ಬ್ರೇಕಿಂಗ್ ನ್ಯೂಸ್
24-01-26 08:38 pm HK staffer ದೇಶ - ವಿದೇಶ
ಟೆಹ್ರಾನ್, ಜ.24: ಯುದ್ಧ ನೌಕೆ ಬರುತ್ತಿದೆ ಎಂದು ಬೆದರಿಕೆ ಹಾಕಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ ತಿರುಗೇಟು ನೀಡಿದ್ದು, ಯಾವುದೇ ಮಾದರಿಯ ದಾಳಿಯಾದರೂ ನಾವದನ್ನು ಯುದ್ಧವೆಂದು ಪರಿಗಣಿಸುತ್ತೇವೆ, ತಕ್ಕ ಉತ್ತರ ನೀಡಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ.
ಈ ಬಾರಿ ಯಾವುದೇ ದಾಳಿ ನಡೆದರೂ, ನಾವು ಅದನ್ನು ಸಂಪೂರ್ಣ ಯುದ್ಧವೆಂದು ಪರಿಗಣಿಸಿ ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆಂದು ಇರಾನ್ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. ಹಿಂಸಾಚಾರ ಪೀಡಿತ ಮಧ್ಯಪ್ರಾಚ್ಯ ದೇಶದ ಕಡೆಗೆ ಅಮೆರಿಕಾದ ಯುದ್ಧನೌಕೆಗಳ ದೊಡ್ಡ ಪಡೆ ಸಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಈ ಎಚ್ಚರಿಕೆ ಮಾತುಗಳನ್ನಾಡಿದೆ.
ಅಮೆರಿಕದ ಮಿಲಿಟರಿ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಅಯತೊಲ್ಲಾ ಖಮೇನಿ ಆಡಳಿತವು ತನ್ನ ಬಳಿ ಇರುವ ಎಲ್ಲಾ ರೀತಿಯ ಬಲವನ್ನೂ ಬಳಸಲಿದೆ ಎಂದು ಇರಾನ್ ಅಧಿಕಾರಿ ಹೇಳಿದ್ದಾರೆ. ಈ ಬಾರಿ, ನಾವು ಯಾವುದೇ ದಾಳಿಯನ್ನು ಸೀಮಿತ ಅಥವಾ ಇನ್ನಾವುದೇ ಮಾದರಿ ಎಂದು ಕರೆದರೂ ನಮ್ಮ ವಿರುದ್ಧದ ಪೂರ್ಣ ಯುದ್ಧವೆಂದೇ ಪರಿಗಣಿಸುತ್ತೇವೆ. ಇದನ್ನು ಪರಿಹರಿಸಲು ಸಾಧ್ಯವಾದಷ್ಟು ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆಂದು ತಿಳಿಸಿದ್ದಾರೆ,
ನಿನ್ನೆಯಷ್ಟೇ ಇರಾನ್'ಗೆ ಎಚ್ಚರಿಕೆ ಕೊಟ್ಟಿದ್ದ ಟ್ರಂಪ್, ನಮ್ಮ ದೊಡ್ಡ ಪಡೆಗಳು ಇರಾನ್ ಕಡೆ ಹೋಗುತ್ತಿವೆ. ಆದರೆ ನಾವು ಇವುಗಳನ್ನು ಬಳಸಬೇಕಾಗುವುದಿಲ್ಲ ಎಂದನಿಸುತ್ತಿದೆ ಎನ್ನುವ ಮೂಲಕ ಇರಾನ್ ಆಡಳಿತಕ್ಕೆ ತನ್ನ ಮಾತು ಕೇಳುವಂತೆ ಪರೋಕ್ಷ ಒತ್ತಡ ಹೇರಿದ್ದರು. ಇದೇ ವೇಳೆ, ಅರಬ್ಬಿ ಸಮುದ್ರ ಅಥವಾ ಪರ್ಶಿಯನ್ ಕೊಲ್ಲಿ ಪ್ರದೇಶದಿಂದ ಅಮೆರಿಕ ನೌಕಾ ದಾಳಿ ನಡೆಸಲಿದೆ ಎಂದು ಅಮೆರಿಕ ಸೇನಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ, ಅಮೆರಿಕ ರಕ್ಷಣಾ ಇಲಾಖೆ ತನ್ನ ಯುದ್ಧ ವಿಮಾನವೊಂದು ಇಳಿಯುತ್ತಿರುವ ಚಿತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ.
Iran has issued a strong warning to the United States following remarks by US President Donald Trump about deploying major naval forces toward the region, stating that any form of attack would be treated as a full-scale war and met with a decisive response.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 08:14 pm
Mangaluru Staffer
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
24-01-26 08:53 pm
HK Staffer
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm