ಮರಕಡ ; ಖಾಸಗಿ ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವು !

31-03-21 02:58 pm       Mangalore Correspondent   ಕರಾವಳಿ

ರಸ್ತೆ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಬಸ್ ಡಿಕ್ಕಿಯಾಗಿ ಯುವತಿ ಮೃತಪಟ್ಟ ಘಟನೆ ಮರಕಡ ಜಂಕ್ಷನ್‌ನಲ್ಲಿ ನಡೆದಿದೆ. 

ಮಂಗಳೂರು, ಮಾ.31 : ರಸ್ತೆ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಬಸ್ ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಮರಕಡ ಜಂಕ್ಷನ್‌ನಲ್ಲಿ ನಡೆದಿದೆ. 

ಕಾವೂರು ಕುಂಜತ್ ಬೈಲ್ ಜ್ಯೋತಿನಗರ ನಿವಾಸಿ ಚೆಲ್ಲಯ್ಯ ಎಂಬವರ ಪುತ್ರಿ ಪವಿತ್ರಾ (21) ಮೃತ ವಿದ್ಯಾರ್ಥಿನಿ. 

ಕಾಲೇಜು ವಿದ್ಯಾರ್ಥಿನಿಯಾಗಿದ್ದು ಬುಧವಾರ ಬೆಳಗ್ಗೆ 9 ಗಂಟೆ ವೇಳೆಗೆ ಮರಕಡ ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿಯಾಗಿದೆ. ಇದರಿಂದ ನೆಲಕ್ಕೆ ಅಪ್ಪಳಿಸಿದ ಯುವತಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 

ಘಟನೆಗೆ ಕಾರಣವಾದ ಬಸ್ಸನ್ನು ಮಂಗಳೂರು ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

21-year girl student killed after the bus runs over her while crossing the road in Marakada Mangalore. The deceased has been identified as Pavitra.