ಬ್ರೇಕಿಂಗ್ ನ್ಯೂಸ್
28-07-23 06:41 pm Mangalore Correspondent ಕ್ರೈಂ
ಮಂಗಳೂರು, ಜುಲೈ 28: ಕೆಲವೊಮ್ಮೆ ಏನೋ ಮಾಡಲು ಹೋಗಿ ಇನ್ನೇನೋ ಮಾಡಿದಂತಾಗುತ್ತೆ ಅನ್ನೋದು ಇದೇ ಕಾರಣಕ್ಕೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಿನ್ನೆ ರಾತ್ರಿ ಇಬ್ಬರು ಯುವಕರು ಏನೋ ಅಂದ್ಕೊಂಡು ನೈತಿಕ ಪೊಲೀಸ್ ಗಿರಿ ನಡೆಸಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬಂಟ್ವಾಳ ನಗರ ಠಾಣೆಯ ಸಿಬಂದಿ ಆಗಿರುವ ಕುಮಾರ್ ತನ್ನ ಪತ್ನಿ ಮತ್ತು ನಾದಿನಿಯ ಜೊತೆ ನಿನ್ನೆ ರಾತ್ರಿ ಬಿಸಿ ರೋಡಿನಲ್ಲಿ ಊಟಕ್ಕೆಂದು ಹೊಟೇಲ್ ಬಂದಿದ್ದರು. ಊಟ ಮುಗಿಸಿ ಹೆದ್ದಾರಿ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಯುವಕರು ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ಹೆದ್ದಾರಿಯಿಂದ ಒಳಹೋದ ಕೂಡಲೇ ಬೈಕಿನಲ್ಲಿ ಅಡ್ಡಗಟ್ಟಿದ ಯುವಕರು, ಪೊಲೀಸ್ ಎಂದು ತಿಳಿಯದೆ ಅವರನ್ನು ವಿಚಿತ್ರವಾಗಿ ಪ್ರಶ್ನೆ ಮಾಡಿದ್ದಾರೆ. ಹಿಂದು ಯುವತಿಯರ ಜೊತೆಗೆ ಎಲ್ಲಿ ಹೋಗ್ತಿದ್ದೀಯಾ.. ಇಲ್ಲಿ ಹಾಗೆಲ್ಲ ನಡೆಯೋದಿಲ್ಲ ಗೊತ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ವ್ಯಕ್ತಿ ಮುಸ್ಲಿಂ ಅನ್ನುವ ಭ್ರಮೆಯಿಂದಲೋ ಏನೋ, ವಿಚಾರಣೆ ನಡೆಸಿದ್ದಾರೆ. ಈ ವೇಳೆ, ತಾನು ಬಂಟ್ವಾಳ ಠಾಣೆಯ ಸ್ಟಾಫ್ ಎಂದು ಹೇಳಿದರೂ, ನೀನು ಪೊಲೀಸ್ ಅಲ್ಲ ಎನ್ನುತ್ತಾ ಯುವತಿಯರನ್ನು ಗುರಿಯಾಗಿಸಿ ಮೊಬೈಲಿನಲ್ಲಿ ವಿಡಿಯೋ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಪೊಲೀಸ್ ಸಿಬಂದಿ ಕುಮಾರ್, ಠಾಣೆಯಿಂದ ಸಿಬಂದಿಯನ್ನು ಕರೆಸಿದ್ದು ರಾತ್ರಿ ವೇಳೆ ತಮ್ಮನ್ನು ದಬಾಯಿಸಲು ಬಂದಿದ್ದ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ ಆಚಾರ್ಯ ಬಂಧಿತರಾಗಿದ್ದು, ಬಂಟ್ವಾಳ ಠಾಣೆಯಲ್ಲಿ ಯುವತಿಯರ ಜೊತೆ ಅಸಭ್ಯ ವರ್ತಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.
ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಬೀಚ್ ತೆರಳಿದ್ದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗೆ ಅನ್ಯಮತೀಯ ಎಂಬ ಕಾರಣಕ್ಕೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯಲ್ಲಿ ಬೈಕಿನಲ್ಲಿ ಬಂದು ಪೊಲೀಸ್ ಸಿಬಂದಿಯೆಂದು ತಿಳಿಯದೆ ಅಡ್ಡಗಟ್ಟಿ ವಿಚಿತ್ರವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದಾರೆ. ಬಂಟ್ವಾಳ ಠಾಣೆಯ ಹೆಡ್ ಕಾನ್ಸ್ ಟೇಬಲ್ ಕುಮಾರ್ ಅಪರಾಧ ವಿಭಾಗದಲ್ಲಿ ಪರಿಣತಿ ಹೊಂದಿದ್ದರಿಂದ ಕಳೆದ ಒಂದು ವರ್ಷದಿಂದ ಮಂಗಳೂರಿನಲ್ಲಿ ಎನ್ಐಎ ಪೊಲೀಸರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಬಿಸಿ ರೋಡಿನ ಪೊಲೀಸ್ ವಸತಿ ಗೃಹದಲ್ಲಿಯೇ ತಂಗಿದ್ದಾರೆ. ನಿನ್ನೆ ರಾತ್ರಿ ಹೊಟೇಲ್ ಊಟ ಮುಗಿಸಿ ಮರಳುತ್ತಿದ್ದಾಗ, ವೈನ್ ಶಾಪ್ ಬಳಿಯಿದ್ದ ಯುವಕರಿಬ್ಬರು ಏನೋ ಅಂದ್ಕೊಂಡು ಅಡ್ಡಗಟ್ಟಿದ್ದು ಸುಲಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಸೆರೆವಾಸ ಅನುಭವಿಸುವಂತಾಗಿದೆ.
Mangalore Moral Policing on Police Constable at Bantwal, Two youths arrested. Hindu activist who saw a man going along with two women were stopped and questioned knowing not that he was a Police constable, immidetely they were arrested by Bantwal Police.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm