ಬ್ರೇಕಿಂಗ್ ನ್ಯೂಸ್
14-06-25 11:02 pm Bangalore Correspondent ಕ್ರೈಂ
ಬೆಂಗಳೂರು, ಜೂ 14 : ಕೆಲಸಕ್ಕಿದ್ದ ಮನೆಗೆ ಕನ್ನ ಹಾಕಿದ್ದ ಮಹಿಳೆಯನ್ನು ಬಂಧಿಸಿರುವ ಚಾಮರಾಜಪೇಟೆ ಠಾಣೆ ಪೊಲೀಸರು ನಗದು ಸೇರಿದಂತೆ ಸುಮಾರು 70.16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಉಮಾ (43) ಬಂಧಿತ ಆರೋಪಿ. ವಿವಾಹಿತೆಯಾಗಿರುವ ಉಮಾಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆಕೆ ಚಾಮರಾಜಪೇಟೆ ನಿವಾಸಿ ರಾಧಾ ಎಂಬುವರ ಮನೆಯಲ್ಲಿಕೆಲಸ ಮಾಡುತ್ತಿದ್ದಳು.
23 ಸಾವಿರ ರೂ. ಸಂಬಳ ಕೊಟ್ರು ಹೆಚ್ಚಿನ ಹಣಕ್ಕೆ ಆಸೆ:
ರಾಧಾ ಅಕ್ಕ ಸುಜಾತಾ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಅವರ ಆರೈಕೆಗಾಗಿ ರಾಧಾ ಉಮಾಳನ್ನು ಮೂರು ತಿಂಗಳ ಹಿಂದೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಉಮಾಗೆ ತಿಂಗಳಿಗೆ 23 ಸಾವಿರ ರೂ. ಸಂಬಳ ಕೊಡಲಾಗುತ್ತಿತ್ತು ಮತ್ತು ರಾಧಾ ಅವರ ಮನೆಯಲ್ಲೇ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾಧಾ ನಗರ್ತಪೇಟೆಯಲ್ಲಿ ಸೆಕ್ಯೂರಿಟಿ ಏಜೆನ್ಸಿ ಹೊಂದಿದ್ದಾರೆ. ಸುಜಾತಾ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದ ತಮ್ಮ ನಿವೇಶನವನ್ನು 2 ತಿಂಗಳ ಹಿಂದೆ ಮಾರಾಟ ಮಾಡಿದ್ದರು. ಅದರಿಂದ ಬಂದ 67 ಲಕ್ಷ ರೂ.ಗಳನ್ನು ಮನೆಯ ಅಲ್ಮೇರಾದಲ್ಲಿ ಇಟ್ಟಿದ್ದರು. ಜೊತೆಗೆ ರಾಧಾ, ಸುಜಾತಾ ಹಾಗೂ ಮತ್ತೊಬ್ಬ ಸಹೋದರಿಗೆ ಸೇರಿದ ಸುಮಾರು 1 ಕೆ.ಜಿ. 415 ಗ್ರಾಂ ಚಿನ್ನಾಭರಣ, 2 ಕೆ.ಜಿ. 445 ಗ್ರಾಂ. ಬೆಳ್ಳಿ ವಸ್ತುಗಳನ್ನು ಅದೇ ಅಲ್ಮೇರಾದಲ್ಲಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಮೇರಾದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ ಹಣ ಇರುವುದನ್ನು ತಿಳಿದಿದ್ದ ಕಳ್ಳಿ ಉಮಾ, ಕಳವಿಗೆ ಸಂಚು ರೂಪಿಸಿದ್ದಳು. ರಾಧಾ ಜೂನ್ 4ರಂದು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಸುಜಾತಾ ಒಬ್ಬರೇ ಮನೆಯಲ್ಲಿದ್ದರು. ಈ ಸಂದರ್ಭ ನೋಡಿಕೊಂಡು ಕಳ್ಳಿ ಅಲ್ಮೇರಾದಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕದ್ದಿದ್ದಳು. ನಂತರ ತನ್ನ ಸ್ವಂತ ಊರು ಚಾಮರಾಜನಗರದಲ್ಲಿನ ಮನೆಗೆ ಹೋಗಿ ಹಣ, ಆಭರಣಗಳನ್ನು ಇಟ್ಟು ವಾಪಸ್ ಬಂದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಳಿವು ಕೊಟ್ಟ ಸಿ.ಸಿ ಕ್ಯಾಮೆರಾ;
ಸುಜಾತಾ ಅವರ ನಿವೇಶನ ಮಾರಾಟ ಮಾಡಿ ಬಂದ ಹಣದಲ್ಲಿ ಹೊಸ ಫ್ಲ್ಯಾಟ್ ಖರೀದಿಸಲು ಉದ್ದೇಶಿಸಿದ್ದ ರಾಧಾ ಅವರು ಹಣಕ್ಕಾಗಿ ಜೂನ್ 9ರಂದು ಮನೆಯ ಅಲ್ಮೇರಾ ತೆರೆದಾಗ ಕಳವು ನಡೆದಿರುವುದು ಗೊತ್ತಾಗಿತ್ತು. ಕಳವು ಮಾಡಿದ ನಂತರ ಉಮಾ ಯಾವುದೇ ಅನುಮಾನ ಬಾರದಂತೆ ರಾಧಾರ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದಳು. ಕಳವು ಕೃತ್ಯ ಬೆಳಕಿಗೆ ಬಂದ ಬಳಿಕ ರಾಧಾ, ಆ ಬಗ್ಗೆ ಉಮಾಳನ್ನು ವಿಚಾರಿಸಿದ್ದರು. ಆಗ ಆಕೆ ತನಗೆ ಏನೂ ಗೊತ್ತಿಲ್ಲಎಂದು ಸುಳ್ಳು ಹೇಳಿದ್ದಳು. ಬಳಿಕ ಠಾಣೆಗೆ ದೂರು ಕೊಟ್ಟಿದ್ದ ರಾಧಾ ಮನೆಗೆಲಸದ ಉಮಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ರಾಧಾರ ಮನೆಯ ಸಿ.ಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಉಮಾ, ಜೂನ್ 4ರಂದು ಕೈಯಲ್ಲಿದೊಡ್ಡ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ಮನೆಯಿಂದ ಹೊರ ಹೋಗಿರುವುದು ಗೊತ್ತಾಗಿತ್ತು. ಈ ಸುಳಿವಿನ ಜಾಡು ಹಿಡಿದು ಉಮಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಳು. ಆರೋಪಿಯಿಂದ 57.50 ಲಕ್ಷ ರೂ. ನಗದು ಮತ್ತು 12.66 ಲಕ್ಷ ರೂ. ಮೌಲ್ಯದ 211 ಗ್ರಾಂ. ಚಿನ್ನಾಭರಣ ಸೇರಿದಂತೆ 70.16 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
A woman working as a domestic help has been arrested by Chamarajpet police for allegedly stealing cash and gold worth approximately ₹70.16 lakh from her employer's home. The accused, Uma (43), hails from Chamarajanagar district and had been employed at the residence of a woman named Radha in Chamarajpet.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm