ಬ್ರೇಕಿಂಗ್ ನ್ಯೂಸ್
25-10-24 09:49 pm HK News Desk ಕರ್ನಾಟಕ
ಹಾವೇರಿ, ಅ.25: ಶಿಗ್ಗಾಂವಿ ಉಪ ಚುನಾವಣೆಗೆ ಒಂದೆಡೆ ರಣಕಣ ಸಿದ್ಧವಾಗುತ್ತಿದ್ದರೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಆರ್ಭಟಕ್ಕೆ ಕೈ ಪಡೆ ವಿಲವಿಲ ಎಂದು ಒದ್ದಾಡಿದೆ. ಟಿಕೆಟ್ ಸಿಗದ ಸಿಟ್ಟಿನಲ್ಲಿದ್ದ ಅಜ್ಜಂಪೀರ್ ಖಾದ್ರಿ ಅವರನ್ನು ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಬಂದಿದ್ದಾಗಲೇ ಬೈಕ್ ಏರಿ, ಓಡೋಡಿ ಬಂದು ಖಾದ್ರಿ ಉಮೇದುವಾರಿಕೆ ಸಲ್ಲಿಸಿ ಅಚ್ಚರಿ ಸೃಷ್ಟಿಸಿದ್ದಾರೆ. ಖಾದ್ರಿ ನಡೆಗೆ ಕೈ ಪಡೆಯ ಜಂಘಾಬಲವೇ ಉಡುಗಿ ಹೋಗಿದೆ. ಈ ನಡುವೆ ಕೈ ಪಡೆಯ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಕೈ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಶಿಗ್ಗಾವಿ ಟಿಕೆಟ್ ಹಂಚಿಕೆ ಮಾಡುವಲ್ಲಿ ಸುಸ್ತು ಹೊಡೆದಿದ್ದ ಕೈ ನಾಯಕರು ನಿನ್ನೆ ಕೊನೆ ಕ್ಷಣದಲ್ಲಿ ಯಾಸೀರ್ ಖಾನ್ ಪಠಾಣ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಪಠಾಣ ಶಿಗ್ಗಾವಿ ಕ್ಷೇತ್ರದ ಕೈ ಅಭ್ಯರ್ಥಿ ಎಂದು ಘೋಷಣೆ ಆಗುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಯಾಸೀರ್ ಪಠಾಣ್ ವಿರುದ್ದ ತಿರುಗಿ ಬಿದ್ದಿದ್ದರು. ಪಠಾಣ್ ಒಬ್ಬ ರೌಡಿ ಶೀಟರ್, ಗೂಂಡಾಗಿರಿ ಮಾಡುತ್ತಾನೆ, ಬೊಮ್ಮಾಯಿ ಏಜೆಂಟ್ ಗೆ ಶಿಗ್ಗಾವಿಯಲ್ಲಿ ಬಕ್ರಾ ಮಾಡಲು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಟಿಕೆಟ್ ಕೊಡಿಸಿದ್ದಾರೆಂದು ಬೆಂಕಿ ಉಗುಳಿದ್ದರು.
ಬಂಡಾಯದ ಮುನ್ಸೂಚನೆ ಅರಿತ ಸಚಿವ ಜಮೀರ್ ಅಹ್ಮದ್ ಖಾನ್ ಹುಲಗೂರಿನ ಖಾದ್ರಿ ನಿವಾಸದಲ್ಲಿ ಮನವೊಲಿಸಲು ಬಂದಿದ್ದರು. ಕೈ ಪಡೆಯ ತಂತ್ರಗಾರಿಕೆ ಅರಿತ ಅಜ್ಜಂಪೀರ್ ಖಾದ್ರಿ, ತನ್ನ ನಿವಾಸದಲ್ಲಿ ಜಮೀರ್ ಇದ್ದಾಗಲೇ ಕೊನೆ ಕ್ಷಣದಲ್ಲಿ ಪಲ್ಸರ್ ಬೈಕ್ ಏರಿ ಹತ್ತು ನಿಮಿಷದಲ್ಲಿ ತಹಶೀಲ್ದಾರ್ ಕಚೇರಿ ತಲುಪಿದ್ದರು. 13 ನಿಮಿಷ ಬಾಕಿ ಇರುವಂತೆ ಓಡೋಡಿ ಬಂದು ನಾಮಪತ್ರ ಸಲ್ಲಿಸಿ ಕೈ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಇತ್ತ ಸಚಿವ ಜಮೀರ್ ಅಹ್ಮದ್ ಅವರನ್ನು ಮನೆಯಿಂದ ಹೊರ ಬರಲೂ ಆಗದಂತೆ ಖಾದ್ರಿ ಬೆಂಬಲಿಗರು ಲಾಕ್ ಮಾಡಿದ್ದರು. ಜಮೀರ್ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದೂ ಆಯ್ತು. ಆಕ್ರೋಶಕ್ಕೆ ತುತ್ತಾದ ಜಮೀರ್ ಅಲ್ಲಿಂದ ಕಾಲ್ಕಿತ್ತು ಬರುವುದರದಲ್ಲಿ ಸುಸ್ತು ಹೊಡೆದಿದ್ದರು.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರು ಸಚಿವ ಸತೀಶ್ ಜಾರಕಿಹೋಳಿ, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ ಜೊತೆ ತೆರಳಿ ನಾಮಪತ್ರ ಸಲ್ಲಿಸಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಇದೇ ವೇಳೆ, ಕಾಂಗ್ರೆಸಿನ ಮಾಜಿ ಸಂಸದ ಮಂಜುನಾಥ ಕುನ್ನೂರ ಸಹ ಬಂಡಾಯ ಬಾವುಟ ಹಾರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಶಿಗ್ಗಾಂವಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದ್ದು ಕೈ ಪಡೆಗೆ ಇಬ್ಬರು ಬಂಡಾಯ ಸ್ಪರ್ಧೆ ಮಾಡಿರುವುದು ಆಡಳಿತ ಪಕ್ಷಕ್ಕೆ ಕೈ ಸುಟ್ಟುಕೊಳ್ಳುವ ಸ್ಥಿತಿಯಾಗಿದೆ.
ಮತ್ತೊಂದೆಡೆ ಕಮಲ ಕೋಟೆಯನ್ನು ಭದ್ರಗೊಳಿಸಲು ಚುನಾವಣಾ ಅಖಾಡಕ್ಕೆ ಇಳಿದಿರುವ ಕಮಲ ನಾಯಕರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋ ನಡೆಸಿ ಶಕ್ರಿ ಪ್ರದರ್ಶನ ಮಾಡಿದರು. ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮುರುಗೇಶ್ ನಿರಾಣಿ ಜೊತೆಯಾಗಿ ತೆರಳಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
On the last day for filing nomination papers to the byelections in Shiggaon Assembly Constituency on Friday, 25 sets of nomination papers were filed by 20 candidates of various parties and Independents, including two rebel candidates of the Congress in the form of the former MLA Syed Azeem Peer Khadri and the former MP Manjunath Kunnur.
10-12-24 10:47 pm
HK News Desk
Panchamasali Protest, Belagavi: ಬೆಳಗಾವಿ ಸುವರ್...
10-12-24 10:32 pm
Murudeshwara beach drowning bhatkal: ಮುರ್ಡೇಶ್...
10-12-24 10:03 pm
SM krishna school holiday: ಎಸ್ಸೆಂ ಕೃಷ್ಣ ನಿಧನ...
10-12-24 11:48 am
SM Krishna Death, Wikipedia; ಬೆಂಗಳೂರಿಗೆ 'ಸಿಲಿ...
10-12-24 11:34 am
10-12-24 10:57 pm
HK News Desk
Idli Guru, Franchise Fraud, Owner Karthik She...
09-12-24 10:12 pm
Assad dynasty; ಸಿರಿಯಾದಲ್ಲಿ 54 ವರ್ಷಗಳ ವಂಶಾಡಳಿತ...
09-12-24 12:17 pm
ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆ ; ಭಾ...
05-12-24 11:00 pm
Devendra Fadnavis, Maharashtra New CM; 'ಮಹಾ'...
04-12-24 01:29 pm
10-12-24 09:37 pm
Mangalore Correspondent
Ranjith Ballal Bike Accident, Kundapur, Manga...
09-12-24 11:05 pm
Swamiji, Mangalore, Waqf: ಬಾಂಗ್ಲಾ ವಿರುದ್ಧ ಇಸ್...
09-12-24 07:40 pm
Ullal, Mangalore, Accident, Netravathi bridge...
09-12-24 06:03 pm
ಜೋಕಾಲಿಗೆ ಸಿಲುಕಿ 3ನೇ ತರಗತಿ ಬಾಲಕಿ ಸಾವಿನ ಸುದ್ದಿಗ...
09-12-24 03:26 pm
10-12-24 11:18 pm
Mangalore Correspondent
Mangalore crime, Kadri police, robbery: ಕಂಕನಾ...
10-12-24 06:46 pm
ಕೇವಲ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರಿಗೆ ವ...
10-12-24 03:59 pm
Chikkamagaluru murder: ಸೋಶಿಯಲ್ ಮೀಡಿಯಾದಲ್ಲಿ ಪರ...
08-12-24 05:02 pm
ಷೇರು ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರ ಮೋಸ ; ನಕಲಿ ಟ...
07-12-24 09:48 pm