ಮಹಾತ್ಮಾ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಎಷ್ಟಕ್ಕೆ ಸೇಲ್​​ ಆಯ್ತು ಗೊತ್ತಾ ?

24-08-20 01:35 pm       Headline Karnataka News Network   ಸ್ಪೆಷಲ್ ಕೆಫೆ

ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುತ್ತಿದ್ದಾಗ ಬಳಕೆ ಮಾಡುತ್ತಿದ್ದ ಗೋಲ್ಡ್ ಪ್ಲೇಟೆಡ್ ಕನ್ನಡಕ ಎಷ್ಟಕ್ಕೆ ಸೇಲ್​​ ಆಯ್ತು ಗೊತ್ತಾ ? ಮುಂದೆ ಓದಿ..

ಲಂಡನ್: ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುತ್ತಿದ್ದಾಗ ಬಳಕೆ ಮಾಡುತ್ತಿದ್ದ ಗೋಲ್ಡ್ ಪ್ಲೇಟೆಡ್ ಕನ್ನಡಕ ಇದಾಗಿದ್ದು, 1900 ರಲ್ಲಿ ಇದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು.

ಎರಡು ಬಂಗಾರ ಲೇಪಿತ ಈ ಕನ್ನಡಕ ದಾಖಲೆಯ 260,000 ಪೌಂಡ್ಸ್ ಮೊತ್ತಕ್ಕೆ ಹರಾಜಾಗಿದ್ದು. ದಿ ಲೆಟರ್ ಬಾಕ್ಸ್ ಆಫ್ ಈಸ್ಟ್ ಬ್ರಿಸ್ಟೋಲ್ ಆಕ್ಷನ್ಸ್ ಇನ್ ಹ್ಯಾನ್ ಹ್ಯಾಮ್, ನೈಋತ್ಯ ಇಂಗ್ಲೆಂಡ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಂದಾಜು 10,000 ಪೌಂಡ್ಸ್ ನಿಂದ 15,000 ಪೌಂಡ್ ಗಳಷ್ಟು ಹಣ ಬರಬಹುದೆಂದು ನಿರೀಕ್ಷಿಸಲಾಗಿತ್ತು.

ಆನ್‌ಲೈನ್‌ ಮೂಲಕ ಹರಾಜು ಪ್ರಕ್ರಿಯೆ ನಡೆದಿದ್ದು ಮೊತ್ತ ಏರಿಕೆಯಾಗುವ ಮೂಲಕ ಅಂತಿಮವಾಗಿ 260,000 ಪೌಂಡ್ಸ್​ಗೆ ಬಿಡ್‌ ಸಲ್ಲಿಸುವ ಮೂಲಕ ವ್ಯಕ್ತಿಯೊಬ್ಬರು ಗಾಂಧೀಜಿಯವರ ಕನ್ನಡಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಅನಾಮಿಕ ವ್ಯಕ್ತಿಯೊಬ್ಬರು, ಖ್ಯಾತ ಹರಾಜುಗಾರ ಆ್ಯಂಡ್ರ್ಯೂ ಸ್ಟೋವ್‌ ಅವರ ಕಚೇರಿಯ ಟಪಾಲು ಬಾಕ್ಸ್‌ಗೆ ಹಾಕಿ ಹೋಗಿದ್ದರು. ಅದರಲ್ಲಿ ‘ಇದು ಮಹಾತ್ಮ ಗಾಂಧಿಯವರಿಗೆ ಸೇರಿದ ಕನ್ನಡಕ’ ಎಂದು ಒಕ್ಕಣೆ ಬರೆದು ಹಾಕಿದ್ದರು.

ಈ ಬಗ್ಗೆ ಆ್ಯಂಡ್ರ್ಯೂ ನಡೆಸಿದ ಸಂಶೋಧನೆಯಲ್ಲಿ ಇದು ಗಾಂಧಿಯವರದ್ದೇ ಎಂದು ಗೊತ್ತಾಗಿತ್ತು. 1920ರ ಆಸುಪಾಸಿನಲ್ಲಿ ಗಾಂಧಿ ಈ ಕನ್ನಡಕಗಳನ್ನು ಬಳಸಿದ್ದರು ಎಂದು ಆ್ಯಂಡ್ರ್ಯೂ ಹೇಳಿದ್ದಾರೆ.