ಅಯೋಧ್ಯೆಯ ಮಸೀದಿಗೆ ದೇಣಿಗೆ ನೀಡಿ ಸುದ್ದಿಯಾದ ಹಿಂದು ಯುವಕ !

04-10-20 08:59 pm       Headline Karnataka News Network   ಸ್ಪೆಷಲ್ ಕೆಫೆ

ಇಲ್ಲೊಬ್ಬ ಹಿಂದು ಯುವಕ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪರ್ಯಾಯವಾಗಿ ನಿರ್ಮಾಣಗೊಳ್ಳುತ್ತಿರುವ ಮಸೀದಿಗೆ 21 ಸಾವಿರ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದಾನೆ.

ಲಕ್ನೋ, ಅಕ್ಟೋಬರ್ 4: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಹಿಂದುಗಳು ಒಂದಿಲ್ಲೊಂದು ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಇದೇ ವೇಳೆ, ಇಲ್ಲೊಬ್ಬ ಹಿಂದು ಯುವಕ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪರ್ಯಾಯವಾಗಿ ನಿರ್ಮಾಣಗೊಳ್ಳುತ್ತಿರುವ ಮಸೀದಿಗೆ 21 ಸಾವಿರ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದಾನೆ.

ಆತನ ಹೆಸರು ರೋಹಿತ್ ಶ್ರೀವಾಸ್ತವ. ಲಕ್ನೋ ಯುನಿವರ್ಸಿಟಿಯಲ್ಲಿ ಉದ್ಯೋಗಿಯಾಗಿರುವ ರೋಹಿತ್ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಸೀದಿಗೂ ದೇಣಿಗೆ ನೀಡಿರುವ ಮೊದಲ ಹಿಂದು ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾನೆ. ಇಂಡೋ ಇಸ್ಲಾಮಿಕ್ ಸಾಂಸ್ಕೃತಿಕ ಸಂಬಂಧಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಮಸೀದಿ ನಿರ್ಮಾಣ ಟ್ರಸ್ಟ್ ಕಾರ್ಯದರ್ಶಿ ಆಥರ್ ಹುಸೇನ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್, ಭಾರತದಲ್ಲಿ ಹಬ್ಬಗಳನ್ನು ಹಿಂದು- ಮುಸ್ಲಿಮರು ಒಟ್ಟಾಗಿ ಆಚರಿಸುತ್ತಾರೆ. ನಾನು ದಿವಾಳಿ, ಹೋಳಿಯನ್ನು ಮುಸ್ಲಿಂ ಸೋದರರು ಇಲ್ಲದೆ ಆಚರಿಸಿಕೊಳ್ಳಲ್ಲ. ಮುಸ್ಲಿಮರು ಕೂಡ ನನ್ನನ್ನು ಬಿಟ್ಟು ಈದ್ ಆಚರಿಸಲ್ಲ. ಇದು ಕೋಟ್ಯಂತರ ಭಾರತೀಯರ ಸೌಹಾರ್ದ ಸಂಬಂಧ. ನಾನು ಎಲ್ಲ ಹಿಂದುಗಳಿಗೂ ಮನವಿ ಮಾಡುತ್ತೇನೆ. ಮಸೀದಿಗೂ ಕೊಡುಗೆ ನೀಡಿ. ಮುಸ್ಲಿಮರು ಕೂಡ ನಮ್ಮ ಸೋದರರು ಎಂಬುದನ್ನು ನಿರೂಪಿಸಿ ಎಂದು ಹೇಳಿದ್ದಾನೆ.