ಬಿಜೈ ಕೆಎಂಸಿ ಬಳಿ ಕೊಕೇನ್ ಮಾರಾಟ ಯತ್ನ ; ಎರಡು ಲಕ್ಷ ಮೌಲ್ಯದ ಕೊಕೇನ್ ಸಹಿತ ಯುವಕನ ಬಂಧನ

14-02-21 10:16 am       Mangalore Correspondent   ಕರಾವಳಿ

ಬಿಜೈ ಕೆಎಂಸಿ ಕಾಲೇಜು ಆಸುಪಾಸಿನಲ್ಲಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಫೆ.14: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಬಿಜೈ ಕೆಎಂಸಿ ಕಾಲೇಜು ಆಸುಪಾಸಿನಲ್ಲಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ. 

ಬಂಧಿತನನ್ನು ಬೋಳಾರ ಮಾರಿಗುಡಿ ಸಮೀಪದ ನಿವಾಸಿ ಸುಪ್ರೀತ್ (35) ಎಂದು ಗುರುತಿಸಲಾಗಿದೆ. ಆತನ ಬಳಿಯಿಂದ 2 ಲಕ್ಷ ಮೌಲ್ಯದ 21.13 ಗ್ರಾಂ ಕೊಕೇನ್ ಸಹಿತ ಎರಡು ಮೊಬೈಲ್ ಫೋನ್, ಎರಡು ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

The City Police have arrested one person for peddling cocaine near KMC Bejai. Two lakhs worth of Cocaine has been seized.