ತನ್ನ ಅಪಾರ್ಟ್ಮೆಂಟ್ ಟೆರೇಸಲ್ಲೇ ವಿಮಾನ ತಯಾರಿಸಿದ ಪೈಲಟ್ !!  

22-08-20 12:19 pm       Headline Karnataka News Network   ಸ್ಪೆಷಲ್ ಕೆಫೆ

ಪೈಲಟ್ ಆಗಿದ್ದ ವ್ಯಕ್ತಿಯೊಬ್ಬ ಸ್ವತಃ ವಿಮಾನ ತಯಾರಿಸಿದ್ದಾನೆ. ಇದರ ವಿಶೇಷ ಏನಪ್ಪಾ ಅಂದ್ರೆ, ಈತ ತಾನು ವಾಸ ಇರುವ ಮುಂಬೈನ ಖಾಂಡೀವಳಿಯ ಅಪಾರ್ಟ್ಮೆಂಟಿನ ಟೆರೇಸಿನಲ್ಲಿಯೇ ವಿಮಾನ ರೆಡಿ ಮಾಡಿ ಗಮನ ಸೆಳೆದಿದ್ದಾನೆ.

ಮುಂಬೈ, ಆಗಸ್ಟ್ 22: ಜೆಟ್ ಏರ್ವೇಸ್ ವಿಮಾನ ಸಂಸ್ಥೆಯಲ್ಲಿ ಪೈಲಟ್ ಆಗಿದ್ದ ವ್ಯಕ್ತಿಯೊಬ್ಬ ಸ್ವತಃ ವಿಮಾನ ತಯಾರಿಸಿದ್ದಾನೆ. ಇದರ ವಿಶೇಷ ಏನಪ್ಪಾ ಅಂದ್ರೆ, ಈತ ತಾನು ವಾಸ ಇರುವ ಮುಂಬೈನ ಖಾಂಡೀವಳಿಯ ಅಪಾರ್ಟ್ಮೆಂಟಿನ ಟೆರೇಸಿನಲ್ಲಿಯೇ ವಿಮಾನ ರೆಡಿ ಮಾಡಿ ಗಮನ ಸೆಳೆದಿದ್ದಾನೆ.

ಹೌದು.. ಕ್ಯಾಪ್ಟನ್ ಅಮೋಲ್ ಶಿವಾಜಿ ಯಾದವ್ ಎನ್ನುವ ಮಾಜಿ ಪೈಲಟ್, ತನ್ನದೇ ಸ್ವಂತ ಖರ್ಚಿನಲ್ಲಿ ಆರು ಸೀಟ್ ಸಾಮರ್ಥ್ಯದ ವಿಮಾನ ತಯಾರಿಸಿದ್ದು ಇದಕ್ಕಾಗಿ ಭರ್ಜರಿ 16 ವರ್ಷಗಳ ಶ್ರಮ ಹಾಕಿದ್ದಾನೆ. ಫ್ಲಾಟಿನ ಟೆರೇಸಿನಲ್ಲಿ ತನ್ನ ಆಪ್ತ ಮೆಕ್ಯಾನಿಕ್ ಜೊತೆ ವಿಮಾನದ ಬಿಡಿಭಾಗಗಳನ್ನು ಒಂದೊಂದಾಗಿಯೇ ತಂದು ಜೋಡಿಸಿದ್ದಾನೆ. ವಿಮಾನವನ್ನು ಪ್ರಾಯೋಗಿಕವಾಗಿ ಹಾರಿಸಿದ್ದು, ಯಶಸ್ಸು ಕಂಡಿದ್ದೇನೆ. ವಿಮಾನ ಗಾಳಿಯಲ್ಲಿ ತೇಲುವ ಮತ್ತು ಮುಂದಕ್ಕೆ ಹೋಗುವ ಸಾಮರ್ಥ್ಯದ ಬಗ್ಗೆ ಪರೀಕ್ಷೆ ಮಾಡಿದ್ದೇನೆ. ಎರಡನೇ ಹಂತದಲ್ಲಿ ವಿಮಾನ ಎರಡು ಸಾವಿರ ಅಡಿ ಎತ್ತರದಲ್ಲಿ ಹಾರಬೇಕಿದ್ದು ಇದಕ್ಕಾಗಿ ವಿಮಾನ ಸಚಿವಾಲಯದಿಂದ ಅನುಮತಿ ಪಡೆದಿರುವುದಾಗಿ ಯಾದವ್ ಹೇಳಿಕೊಂಡಿದ್ದಾನೆ.

ಹೆಚ್ಚು ಎತ್ತರದಲ್ಲಿ ವಿಮಾನ ಹಾರಿಸುವುದು ರಿಸ್ಕ್ ಆಗಿದ್ದು, ದೊಡ್ಡ ಮೊತ್ತದ ಇನ್ ಶೂರೆನ್ಸ್ ಮಾಡಬೇಕು. ಕುಟುಂಬಸ್ಥರಿಂದ ಹಣ ಪಡೆದು ಅದನ್ನೂ ಮಾಡಿದ್ದೇನೆ. ಎರಡನೇ ಹಂತದ ಪ್ರಯೋಗಕ್ಕೆ ರೆಡಿಯಾಗುತ್ತಿದ್ದೇನೆ. ಮತ್ತಷ್ಟು ಎತ್ತರಕ್ಕೆ ಹೋಗಬೇಕೆಂದರೆ ಇನ್ನೂ ಒಂದೂವರೆ ಕೋಟಿ ಖರ್ಚು ಬೇಕಾಗುತ್ತೆ ಎಂದು ಅನ್ಮೋಲ್ ಯಾದವ್ ತಿಳಿಸಿದ್ದಾನೆ.

ಅಮೋಲ್ ಯಾದವ್ ಸಾಧನೆಗೆ ಮಹಾರಾಷ್ಟ್ರ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಾದವ್ ವಿಮಾನ ಹಾರಾಟಕ್ಕೆ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದೆ. ವಿಮಾನದ ಹಾರಾಟ ವ್ಯವಸ್ಥೆಗೆ ಪ್ರತ್ಯೇಕ ಭೂಮಿಯನ್ನ ನೀಡುವುದಕ್ಕೂ ರೆಡಿ ಇದ್ದೇವೆ ಎಂದು ಕೈಗಾರಿಕಾ ಸಚಿವ ಸುಭಾಸ್ ದೇಸಾಯಿ ಹೇಳಿದ್ದಾರೆ. ಇದೇನಿದ್ದರೂ, ಅಪಾರ್ಟ್ಮೆಂಟ್ ಟೆರೇಸಿನಲ್ಲಿಯೇ ವಿಮಾನ ತಯಾರಿಸಿದ್ದು ವಿಶೇಷ.