:31 pm
ಬೇಲೂರಿನಲ್ಲಿ ಎರಡು ದಿನಗಳ ಅಂತರದಲ್ಲಿ ಮತ್ತೊಬ್ಬ ಕಾಡ...
16-11-26 02:50 pm
ಕೈಗಳನ್ನು ಚೂಡಿದಾರದ ಶಾಲಿನಿಂದ ಕಟ್ಟಿಕೊಂಡು ಮಾಬುಕಳ...
15-11-26 09:12 pm
ಬೆಂಗಳೂರಿಗೆ ಹೊರಟಿದ್ದ ಬೈಂದೂರಿನ ಸಾಫ್ಟ್ವೇರ್ ಯುವಕ...
15-11-26 09:10 pm