ಬ್ರೇಕಿಂಗ್ ನ್ಯೂಸ್
15-06-21 09:25 pm Mangaluru Correspondent ಕರಾವಳಿ
ಮಂಗಳೂರು, ಜೂನ್ 15: ಮರವೂರಿನ ಫಲ್ಗುಣಿ ಸೇತುವೆ ದಿಢೀರ್ ಕುಸಿದು ನಿಂತಿದ್ದು ಮಂಗಳೂರು ನಗರದಿಂದ ಏರ್ಪೋರ್ಟ್ ಸಂಪರ್ಕಿಸುವ ರಸ್ತೆಯ ಸಂಚಾರವನ್ನು ಕಡಿತಗೊಳಿಸಲಾಗಿದೆ. ಮಂಗಳೂರಿನಿಂದ ಏರ್ಪೋರ್ಟ್ ಸಂಚಾರಕ್ಕೆ ಪರ್ಯಾಯ ರಸ್ತೆಯಾಗಿ ಗುರುಪುರ - ಕೈಕಂಬ ರಸ್ತೆ ಮತ್ತು ಕುಳೂರು – ಜೋಕಟ್ಟೆಯಿಂದಾಗಿ ವಾಹನಗಳು ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಇದೇ ವೇಳೆ, ಸೇತುವೆ ಕುಸಿದು ನಿಂತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಶಾಸಕರು, ಸಂಸದರು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಸೇತುವೆಯ ಒಂದು ಪಿಲ್ಲರ್ ಕುಸಿದು ನಿಂತಿದೆ. ಇದಕ್ಕೆ ಕಾರಣವೇನೆಂದು ಇಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಉನ್ನತ ಮಟ್ಟದ ತಾಂತ್ರಿಕ ತಜ್ಞರನ್ನು ಬೆಂಗಳೂರಿನಿಂದ ಕರೆಸಲಾಗಿದ್ದು, ಪಿಲ್ಲರ್ ಮರು ಜೋಡಿಸಲು ಸಾಧ್ಯವೇ ಎನ್ನುವ ಬಗ್ಗೆ ವರದಿ ನೀಡಲಿದ್ದಾರೆ. ತಜ್ಞರ ವರದಿ ಆಧರಿಸಿ ಪಿಲ್ಲರ್ ಮರು ಜೋಡಿಸಲು ಸಾಧ್ಯವೇ ಎನ್ನುವ ಬಗ್ಗೆ ಜಿಲ್ಲಾಡಳಿತ ನಿರ್ಧರಿಸಲಿದೆ ಎಂದಿದ್ದಾರೆ.
ಪಿಲ್ಲರ್ ಮರು ಜೋಡಣೆ ಬಗ್ಗೆ ಚಿಂತನೆ
ಪಿಡಬ್ಲ್ಯುಡಿ ಇಂಜಿನಿಯರ್ ಯಶವಂತ್ ಅವರಲ್ಲಿ ಮಾಹಿತಿ ಕೇಳಿದಾಗ, ಇದು ವೆಲ್ ಮಾದರಿಯ ಪಿಲ್ಲರ್ ಆಗಿದ್ದು, ಹಳೆಯ ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿತ್ತು. 1968ರಲ್ಲಿ ಮರವೂರು ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆ ಹಳೆಯದಾಗಿದ್ದರಿಂದ ಅದಕ್ಕೆ ಪರ್ಯಾಯವಾಗಿ ಹೊಸ ಸೇತುವೆಯನ್ನು ಮಾಡಲಾಗುತ್ತಿದೆ. ಪಿಲ್ಲರ್ ಕುಸಿದು ನಿಂತಿರುವುದಕ್ಕೆ ಏನು ಕಾರಣ ಅನ್ನೋದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಅದರ ಜೊತೆಗೆ, ಪಿಲ್ಲರ್ ಎತ್ತರಿಸಲು ಸಾಧ್ಯವೇ ಎನ್ನುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದ್ದು, ವಾಹನ ಸಂಚಾರಕ್ಕೆ ಸಾಧ್ಯ ಎನ್ನುವುದಾದರೆ ಆ ಕೆಲಸವನ್ನು ಆದಷ್ಟು ಬೇಗ ಮಾಡಲಿದ್ದೇವೆ ಎಂದು ಹೇಳಿದರು.
ಸೇತುವೆ ಕುಸಿದಿರುವುದಕ್ಕೆ ಮರವೂರು ಭಾಗದಲ್ಲಿ ನಡೆಸುತ್ತಿದ್ದ ಮರಳುಗಾರಿಕೆ ಕಾರಣ ಅನ್ನೋ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸ್ಥಳಕ್ಕೆ ತೆರಳಿದ್ದ ‘ಹೆಡ್ ಲೈನ್ ಕರ್ನಾಟಕ’ಕ್ಕೆ, ಸೇತುವೆ ಕುಸಿಯಲು ಮರಳುಗಾರಿಕೆ ಮಾತ್ರ ಕಾರಣ ಅಲ್ಲ ಅನ್ನೋ ಮಾಹಿತಿಗಳು ತಿಳಿದುಬಂದಿದೆ. ಹಳೆ ಸೇತುವೆಯ ಪಕ್ಕದಲ್ಲಿ ಹೊಸ ಸೇತುವೆಯನ್ನು ಮಾಡಲಾಗುತ್ತಿದ್ದು, ಗುರುಪುರದ ಸೇತುವೆಯ ರೀತಿಯಲ್ಲೇ ಅತ್ಯಂತ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾವೂರಿನ ಮುಗರೋಡಿ ಕನ್ ಸ್ಟ್ರಕ್ಷನ್ ಗುತ್ತಿಗೆ ವಹಿಸ್ಕೊಂಡಿದ್ದು ಕೇವಲ ಮೂರೂವರೆ ತಿಂಗಳಲ್ಲಿ ಐದು ಪಿಲ್ಲರ್ ಕೆಲಸ ಪೂರ್ತಿಯಾಗಿದೆ.
ಹೊಸ ಸೇತುವೆಯ ಧಾವಂತಕ್ಕೆ ಹಳೆಯದು ಬಲಿ!
ಪಿಲ್ಲರ್ ಕಾಮಗಾರಿಯನ್ನು ಬೇಸಗೆಯಲ್ಲೇ ಮುಗಿಸಿ ಬಿಡಬೇಕೆಂಬ ಧಾವಂತದಿಂದ ಕೆಲಸ ನಡೆದಿತ್ತು. ಇದೇ ಕಾರಣಕ್ಕೆ ನದಿಗೆ ಒಂದು ಮಗ್ಗುಲಿನಿಂದ ಪೂರ್ತಿಯಾಗಿ ಮಣ್ಣು ತುಂಬುತ್ತಾ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ, ಒಂದು ವಾರದಿಂದ ದಿಢೀರ್ ಆಗಿ ಮಳೆ ಸುರಿದಿದ್ದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದನ್ನು ಕಾಮಗಾರಿ ನಿರ್ವಹಿಸುತ್ತಿದ್ದ ಇಂಜಿನಿಯರ್ ಗಳು ಗಮನಿಸಿರಲಿಲ್ಲವೋ ಏನೋ.. 150 ಮೀಟರ್ ಉದ್ದದ ಸೇತುವೆ ಇದ್ದರೂ, ಸೇತುವೆ ಒಂದು ಕೊನೆಯಲ್ಲಿ ಮಾತ್ರ ನೀರು ಬಿಟ್ಟಿದ್ದರಿಂದ ನೀರಿನ ರಭಸಕ್ಕೆ ಹಳೆ ಸೇತುವೆಯ ತಳಪಾಯ ಕೊರೆಯಲು ಕಾರಣವಾಗಿತ್ತು. ಯಾಕಂದ್ರೆ, ಹಳೆ ಸೇತುವೆಯ ಪಿಲ್ಲರ್ ಹೆಚ್ಚು ಆಳಕ್ಕಿಲ್ಲದ ಕಾರಣ, ಅದರ ಅಡಿಭಾಗದಿಂದ ನೀರು ಹರಿದು ಪಿಲ್ಲರ್ ಕುಸಿದು ನಿಂತಿದೆ.
ನದಿಗೆ ಮಣ್ಣು ತುಂಬಿದ್ದಕ್ಕೇ ಪಿಲ್ಲರ್ ಕುಸಿತ
ನದಿಗೆ ಅಡ್ಡಲಾಗಿ ಮಣ್ಣು ತುಂಬಿದ್ದ ಜಾಗದಲ್ಲಿ ನೀರು ಹೋಗಲು ಪೈಪ್ ಅಳವಡಿಸಿದ್ದರೂ, ಅದರ ಮೇಲೆ ಮಣ್ಣು ಬಿದ್ದು ಹರಿವು ಇರಲಿಲ್ಲ. ಸೋಮವಾರ ಇಡೀ ದಿನ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಬಿರುಸು ಹೆಚ್ಚಿದ್ದರಿಂದ ಮೊದಲೇ ಮರಳುಗಾರಿಕೆಯಿಂದ ನಲುಗಿದ್ದ ಹಳೆ ಸೇತುವೆಯ ಪಿಲ್ಲರ್ ಕುಸಿದು ನಿಂತಿದೆ. ಮಧ್ಯಾಹ್ನ ಸುಮಾರಿಗೆ ನಮ್ಮ ತಂಡ ಸ್ಥಳಕ್ಕೆ ತೆರಳಿದಾಗ, ನದಿಗೆ ಮಣ್ಣು ತುಂಬಿದ್ದನ್ನು ಜೆಸಿಬಿ ಮೂಲಕ ತೆರವು ಮಾಡುತ್ತಿದ್ದರು. ಹೊಸ ಸೇತುವೆಯ ಪಿಲ್ಲರ್ ಮಧ್ಯೆ ಹಾಕಿದ್ದ ಮಣ್ಣನ್ನು ತೆರವುಗೊಳಿಸಿ ನೀರನ್ನು ಹರಿಯಲು ಬಿಡುತ್ತಿದ್ದರು. ನೀರಿನ ರಭಸಕ್ಕೆ ಪಿಲ್ಲರ್ ಸಂಪೂರ್ಣ ಕುಸಿದು ಬಿದ್ದರೆ ಇಡೀ ಸೇತುವೆಯೇ ತುಂಡಾಗಿ ಬೀಳಬಹುದೆಂಬುದನ್ನು ಮನಗಂಡು ಅಧಿಕಾರಿಗಳೇ ಈ ಕ್ರಮ ಕೈಗೊಂಡಿದ್ದರು. ನೂರೈವತ್ತು ಮೀಟರ್ ಅಗಲದ ನದಿಯಲ್ಲಿ ಹರಿಯುವ ನೀರನ್ನು ಕೇವಲ ಹದಿನೈದು ಮೀಟರ್ ನಡುವೆ ಹರಿಯಲು ಬಿಟ್ಟಿದ್ದು ದುರಂತಕ್ಕೆ ಕಾರಣವಾಗಿತ್ತು ಅನ್ನೋದಕ್ಕೆ ಇಂಜಿನಿಯರ್ ಸಲಹೆ ಅಗತ್ಯವಿಲ್ಲ. ಸೇತುವೆ ಕುಸಿದಿರುವುದನ್ನು ತಿಳಿದು ಸ್ಥಳಕ್ಕೆ ನೋಡಲು ಬರುತ್ತಿದ್ದ ಜನರು ಕೂಡ ಇದೇ ಕಾರಣ ಎನ್ನುತ್ತಿದ್ದರು.
ಮರಳು ದಂಧೆಗೆ ನಡುಗಡ್ಡೆಯೇ ಅರ್ಧ ಮಾಯ !
ಮರವೂರು ಸೇತುವೆಯ ಅಕ್ಕಪಕ್ಕದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಇಂದು ನಿನ್ನೆಯ ವಿಷಯವಲ್ಲ. ಕಳೆದ ಹತ್ತು ವರ್ಷಗಳಿಂದಲೂ ಮರಳನ್ನು ಡ್ರೆಜ್ಜಿಂಗ್ ಮೂಲಕ ತೆಗೆಯುತ್ತಿರುವುದು ಅಲ್ಲಿನ ಎಲ್ಲರಿಗೂ ಗೊತ್ತಿದೆ. ಇದೇ ಕಾರಣದಿಂದ ಮರವೂರು ಸೇತುವೆಯಿಂದ ಬಜ್ಪೆಯತ್ತ ಸಾಗುವಾಗ ಎಡಭಾಗಕ್ಕೆ ಕಾಣುತ್ತಿದ್ದ 50 ಮೀಟರ್ ಸುತ್ತಳತೆಯ ನದಿ ಮಧ್ಯದ ನಡುಗಡ್ಡೆಯೊಂದು ಅರ್ಧಕ್ಕೆ ಕುಸಿದು ಹೋಗಿದ್ದನ್ನೂ ಕಾಣಬಹುದು. ಸುತ್ತಲಲ್ಲಿ ಮರಳನ್ನು ಪ್ರತಿ ವರ್ಷ ಬಾಚಿ ತೆಗೆದಿದ್ದರಿಂದ ಅಡಿಪಾಯದ ಲೇಯರ್ ಕರಗಿ ನೀರಿನ ರಭಸಕ್ಕೆ ಮಣ್ಣು ಕೊಚ್ಚಿ ಹೋಗಿದ್ದು ನಡುಗಡ್ಡೆ ಎರಡೂ ಪಾರ್ಶ್ವದಲ್ಲಿ ಕುಸಿದು ಅರ್ಧವಷ್ಟೇ ಉಳಿದಿದೆ.
ವರ್ಷದ ಹಿಂದೆಯೇ ದೂರಿದ್ದರು ಸ್ಥಳೀಯರು
ಇನ್ನು ಮರವೂರು ಸೇತುವೆಯ ಪಿಲ್ಲರ್ ಕುಸಿಯುತ್ತಿರುವ ಬಗ್ಗೆ ಒಂದು ವರ್ಷದ ಹಿಂದೆಯೇ ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರಂತೆ. ಸ್ಥಳೀಯ ಕೆಂಜಾರು ಪಂಚಾಯತ್ ಆಡಳಿತಕ್ಕೂ ದೂರು ನೀಡಲಾಗಿತ್ತು. ಆದರೆ, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಹೇಗೂ ಹೊಸ ಸೇತುವೆಯಾಗುತ್ತೆ ಅನ್ನುವ ಹುಂಬತನದಿಂದ ಬೇಜವಾಬ್ದಾರಿ ವಹಿಸಿದ್ದು ಈಗ ಸಾಮಾನ್ಯ ಜನರು ಕಷ್ಟ ಅನುಭವಿಸುವಂತಾಗಿದೆ. ಮಂಗಳೂರು ನಗರದ ಮಂದಿ ಕಟೀಲು ದೇವಸ್ಥಾನ ಅಥವಾ ಬಜ್ಪೆ ಏರ್ಪೋರ್ಟಿಗೆ ಹೆಚ್ಚುವರಿ ಹತ್ತು ಕಿಮೀ ಸುತ್ತು ಬಳಸಿಕೊಂಡು ತೆರಳುವಂತಾಗಿದೆ. ಸ್ಥಳೀಯರು ಯಾವ ಕಡೆಗೆ ತೆರಳಬೇಕಿದ್ದರೂ, ಅತ್ತಿಂದಿತ್ತ ತೆರಳಬೇಕಾದರೆ ಪಕ್ಕದ ಡ್ಯಾಮ್ ಮೇಲಿನಿಂದ ನಡೆದುಕೊಂಡೇ ಸಾಗಬೇಕಿದೆ.
Video Ground Report
Maravoor Bridge, which connects Mangaluru city to MIA has developed cracks due to the incessant rains that have lashed the state over the past few days. A detailed ground report by Headline Karnataka. Did Sand Mining result in the crack of pillars or construction of a New Bridge?
22-04-25 01:00 pm
Bangalore Correspondent
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm