ದೆಹಲಿಯಲ್ಲಿ ಭೂಕಂಪನ ; ಉತ್ತರಾಖಂಡದಲ್ಲೂ ನಡುಗಿದ ಭೂಮಿ, ಮನೆಯಿಂದ ಹೊರ ಬಂದ ಜನತೆ ! 

24-01-23 04:58 pm       HK News Desk   ದೇಶ - ವಿದೇಶ

ದೆಹಲಿಯ ರಾಷ್ಟ್ರ ರಾಜಧಾನಿ ವಲಯದಲ್ಲಿ ಭೂಕಂಪನ ಉಂಟಾಗಿರುವ ಘಟನೆ ನಡೆದಿದೆ.

ನವದೆಹಲಿ, ಜ 24: ದೆಹಲಿಯ ರಾಷ್ಟ್ರ ರಾಜಧಾನಿ ವಲಯದಲ್ಲಿ ಭೂಕಂಪನ ಉಂಟಾಗಿರುವ ಘಟನೆ ನಡೆದಿದೆ.

ಭೂಮಿ ಕಂಪನದಿಂದ ಕಟ್ಟಡಗಳಲ್ಲಿರುವವರಿಗೆ ಸುಮಾರು 30 ಸೆಕೆಂಡುಗಳ ಕಾಲ ನಡುಕದ ಅನುಭವ ಉಂಟಾಗಿದ್ದು ಈ ವಲಯದಲ್ಲಿ ಅನೇಕರು ಮನೆಯಿಂದ ಓಡಿ ಬಂದಿದ್ದಾರೆ. 

ಉತ್ತರಾಖಂಡ, ನೇಪಾಳದಲ್ಲಿ ಭೂಕಂಪ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

ರಾಜಸ್ಥಾನದ ರಾಜಧಾನಿ ಜೈಪುರದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಇದುವರೆಗೂ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.

An earthquake with a magnitude of 5.8 hit Nepal on Tuesday with strong tremors being felt across Delhi and surrounding areas. "An earthquake with a magnitude of 5.8 on the Richter Scale hit Nepal at 2:28 pm today," National Center for Seismology (NCS) said.