ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ; ಆಡಳಿತ ಸುಗಮಕ್ಕಾಗಿ ಐದು ನಗರ ಪಾಲಿಕೆಗಳಾಗಿ ವಿಭಜನೆ, ಎಲ್ಲ ಕಡೆಗೂ ಪ್ರತ್ಯೇಕ ಆಯುಕ್ತರ ನೇಮಕ 

02-09-25 11:04 pm       Bangalore Correspondent   ಕರ್ನಾಟಕ

ಜನಸಂಖ್ಯೆ, ಬೃಹತ್ ವ್ಯಾಪ್ತಿಯನ್ನು ಆಧರಿಸಿ ಬಿಬಿಎಂಪಿಯನ್ನು ಒಡೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಐದು ಕಾರ್ಪೊರೇಷನ್ ಗಳಾಗಿ ಬದಲಿಸಲಾಗಿದೆ. ಗ್ರೇಟರ್ ಬೆಂಗಳೂರು ರಚನೆ ಬೆನ್ನಲ್ಲೇ ಐದು ನಗರ ಪಾಲಿಕೆಗಳಿಗೆ ಪ್ರತ್ಯೇಕ ಆಯುಕ್ತರನ್ನು ನೇಮಕ ಮಾಡಲಾಗಿದೆ. 

ಬೆಂಗಳೂರು, ಸೆ.2 : ಜನಸಂಖ್ಯೆ, ಬೃಹತ್ ವ್ಯಾಪ್ತಿಯನ್ನು ಆಧರಿಸಿ ಬಿಬಿಎಂಪಿಯನ್ನು ಒಡೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಐದು ಕಾರ್ಪೊರೇಷನ್ ಗಳಾಗಿ ಬದಲಿಸಲಾಗಿದೆ. ಗ್ರೇಟರ್ ಬೆಂಗಳೂರು ರಚನೆ ಬೆನ್ನಲ್ಲೇ ಐದು ನಗರ ಪಾಲಿಕೆಗಳಿಗೆ ಪ್ರತ್ಯೇಕ ಆಯುಕ್ತರನ್ನು ನೇಮಕ ಮಾಡಲಾಗಿದೆ. 

ಬೆಂಗಳೂರು ಉತ್ತರ, ಕೇಂದ್ರ, ಪೂರ್ವ, ದಕ್ಷಿಣ ಹಾಗೂ ಪಶ್ಚಿಮ ಎಂದು ಮಹಾನಗರ ಪಾಲಿಕೆಗಳನ್ನು ವಿಭಜಿಸಿದ್ದು ಅವುಗಳಿಗೆ ಐಎಎಸ್ ಅಧಿಕಾರಿಗಳನ್ನು ಆಯುಕ್ತರಾಗಿ ನೇಮಿಸಲಾಗಿದೆ. ಜನಸಂಖ್ಯೆ ಪ್ರಮಾಣ, ಆದಾಯ, ಕೈಗಾರಿಕೆಗಳು, ಉದ್ಯೋಗದ ಹೆಚ್ಚಳ, ಲಭ್ಯವಿರುವ ಮೂಲಸೌಕರ್ಯ ಸೌಲಭ್ಯಗಳನ್ನು ಆಧರಿಸಿ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಐದು ನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ. ಜಿಬಿಎ ಹಾಗೂ ಐದು ನಗರ ಪಾಲಿಕೆ ಆಡಳಿತ ನಿರ್ವಹಣೆಗೆ ಐಎಎಸ್‌, ಐಪಿಎಸ್‌, ಕೆಎಎಸ್‌, ಕೆಎಸ್‌ಪಿಎಸ್‌ ಹುದ್ದೆಗಳನ್ನು ಮರು ವಿನ್ಯಾಸಗೊಳಿಸಲಾಗಿದೆ.

ಸೆ.2ರಿಂದಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಬೆಂಗಳೂರನ್ನು ಪ್ರತಿನಿಧಿಸುತ್ತಿದ್ದ ಬಿಬಿಎಂಪಿಗೆ ಶಾಸಕ ಎಸ್.ಸುರೇಶ್ ಕುಮಾರ್ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಬಿಬಿಎಂಪಿಗೆ ಎರಡು ನಿಮಿಷದ ಮೌನಾಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ.

ಬೆಂಗಳೂರು ಪಾಲಿಕೆಗಳಿಗೆ 5 ಆಯುಕ್ತರ ನೇಮಕ 

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ವಿಭಜನೆಗೊಂಡ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಸೇರಿದಂತೆ ಐದು ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ನಗರ ಪಾಲಿಕೆ ಆಯುಕ್ತರಾಗಿ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ನೇಮಕ ಮಾಡಲಾಗಿದೆ. ಪೂರ್ವ ನಗರ ಪಾಲಿಕೆ ಆಯುಕ್ತರಾಗಿ ರಮೇಶ್ ಡಿ.ಎಸ್ ನೇಮಕಗೊಂಡಿದ್ದರೆ, ಪೂರ್ವ ಅಪರ ಆಯುಕ್ತರಾಗಿ ಲೋಖಂಡೆ ಸ್ನೇಹಲ್ ಸುಧಾಕರ್ ಅವರನ್ನು ನೇಮಿಸಲಾಗಿದೆ. ಉತ್ತರ ನಗರ ಪಾಲಿಕೆ ಆಯುಕ್ತೆಯಾಗಿ ಪೊಮ್ಮಳ ಸುನೀಲ್ ಕುಮಾರ್, ಉತ್ತರ ಅಪರ ಆಯುಕ್ತರಾಗಿ ಲತಾ ಆರ್‌ ನೇಮಕವಾಗಿದ್ದಾರೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾಗಿ ರಮೇಶ್.ಕೆ ಎನ್, ದಕ್ಷಿಣ ಪಾಲಿಕೆ ಅಪರ ಆಯುಕ್ತರಾಗಿ ಪಾಂಡೆ ರಾಹುಲ್ ತುಕಾರಾಮ್, ಪಶ್ಚಿಮ ಪಾಲಿಕೆ ಆಯುಕ್ತರಾಗಿ ಡಾ.ರಾಜೇಂದ್ರ ಕೆ.ವಿ ಅವರನ್ನು ನೇಮಕ ಮಾಡಲಾಗಿದೆ. ಬೇರೆ ಕರ್ತವ್ಯದಲ್ಲಿರುವ ಐಎಎಸ್‌ ಅಧಿಕಾರಿಗಳಿಗೆ ಇವುಗಳ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.‌

In a major administrative restructuring, the Bruhat Bengaluru Mahanagara Palike (BBMP) has been dissolved and replaced by the Greater Bengaluru Authority (GBA). To ensure smooth governance, the city has been divided into five municipal corporations — North, South, Central, East, and West — each headed by a separate Commissioner.