ನರಿಂಗಾನ ; ಮರಕ್ಕೆ ನೇಣು ಬಿಗಿದು ಯುವಕ ಆತ್ಮಹತ್ಯೆ, ಪ್ರೇಮ ವೈಫಲ್ಯ ಶಂಕೆ

05-02-21 11:30 am       Mangalore Correspondent   ಕರಾವಳಿ

ಅವಿವಾಹಿತ ಯುವಕನೊಬ್ಬ ಆತ್ಮಹತ್ಯೆಗೈದ ಘಟನೆ ನರಿಂಗಾನ‌ ಗ್ರಾಮದಲ್ಲಿ ನಡೆದಿದೆ. 

ಕೊಣಾಜೆ, ಫೆ.5: ಅವಿವಾಹಿತ ಯುವಕನೊಬ್ಬ ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ‌ ಗ್ರಾಮದಲ್ಲಿ ನಡೆದಿದೆ. 

ನರಿಂಗಾನ ಗ್ರಾಮದ ಕೊಲ್ಲರಕೋಡಿ ಶಾಲಾ ಮೈದಾನದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಬೆಳಗ್ಗೆ ಶವ ಪತ್ತೆಯಾಗಿದೆ. ಮೃತ ಯುವಕನನ್ನು ನೆತ್ತಿಲಪದವು ಸೈಟ್ ನಿವಾಸಿ ರಕ್ಷಿತ್ ಸನಿಲ್(22) ಎಂದು ಗುರುತಿಸಲಾಗಿದೆ.

ಕೊಲ್ಲರಕೋಡಿ ಪ್ರೌಢಶಾಲೆಯ ಕಚೇರಿಯ ಮುಂಭಾಗದ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೈದಿದ್ದು ರಕ್ಷಿತ್ ಅದೇ ಶಾಲೆಯ ಹಳೆ ವಿದ್ಯಾರ್ಥಿ ಆಗಿದ್ದ. ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. 

ಕೊಣಾಜೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

In an incident at Konaje police station limits, a 22-year-old youth hung himself on a tree. The deceased is identified as Rakshith Sanil (22).