ಮಂಗಳೂರು ಬ್ಲಾಸ್ಟ್ ಹಿಂದೆ ಭಾರೀ ಸಂಚಿತ್ತು, ಆತ ಸುಸೈಡ್ ಬಾಂಬರ್ ಆಗಿದ್ದ ; ಗೃಹ ಸಚಿವ ಜ್ಞಾನೇಂದ್ರ 

21-11-22 04:02 pm       HK News Desk   ಕರ್ನಾಟಕ

ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟ ಘಟನೆ ಹಿಂದೆ ಭಾರಿ ದೊಡ್ಡ ಕಾರಸ್ಥಾನ ಇದೆ. ಬಹಳಷ್ಟು ಸಾವು ನೋವು ಉಂಟು ಮಾಡುವ ಕೆಲಸಕ್ಕಾಗಿ ಆತ ಹೋಗ್ತಿದ್ದ. ಘಟನೆಯಲ್ಲಿ ಶಂಕಿತ ಉಗ್ರ ಗಾಯಗೊಂಡಿದ್ದಾನೆ.

ಶಿವಮೊಗ್ಗ, ನ.20 : ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟ ಘಟನೆ ಹಿಂದೆ ಭಾರಿ ದೊಡ್ಡ ಕಾರಸ್ಥಾನ ಇದೆ. ಬಹಳಷ್ಟು ಸಾವು ನೋವು ಉಂಟು ಮಾಡುವ ಕೆಲಸಕ್ಕಾಗಿ ಆತ ಹೋಗ್ತಿದ್ದ. ಘಟನೆಯಲ್ಲಿ ಶಂಕಿತ ಉಗ್ರ ಗಾಯಗೊಂಡಿದ್ದಾನೆ. ಆತ ಮಾತನಾಡಲು ಆರಂಭಿಸಿದ ನಂತರ ಇದರ ಹಿಂದಿರುವ ಜಾಲ ಯಾವುದು ಎಂದು ತಿಳಿಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

ಮಾಹಿತಿ ಪ್ರಕಾರ ತೀರ್ಥಹಳ್ಳಿ ಮೂಲದ ಶಾರೀಕ್ ಎಂಬುದು ಗೊತ್ತಾಗಿದೆ. ಹೀಗಾಗಿ ತೀರ್ಥಹಳ್ಳಿಯಲ್ಲೂ ಪೊಲೀಸರು ದಾಳಿ ನಡೆಸಿದ್ದಾರೆ. ಅನುಮಾನ ಬಂದ ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಈ ದೇಶದಲ್ಲಿ ರಕ್ತ ಹರಿಸುವ, ಪ್ರಾಣ ಹತ್ಯೆ ಮಾಡುವ ಕೆಲಸ ಮೋದಿ ಸರ್ಕಾರ ಬಂದ ನಂತರ ನಿಂತು ಹೋಗಿದೆ. ಬಹಳಷ್ಟು ಕಡಿಮೆಯಾಗಿದೆ.‌ ಆದರೂ ಅಲ್ಲಿ ಇಲ್ಲಿ ತಲೆ ಎತ್ತುವ ಕೆಲಸ ಆಗ್ತಿದೆ. ಅಮೂಲಾಗ್ರವಾಗಿ ಇದರ ಬೇರುಗಳನ್ನು ಕಿತ್ತು ಹಾಕುವ ಕೆಲಸವನ್ನು ತನಿಖಾ ತಂಡ ಮಾಡ್ತಾರೆ. 

ಘಟನೆ ಬಳಿಕ ಮಂಗಳೂರಿಗೆ ಕೇಂದ್ರ ತಂಡ ಭೇಟಿ ನೀಡಿದೆ. ಇದನ್ನು ವಿಶೇಷವಾಗಿ ತನಿಖೆಗೆ ಒಳಪಡಿಸಿದ್ದಾರೆ. ಶಾರೀಕ್, ಹುಬ್ಬಳ್ಳಿಯಲ್ಲಿ ಸ್ವಲ್ಪ ದಿನ ಇದ್ದ. ಅಲ್ಲಿ ಆಧಾರ್ ಕಾರ್ಡ್ ಕಳವು ಮಾಡಿದ್ದ. ಮೈಸೂರಿನಲ್ಲಿ ವಾಸ ಇದ್ದ ಜಾಗಕ್ಕೆ ಪೊಲೀಸರು ದಾಳಿ ಮಾಡಿದ್ದಾರೆ. ಸಮಗ್ರವಾಗಿ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ. 

ಶಿವಮೊಗ್ಗ ತುಂಗಾನದಿ ಟ್ರಯಲ್ ಬ್ಲ್ಯಾಸ್ಟ್ ಹಾಗೂ ಮಂಗಳೂರು ಬ್ಲಾಸ್ಟ್ ಗೂ ಲಿಂಕ್ ಇದೆ. ಎರಡರ ಬಗ್ಗೆಯೂ ಪೊಲೀಸರು ತನಿಖೆ ಮಾಡ್ತಾರೆ. ಏನೇ ಆದರೂ ಇದನ್ನು ಹುಟ್ಟಡಗಿಸುವ ಕೆಲಸವನ್ನು ನಮ್ಮ ಸರ್ಕಾರ, ಪೊಲೀಸ್ ಇಲಾಖೆ ಮಾಡ್ತದೆ. ಮೂರು ಜನರನ್ನು ವಶಕ್ಕೆ ಪಡೆದಿದ್ದಾರೆ. ಕುಕ್ಕರ್ ಬ್ಲಾಸ್ಟ್ ಆದ ವೇಳೆ ಹೆಚ್ಚಿನ ಜನರು ಇರಲಿಲ್ಲ. ಯಾರು ತಂದಿದ್ದನೋ ಅವನೇ ಸುಟ್ಟುಕೊಂಡಿದ್ದಾನೆ. ಪಾಪದ ರಿಕ್ಷಾ ಚಾಲಕ ಗಾಯಗೊಂಡಿದ್ದಾನೆ.

 

Terrorists link behind the Mangaluru rickshaw blast ! - Sanatan Prabhat

Mangaluru blast suspect Shariq has IS links; misused stolen Aadhaar card:  Police | Bengaluru - Hindustan Times

ಹಿಂದಿನ ಸರ್ಕಾರ ಇದ್ದಾಗ ಇಂತಹ ಪ್ರಕರಣ ನಡೆದಾಗ ಎಫ್ ಐಆರ್ ಹಾಕಿ ಸುಮ್ಮನಾಗುತ್ತಿದ್ದರು. ಈಗ ಅಮೂಲಾಗ್ರವಾಗಿ ಪರಿಶೀಲನೆ ನಡೆಯುತ್ತದೆ. ಮೇಲ್ನೋಟಕ್ಕೆ ಆತ ಸೂಸೈಡ್ ಬಾಂಬರ್ ಅಂತ  ಅನಿಸುತ್ತದೆ. ತೀವ್ರ ತನಿಖೆಯ ಬಳಿಕ ನೈಜ ವಿವರ ಗೊತ್ತಾಗಲಿದೆ. ಘಟನೆಯಲ್ಲಿ ಗಾಯಗೊಂಡಿರುವನು ಶಾರೀಕ್ ಅವನೇ. ಶಾರೀಕ್ ಜೊತೆ ಸಂಪರ್ಕ ಹೊಂದಿದ್ದರು ಎಂಬ ಅನುಮಾನದ ಮೇಲೆ ತೀರ್ಥಹಳ್ಳಿಯಲ್ಲಿ ಕೆಲವು ಮನೆಗಳ ಮೇಲೆ ದಾಳಿ ನಡೆದಿದೆ. ಶಂಕಿತ ಉಗ್ರ ಅಬ್ದುಲ್ ಮತೀನ್ ತಲೆಮರೆಸಿಕೊಂಡಿದ್ದು ಆತನನ್ನು ಪತ್ತೆ ಹಚ್ಚಲಾಗುತ್ತಿದೆ. ಎಲ್ಲೆಡೆ ತೀವ್ರ ತಪಾಸಣೆ ನಡೆಯುತ್ತಿದೆ. ಇವರ ಹಿಂದೆ ಬೇರೆ ಬೇರೆ ಬ್ಯಾಕ್ ಗ್ರೌಂಡ್ ಇದೆ. ಅವರು ಸ್ಥಳ ಬದಲಾವಣೆ ಮಾಡ್ತಿರುತ್ತಾರೆ. ಹೀಗಾಗಿ ಪತ್ತೆ ಹಚ್ಚಲು ಕಷ್ಟವಾಗ್ತಿದೆ. ಆದರೂ ಹಿಡಿಯುತ್ತಾರೆ ಎಂದರು.

People involved in Mangaluru Autorickshaw blast had a bigger plan, Shariq was a Suicide bomber says Home Minister Araga Jnanendra.