ಬ್ರೇಕಿಂಗ್ ನ್ಯೂಸ್
10-08-25 06:06 pm Bangalore Correspondent ಕರ್ನಾಟಕ
ಬೆಂಗಳೂರು, ಆ.10 : ಬೆಂಗಳೂರು ನಗರದ ಆತ್ಮೀಯ ನಾಗರಿಕ ಬಂಧು, ಭಗಿನಿಯರೇ... ನಿಮಗೆಲ್ಲ ನನ್ನ ನಮಸ್ಕಾರಗಳು... ಮೆಟ್ರೋ ಹಳದಿ ಲೈನ್ ಕಾರ್ಯಾರಂಭ, ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲು ಬೆಂಗಳೂರಿಗೆ ಭಾನುವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಐಐಟಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಆಡಿದ ಮಾತುಗಳಿವು.
ಕರ್ನಾಟಕದ ಮಣ್ಣಿಗೆ ಕಾಲಿಟ್ಟಾಗ ನಮ್ಮತನದ ಅರಿವಾಗುತ್ತದೆ. ಕನ್ನಡ ಭಾಷೆಯ ಸೆಳೆತ, ಇಲ್ಲಿಯ ಜನರ ಪ್ರೀತಿಗೆ ಹೃದಯ ತುಂಬುತ್ತದೆ. ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡುವ ವೇಳೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಬೆಸೆಯುವ ಮತ್ತು ಅಭಿವೃದ್ಧಿಯ ದೂರದದೃಷ್ಟಿ ಇಟ್ಟುಕೊಂಡಿದ್ದರು. ಬೆಂಗಳೂರು ಕೆಂಪೇಗೌಡರ ಆ ಕನಸನ್ನು ಇಂದು ಸಾಕಾರಗೊಳಿಸುತ್ತಿದೆ. ಬೆಂಗಳೂರು ಇಂದು ನವ ಭಾರತದ ಉಗಮದ ಸಂಕೇತವಾಗಿ ಬೆಳೆಯುತ್ತಿದೆ. ಆತ್ಮದಲ್ಲಿ ತತ್ವಜ್ಞಾನ, ಕ್ರಿಯೆಯಲ್ಲಿ ವಿಜ್ಞಾನವಿದೆ. ಜಾಗತಿಕವಾಗಿ ಭಾರತದ ಐಟಿಯ ಪ್ರಗತಿಯ ದ್ಯೋತಕವಾಗಿ ಬೆಂಗಳೂರು ಬೆಳೆಯುತ್ತಿದೆ. ಬೆಂಗಳೂರಿನ ಯಶಸ್ಸಿನ ಹಿಂದೆ ಇಲ್ಲಿಯ ಜನರ ಶ್ರಮ ಮತ್ತು ಪ್ರತಿಭೆ ಎರಡೂ ಇದೆ. ಇದರ ಕೀರ್ತಿ ನಿಮಗೆ ಸಲ್ಲಬೇಕು ಎಂದು ಮೋದಿ ಹೇಳಿದರು.
ಈ ಶತಮಾನದಲ್ಲಿ ನಗರ ಯೋಜನೆ ಮತ್ತು ನಗರದ ಮೂಲಸೌಕರ್ಯಗಳು ಪ್ರಮುಖ ಸವಾಲುಗಳು ಎನಿಸಿವೆ. ಬೆಂಗಳೂರಿನಂತಹ ನಗರಗಳನ್ನು ನಾವು ಭವಿಷ್ಯದ ದೃಷ್ಟಿಕೋನ ಇಟ್ಟುಕೊಂಡು ತಯಾರು ಮಾಡಬೇಕಿದೆ. ಬೆಂಗಳೂರಿಗೆ ಕೇಂದ್ರ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ನೀಡಿದೆ. ಇಂದು ಬೆಂಗಳೂರಿನಲ್ಲಿ ಮೆಟ್ರೋ ಯೋಜನೆಗಳ ಆರಂಭ, ಶಿಲಾನ್ಯಾಸ ಮತ್ತು ವಂದೇ ಭಾರತ್ ರೈಲುಗಳ ಆರಂಭವಾಗಿದೆ. ಇದರಿಂದ ವ್ಯಾಪಾರ, ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದರು.
ಆಪರೇಷನ್ ಸಿಂಧೂರದಲ್ಲಿ ಭಾರತದ ಸೈನಿಕರ ಯಶಸ್ಸು, ಇಡೀ ಜಗತ್ತಿಗೆ ನವ ಭಾರತದ ಶಕ್ತಿಯನ್ನು ಪರಿಚಯಿಸಿದೆ. ಆಪರೇಷನ್ ಸಿಂದೂರದ ಯಶಸ್ಸಿನಲ್ಲಿ ನಮ್ಮ ದೇಶದ ತಂತ್ರಜ್ಞಾನ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಮೇಕ್ ಇನ್ ಇಂಡಿಯಾದ ಬಹಳಷ್ಟು ಕೊಡುಗೆ ಇದೆ. ಇದರಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಯುವಶಕ್ತಿಯ ಬಹಳ ದೊಡ್ಡ ಕೊಡುಗೆ ಇದೆ. ಇದಕ್ಕಾಗಿ ಇಲ್ಲಿಯ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿಯವರು ಹೇಳಿದರು. ಇಂದು ಬೆಂಗಳೂರನ್ನು ಜಾಗತಿಕವಾಗಿ ಗುರುತಿಸಲಾಗುತ್ತಿದೆ. ಇಂದಿನ ಕಾಲಘಟ್ಟದಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಕೂಡ ಮಾಡಬೇಕು, ಜೊತೆಗೆ ನಾಯಕತ್ವವನ್ನೂ ವಹಿಸಿಕೊಳ್ಳಬೇಕು. ನಮ್ಮ ನಗರಗಳು ಸ್ಮಾರ್ಟ್, ಫಾಸ್ಟ್ ಮತ್ತು ಪ್ರಾಮಾಣಿಕವಾದಾಗ ಮಾತ್ರ ನಾವು ಮುನ್ನಡೆಯುತ್ತೇವೆ. ಅದಕ್ಕಾಗಿ ನಾವು ಯೋಜನೆಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. 2014ರ ತನಕ ಮೆಟ್ರೋ 5 ನಗರಗಳನ್ನು ಮಾತ್ರ ತಲುಪುತ್ತಿತ್ತು, ಇವತ್ತು 24 ನಗರಗಳಿಗೆ ಸಂಪರ್ಕ ಜೊತೆಗೆ 1000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ನೆಟ್ವರ್ಕ್ ಹರಡಿದೆ. ಭಾರತ ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಮೆಟ್ರೋ ನೆಟ್ವರ್ಕ್ ಹೊಂದಿರುವ ಜಗತ್ತಿನ ಮೂರನೇ ದೇಶವೆನಿಸಿದೆ.
2014ರ ತನಕ 20,000 ಕಿಲೋಮೀಟರ್ ವ್ಯಾಪ್ತಿಯಷ್ಟೇ ರೈಲ್ವೆ ವಿದ್ಯುದೀಕರಣ ಆಗಿತ್ತು, ಕಳೆದ 11 ವರ್ಷಗಳಲ್ಲಿ ನಾವು 40,000 ಕಿಲೋಮೀಟರ್ ವ್ಯಾಪ್ತಿಯಷ್ಟು ರೈಲ್ವೆ ಮಾರ್ಗ ವಿದ್ಯುದೀಕರಣ ಮಾಡಿದ್ದೇವೆ. ನಾವು ಅಭಿವೃದ್ಧಿಯ ಕಾರ್ಯದಲ್ಲಿ ನೆಲ, ಜಲ ಮತ್ತು ನಭ ಎಲ್ಲವನ್ನೂ ಸಮಾನವಾಗಿ ನೋಡಿದ್ದೇವೆ ಎಂದು ಮೋದಿ ಹೇಳಿದರು. ಕಾರ್ಯಕ್ರಮದ ಉದ್ದಕ್ಕೂ ಮೋದಿ ದೇಶ, ರಾಜ್ಯದ ಅಭಿವೃದ್ಧಿ ವಿಚಾರದತ್ತ ಗಮನ ಸೆಳೆದರಾದರೂ ಎರಡು ದಿನಗಳ ಹಿಂದೆ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡಿದ ಬಗ್ಗೆ ಚಕಾರ ಎತ್ತಲಿಲ್ಲ. ವೇದಿಕೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇದ್ದರು.
Prime Minister Narendra Modi on Sunday praised Bengaluru’s talent and contribution to national defence and infrastructure, delivering a speech in Kannada during a public programme at IIT Bengaluru after inaugurating the Metro Yellow Line and flagging off a Vande Bharat Express train.
10-08-25 06:27 pm
Bangalore Correspondent
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ; 80 ಸಾವಿ...
09-08-25 08:00 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm