ಬ್ರೇಕಿಂಗ್ ನ್ಯೂಸ್
30-07-23 09:20 pm Mangalore Correspondent ಕ್ರೈಂ
ಉಳ್ಳಾಲ, ಜು.30: ಮಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಒಂದು ತೊಕ್ಕೊಟ್ಟಿನಲ್ಲಿ ಪತ್ತೆಯಾಗಿದ್ದು ಬೈಕನ್ನ ಚಲಾಯಿಸುತ್ತಿದ್ದ ಕಳ್ಳ ಸಿಸಿಟಿವಿ ಫೂಟೇಜಲ್ಲಿ ಸೆರೆಯಾಗಿದ್ದಾನೆ. ಅಷ್ಟಕ್ಕೂ ಮಾರ್ಕೆಟಲ್ಲಿ ಮೌಲ್ಯವಿಲ್ಲದ ಬೈಕ್ ಗಳನ್ನ ಕದಿಯೋ ಖದೀಮರು ಕದ್ದ ಬೈಕ್ ನಂಬರ್ ಪ್ಲೇಟ್ ಕಳಚಿ ಅಡ್ಡ ಕಸುಬಿಗೆ ಬಳಸುತ್ತಿರುವ ಶಂಕೆ ಮೂಡಿದೆ.
ಕೊಲ್ಯ ಸಾರಸ್ವತ ಕಾಲನಿಯ ಸಂಜಯ್(23) ಎಂಬವರು ಚಲಾಯಿಸುತ್ತಿದ್ದ ಬೈಕ್ ಕಳೆದ ಜುಲೈ 20 ರಂದು ಮಂಗಳೂರಿನಲ್ಲಿ ಕಳವಾಗಿದ್ದು ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 20 ರಂದು ಸಂಜಯ್ ತನ್ನ ಸ್ನೇಹಿತ ಶ್ರವಣ್ ಅವರ ತಂದೆಯ ಹೀರೋ ಹೋಂಡಾ ಫ್ಯಾಷನ್ ಪ್ರೋ ಬೈಕಲ್ಲಿ ಶ್ರವಣ್ ಗೆ ನೂತನ ಉದ್ಯೋಗಕ್ಕೆ ಸೇರಿಸಲೆಂದು ತೆರಳಿದ್ದರು. ಶರವು ದೇವಸ್ಥಾನದ ಬಳಿಯ ಎಕ್ಸೆಲ್ ಮಿಸ್ ಚೀಫ್ ಮಾಲ್ ಬಳಿಯಲ್ಲಿ ಸಂಜೆ 5 ಗಂಟೆಗೆ ಬೈಕನ್ನ ಪಾರ್ಕ್ ಮಾಡಿ ಪಕ್ಕದ ಕಂಪನಿಯೊಂದಕ್ಕೆ ಕೆಲಸ ಕೇಳಲೆಂದು ತೆರಳಿದ್ದರು. ಸಂಜಯ್ ಮತ್ತು ಶ್ರವಣ್ ಕಂಪನಿಯಿಂದ ಮರಳಿದಾಗ ಪಾರ್ಕ್ ಮಾಡಲಾಗಿದ್ದ ಬೈಕ್ ನಾಪತ್ತೆಯಾಗಿತ್ತು. ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರ ತಿಳಿಸಿ ಹುಡುಕಾಡಿದರೂ ಬೈಕ್ ಸಿಗದೆ ಇದ್ದ ಕಾರಣ ಜುಲೈ 26 ರಂದು ಸಂಜಯ್ ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂದು ಸಂಜೆ ತೊಕ್ಕೊಟ್ಟಿನ ಒಳ ಪೇಟೆಯ ಆಮಂತ್ರಣ ಸಭಾಂಗಣದ ಎದುರು ಭಾಗದ ಮೆಡಿಕಲ್ ಸೆಂಟರ್ ಎದುರುಗಡೆ ಕಳವಾದ ಬೈಕ್ ಪತ್ತೆಯಾಗಿದೆ. ಅಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಮಧ್ಯಾಹ್ನದ ವೇಳೆ ಬೈಕನ್ನ ಓರ್ವನು ಅಲ್ಲಿ ತಂದು ನಿಲ್ಲಿಸಿದ್ದು ಆತನನ್ನ ಮತ್ತೋರ್ವ ಸ್ವಾಗತಿಸಿ ಮಾತನಾಡಿಸಿದ ದೃಶ್ಯ ದಾಖಲಾಗಿದೆ. ಬೈಕ್ನ ನಂಬರ್ ಪ್ಲೇಟನ್ನ ಕಳಚಲಾಗಿದೆ, ಅಷ್ಟಕ್ಕೂ 18 ಸಾವಿರ ಮಾರ್ಕೆಟ್ ಮೌಲ್ಯದ ಬೈಕ್ ಕಾಳ ಧಂದೆಯಲ್ಲಿ ಮಾರಿದರೂ 8 ಸಾವಿರಕ್ಕಿಂತ ಹೆಚ್ಚು ಮೌಲ್ಯ ಸಿಗಲು ಕಷ್ಟ. ಕದ್ದ ಬೈಕ್ ಗಳನ್ನ ಖದೀಮರು ಅಡ್ಡ ಕಸುಬಿಗೆ ಬಳಸುತ್ತಿರುವ ಶಂಕೆ ಮೂಡಿದ್ದು, ಪೊಲೀಸರು ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶ್ರವಣ್ ತಂದೆ ಸಂದೀಪ್ ಅವರು ಬೈಕ್ ಗುರುತು ಪತ್ತೆಹಚ್ಚಿದ್ದು , ಬಂದರು ಠಾಣೆ ಪೊಲೀಸರು ಬೈಕನ್ನ ವಶಕ್ಕೆ ಪಡೆದಿದ್ದಾರೆ.
Bike stolen from Mangalore found in Thokottu, video of CCTV found.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 05:00 pm
HK News Staffer
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm