Hassan Instagram, Suicide: ಪಾರ್ಕ್ ನಲ್ಲಿ ಯುವತಿ ಜೊತೆಗೆ ಕುಳಿತಿದ್ದ ವಿಡಿಯೋ ವೈರಲ್ ; ಗೆಳೆಯರ ಗೇಲಿ ತಾಳಲಾರದೇ ನೊಂದುಕೊಂಡ ಬಿಎ ವಿದ್ಯಾರ್ಥಿ ನೇಣಿಗೆ ಶರಣು 

20-09-25 02:59 pm       HK News Desk   ಕರ್ನಾಟಕ

ಇತ್ತೀಚೆಗೆ ಸೋಶಿಯಲ್‌ ಮೀಡಿಯಾಗಳ ಪ್ರಭಾವ ಹೆಚ್ಚುತ್ತಿದ್ದು ವಿಡಿಯೋದಿಂದ ಕೆಲವರಿಗೆ ಲಾಭ ಆಗಿದ್ದರೆ, ಇನ್ನು ಕೆಲವರು ಟ್ರೋಲ್ ಆಗಿ ಬರ್ಬಾದ್ ಆದವರೂ ಇದ್ದಾರೆ.‌ ಹಾಸನದಲ್ಲಿ ಯುವಕನೊಬ್ಬ ಇದೇ ರೀತಿಯ ಟ್ರೋಲ್ ವಿಡಿಯೋಗೆ ಒಳಗಾಗಿ ಸಾವಿಗೀಡಾದ ಘಟನೆ ನಡೆದಿದೆ. 

ಹಾಸನ, ಸೆ.20 : ಇತ್ತೀಚೆಗೆ ಸೋಶಿಯಲ್‌ ಮೀಡಿಯಾಗಳ ಪ್ರಭಾವ ಹೆಚ್ಚುತ್ತಿದ್ದು ವಿಡಿಯೋದಿಂದ ಕೆಲವರಿಗೆ ಲಾಭ ಆಗಿದ್ದರೆ, ಇನ್ನು ಕೆಲವರು ಟ್ರೋಲ್ ಆಗಿ ಬರ್ಬಾದ್ ಆದವರೂ ಇದ್ದಾರೆ.‌ ಹಾಸನದಲ್ಲಿ ಯುವಕನೊಬ್ಬ ಇದೇ ರೀತಿಯ ಟ್ರೋಲ್ ವಿಡಿಯೋಗೆ ಒಳಗಾಗಿ ಸಾವಿಗೀಡಾದ ಘಟನೆ ನಡೆದಿದೆ. 

ಅರಕಲಗೂಡು ತಾಲೂಕಿನ ಮೊಸಳೆಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿಯಾಗಿದ್ದ ಪವನ್ ಕೆ. (21) ಜೀವ ಕಳಕೊಂಡವ. ಸ್ನೇಹಿತೆಯರೊಂದಿಗೆ ಪಾರ್ಕ್‌ನಲ್ಲಿ ಕುಳಿತಿದ್ದಾಗ ಯುವತಿಯೊಬ್ಬಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ಇದರಿಂದ ಮನನೊಂದ ಆತ ಮನೆ ಬಳಿಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ಘಟನೆ ಹಾಸನದ ಕಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಂದೆ ಇಲ್ಲದ ಪವನ್‌ನನ್ನು ತಾಯಿ ಪುಟ್ಟಲಕ್ಷ್ಮೀ ಗಾರೆ ಕೆಲಸ ಮಾಡಿ ಸಾಕುತ್ತಿದ್ದಳು. ಮಗನನ್ನು ಕಳಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. 

ಯುವತಿಯ ಕೈ ಹಿಡಿದು ಮಾತನಾಡುತ್ತಿದ್ದ ದೃಶ್ಯವನ್ನು ಅಪರಿಚಿತ ಯುವತಿಯೊಬ್ಬಳು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಳು. ನಂತರ ಅದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟಿದ್ಧು ವಿಡಿಯೋ ವೈರಲ್‌ ಆಗಿತ್ತು. ವಿಡಿಯೋ ನೋಡಿ ಪವನ್‌ ಸ್ನೇಹಿತರು ಗೇಲಿ ಮಾಡಿದ್ದರು. ವಿಡಿಯೋಗೆ ಆ ಯುವತಿ ವ್ಯಂಗ್ಯದ ಮಾತುಗಳನ್ನು ಶೀರ್ಷಿಕೆ ಕೊಟ್ಟಿದ್ದಳು. ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಿಂದ ತೆಗೆದುಹಾಕಲು ಪ್ರಯತ್ನಿಸಿದ್ದ ಜೀವನ್ ಅದು ಸಾಧ್ಯವಾಗದೆ ನೊಂದುಕೊಂಡಿದ್ದ. ಗುರುವಾರ ಕಾಲೇಜು ಮುಗಿಸಿ ಮನೆಗೆ ಹೋಗಿ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಪವನ್ ಸಾವಿಗೆ ಕಾರಣಳಾದ ಯುವತಿಯನ್ನು ಬಂಧಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Hassan A 21-year-old BA final year student from Mosalehosahalli First Grade College in Arakalagudu taluk died by suicide after a video of him sitting with a girl in a park went viral on social media, reportedly leading to trolling and humiliation.