ಬ್ರೇಕಿಂಗ್ ನ್ಯೂಸ್
25-11-26 06:58 pm HK News Staffer ಕರಾವಳಿ
ಮಂಗಳೂರು, ನ.25: ಹಾಸನ ಪೊಲೀಸರು ಮಾಧ್ಯಮದವರಿಗೆ ನೋಟಿಸ್ ನೀಡಿರುವುದರಲ್ಲಿ ವಿಶೇಷವೇನಿಲ್ಲ. ಮಾಧ್ಯಮಗಳಲ್ಲಿ ಆ ದಾಖಲೆ ಪ್ರಸಾರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೋಟಿಸ್ ನೀಡಿದ್ದಾರೆ. ಪಿಎಸ್ಐ ಹಗರಣದಲ್ಲಿ ನನಗೆ ನೋಟಿಸ್ ಕೊಟ್ಟಿರ್ಲಿಲ್ವಾ? ಕುಮಾರ ಸ್ವಾಮಿಗೆ ವಿಚಾರಣೆಗೆ ಹಾಜರಾಗಲು ಮುಜುಗರನಾ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಬಗ್ಗೆ ಕುಮಾರಸ್ವಾಮಿ ಭ್ರಷ್ಟಾಚಾರ ಆರೋಪ ಮಾಡಿದ ಪ್ರಕರಣದಲ್ಲಿ ಪೊಲೀಸರು ಮಾಧ್ಯಮದವರಿಗೆ ನೋಟಿಸ್ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ದಾಖಲೆಗಳು ಮಾಧ್ಯಮಗಳ ಮುಂದೆ ಮೊದಲ ಬಾರಿಗೆ ಬಂದಿದ್ದು ಎಲ್ಲಿ ಎಂಬುದು ತನಿಖೆಯ ಪ್ರಮುಖ ಪ್ರಶ್ನೆ. ಮೊದಲ ಬಾರಿಗೆ ಆ ದಾಖಲೆಗಳನ್ನು ಹಾಸನದ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಲಾಗಿತ್ತು. ಮುಖ ಮುಚ್ಚಿಕೊಂಡು ಬಂದ ಅಧಿಕಾರಿಗಳಿಂದ ದಾಖಲೆಗಳನ್ನು ಪಡೆದು ಬಿಡುಗಡೆ ಮಾಡಿದ್ದಾಗಿ ಕೇಂದ್ರ ಸಚಿವರು ಹೇಳಿದ್ದರು. ದಾಖಲೆಗಳ ಮೂಲ ಯಾವುದು ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಬೇಕಿದೆ.
ಪತ್ರಿಕಾಗೋಷ್ಠಿಯಲ್ಲಿ ಯಾರೆಲ್ಲ ಉಪಸ್ಥಿತರಿದ್ದರು ಎಂಬ ಮಾಹಿತಿಯೂ ತನಿಖೆಗೆ ಅಗತ್ಯ. ಈ ಹಿಂದೆ ಪಿಎಸ್ಐ ಹಗರಣದ ವಿಚಾರದಲ್ಲೂ ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ಉಲ್ಲೇಖಿಸಿದ್ದಕ್ಕೆ ನನಗೂ ನೋಟಿಸ್ ನೀಡಲಾಗಿತ್ತು. ಮಾಧ್ಯಮದವರನ್ನು ವಿಚಾರಣೆಗೆ ಕರೆಯುವುದು ಸಾಮಾನ್ಯ ತನಿಖಾ ಪ್ರಕ್ರಿಯೆಯ ಭಾಗ. ಈಗ ವಿಚಾರಣೆಗೆ ಹಾಜರಾಗಲು ಕುಮಾರಸ್ವಾಮಿಯವರಿಗೆ ಮುಜುಗರವಾಗಿದೆ. ಹಾಗಾಗಿ ಮಾಧ್ಯಮದವರನ್ನೂ ಈ ಪ್ರಕರಣಕ್ಕೆ ಎಳೆದು ತರುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಆನೆಗಳ ಸ್ಥಳಾಂತರ ವಿಚಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಾಸಕರ ಅಸಮಾಧಾನ ಪ್ರಶ್ನೆಗೆ, ಆನೆಗಳ ಸ್ಥಳಾಂತರ ಒಂದು ಕಠಿಣ ಕಾರ್ಯಾಚರಣೆಯಾಗಿದೆ. ಆನೆಗಳ ಸ್ಥಳಾಂತರ ಸಂದರ್ಭದಲ್ಲಿ ಸಹಜವಾಗಿಯೇ ಕೆಲವು ಅನಾನುಕೂಲಗಳು ಎದುರಾಗುತ್ತವೆ. ದೊಡ್ಡ ಆನೆಗಳಿರುವುದರಿಂದ ಕಾರ್ಯಾಚರಣೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಬೇಕಾಗುತ್ತದೆ. ಆನೆಗಳು ಸಾಗುವ ಮಾರ್ಗದಲ್ಲಿರುವ ಗ್ರಾಮಗಳ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಯಾವೆಲ್ಲಾ ಗ್ರಾಮಗಳ ಮೂಲಕ ಆನೆಗಳು ಸಾಗುತ್ತವೆಯೋ ಆ ಭಾಗದ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟು ಕಾರ್ಯಾಚರಣೆ ನಡೆಸಲಾಗುತ್ತದೆ. ಸ್ಥಳಾಂತರ ಕಾರ್ಯಾಚರಣೆ ಕುರಿತು ನಮ್ಮ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಒಟ್ಟಾಗಿ ಚರ್ಚಿಸಿ ಸಮಸ್ಯೆಯನ್ನು ಸರಿಪಡಿಸಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕೆಪಿಎಸ್ಸಿ ಹಗರಣದಲ್ಲಿ ಡಿಐಜಿ ಹೆಸರಿದ್ರೂ ಸುಮ್ನೆ ಬಿಡಲ್ಲ..
ಕೆಪಿಎಸ್ಸಿ ಹಗರಣದಲ್ಲಿ ಯಾರ ಹೆಸರಿದ್ರೂ ವಿನಾಯಿತಿ ಇಲ್ಲ. ಡಿಐಜಿ ಅಥವಾ ಎಸ್ಪಿ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ತೀವಿ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಕೆಪಿಎಸ್ಸಿ ಹಗರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಕೇಳಿಬಂದಿರುವ ವಿಚಾರಕ್ಕೆ ಗೃಹ ಸಚಿವರು ಪ್ರತಿಕ್ರಿಯೆ ನೀಡಿದರು.
ಚಾರ್ಜ್ಶೀಟ್ನಲ್ಲಿ ಡಿಐಜಿ ಹೆಸರು ಉಲ್ಲೇಖವಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಚಾರ್ಜ್ಶೀಟ್ ಅನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
25-11-26 02:11 pm
HK News Staffer
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
ಬಿಸ್ಲೆರಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ;...
23-11-26 09:23 pm
ಸ್ಟಿಂಗ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್, ಜನಪ್ರತಿನಿಧಿ...
23-11-26 12:02 pm
25-11-26 11:53 am
HK News Staffer
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
25-11-26 06:58 pm
HK News Staffer
ಸೌಜನ್ಯಾ ಪ್ರಕರಣ ಅತ್ಯಂತ ಸೂಕ್ಷ್ಮ ; ವೈಜ್ಞಾನಿಕ ಆಧಾ...
25-11-26 06:29 pm
ತಣ್ಣೀರುಬಾವಿ ಬೀಚ್ ನಲ್ಲಿ ದೇಶದ ಮೊದಲ ಡೇಟಾ ಸೆಂಟರ್...
25-11-26 05:49 pm
ಜಿಲ್ಲಾ ಕೇಂದ್ರಗಳಲ್ಲಿ ಡೇ ಕೇರ್ ಸೆಂಟರ್, ಎಲ್ಲ ಜಿಲ್...
24-11-26 06:46 pm
ಕದ್ರಿ ಯುದ್ಧ ಸ್ಮಾರಕದ ಬಳಿಯ ಯುದ್ಧ ಟ್ಯಾಂಕ್ ಮೇಲೆ ಹ...
24-11-26 10:51 am
25-11-26 01:30 pm
HK News Staffer
ಕಾಪು ಬೀಚ್ ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿದ ದಾವಣ...
23-11-26 02:24 pm
ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ...
23-11-26 11:59 am
ಸತ್ತಿದ್ದಾಳೆ ಎಂದ ಮಹಿಳೆ 7 ವರ್ಷಗಳ ಬಳಿಕ ಪ್ರತ್ಯಕ್ಷ...
21-11-26 04:41 pm
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm