ಆಟೋದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಸೆರೆ 

10-02-21 11:04 pm       Mangaluru Correspondent   ಕರಾವಳಿ

ನಗರದ ಬಂದರು ಠಾಣೆ ವ್ಯಾಪ್ತಿಯ ಗೂಡ್‌ಶೆಡ್ ಬಳಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಫೆ.10: ನಗರದ ಬಂದರು ಠಾಣೆ ವ್ಯಾಪ್ತಿಯ ಗೂಡ್‌ಶೆಡ್ ಬಳಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಸ್ಥಳೀಯ ನಿವಾಸಿ ಶೇಖ್ ಅಬೂಬಕರ್ ಮುಸಾವಿರ್ ಬಂಧಿತ ಆರೋಪಿ. ಸಿಸಿಬಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಗೂಡ್‌ಶೆಡ್ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತ ಉಳ್ಳಾಲದ ಮುಕ್ಕಚ್ಚೇರಿಯ ಉಬೈದುಲ್ಲಾ ಎಂಬಾತನಿಂದ ಖರೀದಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ 7 ಸಾವಿರ ರೂ. ಮೌಲ್ಯದ 365 ಗ್ರಾಂ ಗಾಂಜಾ, 1.50 ಲಕ್ಷ ರೂ. ಮೌಲ್ಯದ ರಿಕ್ಷಾ ಸ್ವಾಧೀನಪಡಿಸಿಕೊಳ್ಳಲಾಗಿದೆ. 

ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

A person who was selling Ganja in the Auto has been arrested at Bunder by Mangalore City Police.