ಮದ್ಯ ಖರೀದಿ ವಯಸ್ಸಿನ ಮಿತಿ ಇಳಿಸುವ ಪ್ರಸ್ತಾಪ ಕೈಬಿಟ್ಟ ಸರ್ಕಾರ ; ಟೀಕೆಗೆ ಬೆದರಿದ ಆಡಳಿತ 

18-01-23 10:08 pm       Bangalore Correspondent   ಕರ್ನಾಟಕ

ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನ 21ರ ಬದಲಾಗಿ 18ಕ್ಕೆ ಇಳಿಸಲು ಮುಂದಾಗಿದ್ದ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. 

ಬೆಂಗಳೂರು, ಜ.18 : ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನ 21ರ ಬದಲಾಗಿ 18ಕ್ಕೆ ಇಳಿಸಲು ಮುಂದಾಗಿದ್ದ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. 

ಮದ್ಯ ಖರೀದಿ ಮತ್ತು ಕನಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 18 ಕ್ಕೆ ಇಳಿಸಲು 'ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತು) ನಿಯಮಗಳು-1967'ಕ್ಕೆ ತಿದ್ದುಪಡಿ ತರಲು ಅಬಕಾರಿ ಇಲಾಖೆಯಿಂದ ಕರಡು ಪ್ರಸ್ತಾವನೆ ಪ್ರಕಟಿಸಿತ್ತು. 

ಮದ್ಯ ಖರೀದಿ ವಯಸ್ಸಿನ ಮಿತಿ ಕಡಿತ ಮಾಡಿ ಕರಡು ಅಧಿಸೂಚನೆಯನ್ನು ಸೋಮವಾರ ಪ್ರಕಟಿಸಿತ್ತು. ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಖಂಡನೆ ವ್ಯಕ್ತವಾಗುತ್ತಿದ್ದಂತೆ, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಕೂಡ ಕಡು ಟೀಕೆ ಮಾಡಿದ್ದರು.

The Karnataka government has proposed changes to the Excise rules in the state to lower the legal age for the purchase of liquor from 21 years to 18 years. The proposal is based on the recommendation of a committee set up under retired bureaucrat V Yashwanth and is in response to demands from the liquor lobby. The Finance Department published a draft of the proposed changes on January 9 and is inviting objections from the public within 30 days.