ಬ್ರೇಕಿಂಗ್ ನ್ಯೂಸ್
08-08-25 11:20 am Bangalore Correspondent ಕರ್ನಾಟಕ
ಬೆಂಗಳೂರು, ಆ 08 : ಧರ್ಮಸ್ಥಳ ಗ್ರಾಮದಲ್ಲಿ ಆಗಸ್ಟ್ 6 ರಂದು ಗಲಾಟೆ ನಡೆದಿದ್ದು, ಕೆಲ ಯೂಟ್ಯೂಬರ್‌ಗಳು ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ಗಲಾಟೆ ನಡೆದ ಸ್ಥಳದಲ್ಲಿ ಮಾಜಿ ಬಿಗ್‌ಬಾಸ್ ಸ್ಪರ್ಧಿ ರಜತ್ ಸಹ ಹಾಜರಿದ್ದರು. ಈ ವೇಳೆ ಸೌಜನ್ಯ ಕುಟುಂಬವನ್ನು ಭೇಟಿಯಾಗಲು ಹೋಗಿದ್ದ ರಜತ್ ವಿರುದ್ಧ ವಾಗ್ದಾಳಿ, ನೂಕಾಟ-ತಳ್ಳಾಟಗಳು ನಡೆದಿವೆ. ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲಿ ರಜತ್ ಹಾಗೂ ಅವರ ಕುಟುಂಬದ ವಿರುದ್ಧ ಜೀವ ಬೆದರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಡಿಜಿಐಜಿಪಿಗೆ ದೂರು ದಾಖಲಿಸಿದ್ದಾರೆ
ಧರ್ಮಸ್ಥಳ ಗ್ರಾಮದ ಸಮೀಪದಲ್ಲಿರುವ ಸೌಜನ್ಯ ಕುಟುಂಬವನ್ನು ಭೇಟಿಯಾಗಲು ಹೋಗಿದ್ದ ರಜತ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸ್ಥಳದಲ್ಲಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಡಿಜಿಐಜಿಪಿಗೆ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಕೊಲೆ ಮಾಡ್ತಿವಿ ಅದು ಇದು ಅಂತ ಬೆದರಿಕೆ ಬಂದಿತ್ತು. ನನ್ನ ಪತ್ನಿ ಅಕ್ಷತಾಗೆ ಬೆದರಿಕೆ ಸಂದೇಶ ಬಂದಿತ್ತು. ಇದು ಬಹಳ ಕೆಟ್ಟ ಬೆಳವಣಿಗೆ ಹಾಗಾಗಿ ದೂರು ನೀಡಿರುವುದಾಗಿ ತಿಳಿಸಿದರು.
ದೂರು ಕೊಟ್ಟ ಬಳಿಕ ಹೇಳಿದ್ದೇನು?
ನಾನು ಯಾವುದೇ ಜಾತಿ ಧರ್ಮ ಜಾಗ ದೇವಸ್ಥಾನ ಬಗ್ಗೆ ಮಾತಾಡಿಲ್ಲ, ನಾವು ಹೋಗಿದ್ದು ಸೌಜನ್ಯ ಪರ ನ್ಯಾಯಕ್ಕಾಗಿ. ಕತ್ತರಿಸ್ತೀನಿ ಅಂದ್ರೆ ಹೇಗೆ? ಹಾಡಹಗಲೇ ನಮ್ಮ ಕಣ್ಣ ಮುಂದೆನೇ ಎಲ್ಲಾ ನಡೆದಿದ್ದು, ಹಲ್ಲೆ ಮಾಡಿದವರ ಮೇಲೆ ದೂರು ಕೊಟ್ಟಿದ್ದೇನೆ. ನನ್ನ ಪತ್ನಿಗೆ ಬೆದರಿಕೆ ಸಂದೇಶ ಹಾಕಿದವರ ವಿರುದ್ದವೂ ದೂರು ಕೊಟ್ಟಿದ್ದೇವೆ. ನಾವು ಕೊಟ್ಟ ದೂರು ಸೈಬರ್ ಠಾಣೆಗೆ ವರ್ಗಾವಣೆ ಆಗಿದೆ. ಕರಾವಳಿ ಮಂಡ್ಯ ಅಂತೆಲ್ಲ ಅಂತಾವ್ರೆ, ನಾವು ಮಂಡ್ಯದವರನ್ನು ಕರ್ಕೊಂಡ್ ಬರ್ತೀವಿ ಅಂತ ಹೇಳಿಲ್ಲ. ಬೆದರಿಗೆಗಳಿಗೆ ನಾವು ಹೆದರಲ್ಲ ಎಂದು ಕಿಡಕಾರಿದರು.
ಇದೇ ಘಟನೆಗೆ ಸಂಬಂಧಿಸಿದಂತೆ ರಜತ್ ಪತ್ನಿ ಅಕ್ಷತಾ ಮಾತನಾಡಿ, ಸೋಶಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ಮೆಸೇಜ್ ಹಾಕಿದ್ದಾರೆ. ನಿನ್ನ ಗಂಡನನ್ನ ವಾಪಸ್ ಕರೆಸ್ಕೊ, ಕರಾವಳಿ ಬೇರೆ ಥರ ಮಂಡ್ಯ ಅಲ್ಲ ಅಂತೆಲ್ಲ ಹಾಕಿದ್ದಾರೆ. ನಾವು ನಮ್ಮ ಮನೆಯವರನ್ನು ಕರೆಯೋ ಅವಶ್ಯಕತೆ ಇಲ್ಲ. ನಾವು ಹುಟ್ಟಿ ಬೆಳೆದಿದ್ದು ಮಂಡ್ಯದಲ್ಲಿ. ನಾವು ದೂರು ಕೊಟ್ಟಿದ್ದೀವಿ ಎಂದರು
ತುಂಬ ದಿನದಿಂದ ಸ್ನೇಹಿತರ ಜೊತೆ ಸೇರಿ ಸೌಜನ್ಯ ಮನೆಗೆ ಹೋಗಬೇಕು ಅಂತ ರಜತ್ ಅಂದುಕೊಳ್ಳುತ್ತಿದ್ದರು. ಬಿಗ್ ಬಾಸ್ ಶೋಗೆ ತೆರಳುವುದಕ್ಕೂ ಮುನ್ನವೇ ಈ ಘಟನೆ ಬಗ್ಗೆ ರಜತ್ ಅವರು ಮಾತನಾಡಿದ್ದರು. ಟೈಮ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇಷ್ಟು ದಿನ ಧರ್ಮಸ್ಥಳಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಟೈಮ್ ಮಾಡಿಕೊಂಡು ಹೋದರು. ಆ ಭೇಟಿ ಸಹಜವಾಗಿ ಮುಗಿಯಿತು. ಕಾಕತಾಳೀಯ ಎಂಬಂತೆ ಅವರು ಹೋದಾಗಲೇ ಅಲ್ಲಿ ಗಲಾಟೆ ನಡೆಯಿತು’ ಎಂದು ಅಕ್ಷಿತಾ ಹೇಳಿದ್ದಾರೆ.
ರಜತ್ ಅವರು ಸುರಕ್ಷಿತವಾಗಿ ಮನೆಗೆ ಬಂದರು. ಎಲ್ಲವೂ ಸರಿಯಾಗಿಯೇ ಇತ್ತು. ಬೆಳಗ್ಗೆ ಎದ್ದ ತಕ್ಷಣ ಅನೇಕ ಫೋನ್ ಕರೆಗಳು ಬರಲು ಶುರುವಾಯಿತು. ಯಾರೋ ಶಾರದಾ ಭಟ್ ಎಂಬುವವರು ಸ್ಕ್ರೀನ್ ಶಾಟ್ ಕಳಿಸುತ್ತಿದ್ದರು. ಬೆದರಿಕೆ ಸಂದೇಶ, ಬೆದರಿಕೆ ಸ್ಟೇಟಸ್ ಬರಲು ಆರಂಭ ಆಯಿತು. ನಾನು, ನನ್ನ ಮಕ್ಕಳು, ನನ್ನ ಮಂಡ್ಯ ಜಿಲ್ಲೆ ಇದಕ್ಕೆ ಹೇಗೆ ಸಂಬಂಧಿಸಿದೆ ಅಂತ ನನಗೆ ಪ್ರಶ್ನೆ ಮೂಡಿತು. ಮಂಡ್ಯಕ್ಕೂ ಕರಾವಳಿಗೂ ಸಂಬಂಧವೇ ಇಲ್ಲ’ ಎಂದಿದ್ದಾರೆ ಅಕ್ಷಿತಾ.
‘ಸೋಶಿಯಲ್ ಮೀಡಿಯಾದಲ್ಲಿ ಒಬ್ಬರು ಇಷ್ಟು ಧೈರ್ಯವಾಗಿ, ಬಹಿರಂಗವಾಗಿ ಬೆದರಿಕೆ ಹಾಕುತ್ತಾರೆ ಎಂದರೆ ಅವರಿಗೆ ಎಷ್ಟು ಬೆಂಬಲ ಇರಬಹುದು ಎಂಬುದನ್ನು ನಾವು ನೋಡಬಹುದು. ಈ ಬಗ್ಗೆ ರಜತ್ ಬಳಿ ಮಾತಾಡಿದಾಗ ನಿರ್ಲಕ್ಷ್ಯ ಮಾಡೋಣ ಎಂದರು. ಆದರೆ, ಮಂಡ್ಯದ ಬಗ್ಗೆ ಮಾತನಾಡಿದಾಗ ಅದು ಆಕ್ಷೇಪಾರ್ಹ ಹೇಳಿಕೆ. ನಿನ್ನ ಗಂಡನನ್ನು ಕರೆದುಕೊಂಡು ಹೋಗು, ಇಲ್ಲದಿದ್ದರೆ ಕೇಸರಿ ಬಣ್ಣ ಮಾಡಿಬಿಡುತ್ತೇವೆ ಅಂತ ಏನೋ ಹಾಕಿದ್ದಾರೆ’ ಎಂದು ಅಕ್ಷಿತಾ ಹೇಳಿದ್ದಾರೆ.
ಮೂಟೆ ಕಟ್ಟಿ, ಸಿಲಿಂಡರ್ ಹಾಕಿ ಸಾಯಿಸುತ್ತೇವೆ ಎಂಬ ಹೇಳಿಕೆ ಕೂಡ ಬಂದಿದೆ. ಅದರ ಫೋಟೋಕಾಪಿ ತೆಗೆದುಕೊಂಡಿದ್ದೇನೆ. ಈ ರೀತಿ ಹೇಳಿಕೆಗಳು ಸರಿಯಲ್ಲ. ಅದು ಭಯಾನಕ ಆಗಿರುತ್ತದೆ. ಅಕಸ್ಮಾತ್ ಹೆಚ್ಚು-ಕಡಿಮೆ ಆದರೆ ಏನು ಗತಿ? ನಮ್ಮ ಮುಂಜಾಗೃತಾ ಕ್ರಮವಾಗಿ ಪೊಲೀಸರಿಗೆ ದೂರು ನೀಡಲು ಬಂದಿದ್ದೇವೆ’ ಎಂದಿದ್ದಾರೆ ಅಕ್ಷಿತಾ.
Tensions flared in Dharmasthala village on August 6 after a clash during which several YouTubers and journalists were allegedly assaulted. Among those present at the scene was former Bigg Boss contestant Rajath, who had gone to meet the family of the late Soujanya.
08-08-25 11:20 am
Bangalore Correspondent
ಸರ್ಕಾರಿ ಕೆಲಸ ಕೊಡಿಸೋದಾಗಿ 25 ಲಕ್ಷ ಪಡೆದು ವಂಚನೆ ;...
07-08-25 10:18 pm
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
08-08-25 01:19 pm
Mangalore Correspondent
ಗೋಹತ್ಯೆ ಕಾನೂನು ಹಿಂಪಡೆದ ರೀತಿಯಲ್ಲೇ ವಿದ್ಯುತ್ ನೌಕ...
08-08-25 12:24 pm
ಜಾಲತಾಣದಲ್ಲಿ ಅತಿರೇಕದ ಹೇಳಿಕೆ ; ಗಿರೀಶ್ ಮಟ್ಟೆಣ್ಣನ...
07-08-25 11:01 pm
ಉಳ್ಳಾಲದಲ್ಲಿ ನಿಯಂತ್ರಣ ತಪ್ಪಿ ಆವರಣ ಗೋಡೆಗೆ ಬಡಿದ ಸ...
07-08-25 10:45 pm
ಧರ್ಮಸ್ಥಳ ; 13ನೇ ಪಾಯಿಂಟ್ ಬಗ್ಗೆ ಕುತೂಹಲ, ಅಸ್ಥಿ ಪ...
07-08-25 10:29 pm
08-08-25 12:30 pm
Bangalore Correspondent
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm
Bengalore Cyber-crime: 80 ವರ್ಷದ ವೃದ್ಧನಿಗೆ ಒಂದ...
07-08-25 08:59 pm
Kudla Rampage Attack, Ajay Anchan, Dharmastha...
06-08-25 08:02 pm