ಬ್ರೇಕಿಂಗ್ ನ್ಯೂಸ್
01-08-24 11:26 am HK News Desk ದೇಶ - ವಿದೇಶ
ತಿರುವನಂತಪುರಂ, ಆ 01: ವಯನಾಡ್ ಜಿಲ್ಲೆಯ ನಾಲ್ಕು ಗ್ರಾಮಗಳು ನಾಮಾವಶೇಷ ಆಗುತ್ತಲೇ ಮಾನವ ಕೃತ ಅಪರಾಧ ಎನ್ನುವ ಆಕ್ಷೇಪದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. 13 ವರ್ಷಗಳ ಹಿಂದೆ ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಮಾಧವ ಗಾಡ್ಗೀಳ್ ಕೊಟ್ಟ ವರದಿಯನ್ನು ನಿರ್ಲಕ್ಷಿಸಿದ್ದೇ ಈ ಘೋರ ದುರಂತಕ್ಕೆ ಕಾರಣ ಎಂದು ಪರಿಸರ ಪ್ರಿಯರು ಆಕ್ಷೇಪ ಎತ್ತಿದ್ದಾರೆ. 2018ರಲ್ಲಿ ದುರಂತ ಆದಾಗಲೂ ಇದೇ ರೀತಿಯ ಚರ್ಚೆ ಬಂದಿದ್ದರೂ ಯಾವುದೇ ಕ್ರಮವಂತೂ ಆಗಿರಲಿಲ್ಲ. ಸರಕಾರದ ನಿರ್ಲಕ್ಷ್ಯದಿಂದಾಗಿ ಈ ಬಾರಿ ನೂರಾರು ಜನರು ಸತ್ತಿದ್ದಾರೆ. ಸಾವಿರಾರು ಜನ ಊನಗೊಂಡಿದ್ದಾರೆ.
ಪರಿಸರ ಸೂಕ್ಷ್ಮ ಎಂದು ಗುರುತಿಸಿದ್ದ ವಲಯದಲ್ಲಿ ಕಲ್ಲು ಗಣಿಗಾರಿಕೆ, ಕ್ವಾರಿಗಳಿಗೆ ಅವಕಾಶ ನೀಡಬಾರದು, ದೊಡ್ಡ ಮಟ್ಟದ ಕೈಗಾರಿಕೆ, ಕಾಮಗಾರಿಗಳಿಗೆ ಅವಕಾಶ ನೀಡಬೇಡಿ ಎಂದು ಮಾಧವ್ ಗಾಡ್ಗೀಳ್ ಒತ್ತಿ ಹೇಳಿದ್ದರು. ಆ ವರದಿಯಲ್ಲಿ ಈಗ ದುರಂತಕ್ಕೆ ಸಾಕ್ಷಿಯಾದ ಮುಂಡಕ್ಕೈ, ಮೇಪ್ಪಾಡಿ, ಚೂರಲ್ಮಾಲ ಆಸುಪಾಸಿನ ಗ್ರಾಮಗಳನ್ನೇ ಉಲ್ಲೇಖಿಸಲಾಗಿತ್ತು. ಅತಿಯಾದ ಮಾನವ ದುರ್ಬಳಕೆಯ ಕಾರಣದಿಂದಲೇ ದುರಂತಕ್ಕೆ ಕಾರಣವಾಗಿದೆ. ಬೆಟ್ಟ ಒಡೆದು ಭೂಮಿ ಕುಸಿತಗೊಳ್ಳಲು ಮಾನವ ಕೃತ ಅಪರಾಧಗಳೇ ಕಾರಣ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಮಾಧವ ಗಾಡ್ಗೀಳ್ ವರದಿಯ ಪ್ರಕಾರ, ಕೇರಳದಲ್ಲಿ 18 ಕಡೆ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ವಯನಾಡ್ ಜಿಲ್ಲೆಯಲ್ಲಿ ದುರಂತಕ್ಕೀಡಾದ ಗ್ರಾಮಗಳು, ಬ್ರಹ್ಮಗಿರಿ – ತಿರುನೇಲಿ, ವಯನಾಡ್, ಬಾನಾಸುರ ಜಲಾಶಯ, ನಿಲಂಬೂರು, ಮೇಪ್ಪಾಡಿ ಪ್ರದೇಶಗಳಿದ್ದವು. ಮೇಪ್ಪಾಡಿ, ಮುಂಡಕ್ಕೈ ಗ್ರಾಮದ 2-3 ಕಿಮೀ ವ್ಯಾಪ್ತಿಯಲ್ಲೀಗ ಭೂಕುಸಿತಗಳಾಗಿದ್ದು, ಅಲ್ಲಿದ್ದ ಮನೆ, ಕಟ್ಟಡಗಳೆಲ್ಲ ಭೂಮಿಯಲ್ಲಿ ಲೀನಗೊಂಡಿವೆ. ಅಲ್ಲಿನ ಬೆಟ್ಟಗಳು ಛಿದ್ರಗೊಂಡಿದ್ದು, ಪರಿಸರ ಸೂಕ್ಷ್ಮ ಪ್ರದೇಶಕ್ಕೆ ತೀವ್ರ ಗೀರು ಗಾಯಗಳಾಗಿರುವುದಕ್ಕೆ ಸಾಕ್ಷಿಯಾಗಿ ನಿಂತಿದೆ.
ಗಾಡ್ಗೀಳ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯ- 1 ಮತ್ತು 2 ಎಂದು ಪ್ರತ್ಯೇಕವಾಗಿ ಗುರುತಿಸಿದ್ದರು. ಒಂದನೇ ವಲಯದಲ್ಲಿ ಯಾವುದೇ ಮಾನವ ಅತಿಕ್ರಮಣಕ್ಕೆ ಅವಕಾಶ ನೀಡದಂತೆ ಸರಕಾರಕ್ಕೆ ಆಗ್ರಹ ಮಾಡಿದ್ದರು. ಅದರಲ್ಲಿ ವಯನಾಡ್ ಜಿಲ್ಲೆಯ ವೈತಿರಿ, ಮಾನಂದವಾಡಿ, ಸುಲ್ತಾನ್ ಬತ್ತೇರಿ ಪ್ರದೇಶಗಳು ಒಂದನೇ ವಲಯದಲ್ಲಿ ಬಂದಿದ್ದವು. ಆ ಭಾಗದಲ್ಲಿ ನೆಲೆಸಿರುವ ಜನರಿಂದ ತಮಗೆ ಅಭಿವೃದ್ಧಿ ಕೆಲಸ ಮಾಡಲಾಗಲ್ಲ, ದೊಡ್ಡ ಮಟ್ಟದ ಕಾಮಗಾರಿ ಮಾಡಲಾಗುವುದಿಲ್ಲ ಎಂದು ಆಕ್ಷೇಪಗಳು ಬಂದಿದ್ದವು. ಅದೇ ಕಾರಣಕ್ಕೆ ಆಗಿನ ಉಮ್ಮನ್ ಚಾಂಡಿ ಸರಕಾರ ಗಾಡ್ಗೀಳ್ ವರದಿಯನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಅದೇ ರೀತಿ ಕರ್ನಾಟಕದಲ್ಲಿಯೂ ಪರಿಸರ ಸೂಕ್ಷ್ಮ ಎಂದು ಗುರುತಿಸಲು ಹೇಳಿದ್ದ ಗಾಡ್ಗೀಳ್ ವರದಿಯನ್ನು ಜನರ ವಿರೋಧ ಇದೆಯೆಂದು ಹೇಳಿ ಸರಕಾರ ವಿರೋಧಿಸಿತ್ತು. ಗಾಡ್ಗೀಳ್ ವರದಿ ಬರುತ್ತಿದ್ದರೆ, ಕೊಡಗಿನ ಜಲಪ್ರಳಯ ಆಗುತ್ತಿರಲಿಲ್ಲ. ದುರಂತಕ್ಕೆ ಕಾರಣವಾಗಿರುವ ಎತ್ತಿನಹೊಳೆ ರೀತಿಯ ಎಡವಟ್ಟು ಯೋಜನೆಗಳು ಕಾರ್ಯಗತ ಆಗುತ್ತಲು ಇರಲಿಲ್ಲ.
ರಾಜ್ಯ ಸರಕಾರಗಳ ಆಗ್ರಹದಂತೆ, ಗಾಡ್ಗೀಳ್ ವರದಿಯನ್ನೇ ನಿರಾಕರಿಸಿದ್ದ ಕೇಂದ್ರ ಸರಕಾರ ಆನಂತರ ಉನ್ನತ ಮಟ್ಟದ ಅಧ್ಯಯನ ಸಮಿತಿಯೆಂದು ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ರಿಪೋರ್ಟ್ ತಯಾರಿಸಿತ್ತು. ಮಾಧವ ಗಾಡ್ಗೀಳ್ ಪಶ್ಚಿಮ ಘಟ್ಟಗಳ 75 ಶೇಕಡಾ ಭಾಗವನ್ನು ಸಂರಕ್ಷಣೆ ಮಾಡಬೇಕೆಂದು ಹೇಳಿದ್ದರೆ, ಕಸ್ತೂರಿ ರಂಗನ್ ಅದನ್ನು 37 ಶೇಕಡಕ್ಕೆ ಇಳಿಸಿದ್ದರು. ಆದರೂ, ಕೇರಳ ಮತ್ತು ಕರ್ನಾಟಕ ಸರಕಾರಗಳು ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಳ್ಳುವುದಕ್ಕೂ ಮುಂದಾಗಲಿಲ್ಲ. ಕೇರಳದ ಉಮ್ಮನ್ ಚಾಂಡಿ ಸರಕಾರ ತಮ್ಮದೇ ಪ್ರತ್ಯೇಕ ಸಮಿತಿ ರಚಿಸಿ, ವರದಿಯನ್ನೂ ಸ್ವೀಕಾರ ಮಾಡಿಕೊಂಡಿತ್ತು. ಆದರೆ, ಇವೆಲ್ಲ ಬೆಳವಣಿಗೆ ಮಧ್ಯೆಯೇ ಕೇರಳದ ಹಿರಿಯ ರಾಜಕಾರಣಿ, ಮಾಜಿ ಸಂಸದ ಪಿ.ಟಿ ಥಾಮಸ್ ಮಾತ್ರ ಮಾಧವ ಗಾಡ್ಗೀಳ್ ವರದಿಯೇ ಜಾರಿಗೊಳ್ಳಬೇಕೆಂದು ಪ್ರಬಲವಾಗಿ ಪ್ರತಿಪಾದಿಸಿದ್ದರು.
ಮಾಧವ ಗಾಡ್ಗೀಳ್ ವರದಿ ತಯಾರಿ ಸಂದರ್ಭದಲ್ಲಿ ಆ ಸಮಿತಿಯ ಸದಸ್ಯರಾಗಿದ್ದ ವಿ.ಎಸ್.ವಿಜಯನ್ ವಯನಾಡ್ ದುರಂತಕ್ಕೆ 13 ವರ್ಷಗಳ ಹಿಂದೆ ತಮ್ಮ ವರದಿಯನ್ನು ನಿರಾಕರಿಸಿದ್ದೇ ಕಾರಣ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಪರಿಸರ ಸೂಕ್ಷ್ಮ ಎಂದು ಗುರುತಿಸಿದ್ದ ವಲಯ ಒಂದರಲ್ಲಿ ಕ್ವಾರಿ ಮತ್ತು ರೆಡ್ ಕೆಟಗರಿ ಎಂದು ಹೇಳಲಾದ ಕೈಗಾರಿಕೆಗಳನ್ನು ನಡೆಸುವಂತಿಲ್ಲ ಎಂದು ಹೇಳಿದ್ದರು. ಆದರೆ, ಸರಕಾರ ಕೆಲವೊಬ್ಬರ ಲಾಬಿಗೆ ಮಣಿದು ವರದಿಯನ್ನೇ ಅಲ್ಲಗಳೆದಿದ್ದು ಈಗ ದುರಂತಕ್ಕೆ ಕಾರಣವಾಗಿದೆ. ಅಂತಹದ್ದೇನಾದರೂ ಕ್ವಾರಿ ನಡೆಸುವುದಿದ್ದರೂ, ಜನವಸತಿ ನೂರು ಮೀಟರ್ ದೂರದಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಹೇಳಿದ್ದರು.
2022ರಲ್ಲಿ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿಗೆ ಒಪ್ಪಿಗೆ ನೀಡಿದ್ದಲ್ಲದೆ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳದಲ್ಲಿ ವರದಿ ಜಾರಿಗೆ ಸೂಚಿಸಿತ್ತು. ಆದರೆ, ಕೇರಳ ಸರಕಾರ ಮಾತ್ರ ಈ ವರದಿಯನ್ನು ಒಪ್ಪುವುದಕ್ಕೆ ನಿರಾಕರಿಸಿತ್ತು. ಸಂಸದರಾದ ಕೋಡಿಕುನ್ನಿಲ್ ಸುರೇಶ್, ಆಂಟೋನಿ, ಡೀನ್ ಕುರಿಯಾಕೋಸ್ ಈ ಬಾರಿಯ ಸಂಸತ್ತಿನ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಡ್ರಾಫ್ಟ್ ನೋಟಿಫಿಕೇಶನ್ನಲ್ಲಿ ಬದಲಾವಣೆ ಕೇಳಿದ್ದರು. ಲೋಕಸಭೆಯಲ್ಲಿ ಈ ಬಗ್ಗೆ ಒತ್ತಾಯವನ್ನೂ ಮಾಡಿದ್ದರು.
ವಿಶೇಷ ಅಂದ್ರೆ, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲೇ ಕೇರಳದಲ್ಲಿ ಬಹುತೇಕ ಜಲಾಶಯಗಳಿದ್ದು, ಮಳೆಗಾಲದಲ್ಲಿ ನೀರನ್ನು ಅತಿಯಾಗಿ ಶೇಖರ ಮಾಡುತ್ತಿರುವುದೂ ಅತಿರೇಕದ ಸಮಸ್ಯೆಗಳಿಗೆ ಕಾರಣವಾಗುತ್ತಿದೆಯಾ ಅನ್ನುವ ಶಂಕೆ ಮೂಡಿಸುತ್ತಿದೆ. ವಯನಾಡ್ ಜಿಲ್ಲೆಯ ಬಾನಾಸುರ ಜಲಾಶಯದಲ್ಲಿ ಈ ಬಾರಿ ಎಚ್ಚರಿಕೆ ನಡುವೆಯೂ ಅತಿ ಹೆಚ್ಚು ನೀರನ್ನು ಶೇಖರಣೆ ಮಾಡಲಾಗಿತ್ತು. 1459 ಎಂಸಿಎಂ ಸಾಮರ್ಥ್ಯದ ಇಡುಕ್ಕಿ ಜಲಾಶಯದಲ್ಲಿ 54.83 ಶೇ, 1017 ಎಂಸಿಎಂ ಸಾಮರ್ಥ್ಯದ ಇಡಮಲಯಾರ್ ಜಲಾಶಯದಲ್ಲಿ 62 ಶೇಕಡಾ, 149 ಎಂಸಿಎಂ ಸಾಮರ್ಥ್ಯದ ಶೋಲಯಾರ್ ಜಲಾಶಯದಲ್ಲಿ 62.75 ಶೇಕಡಾ, 446 ಎಂಸಿಎಂ ಸಾಮರ್ಥ್ಯದ ಕಾಕ್ಕಿ ಡ್ಯಾಮ್ ನಲ್ಲಿ 49.97 ಶೇಕಡಾ ನೀರನ್ನು ನಿಲ್ಲಿಸಿದ್ದರೆ, ವಯನಾಡ್ ಜಿಲ್ಲೆ ವ್ಯಾಪ್ತಿಯ 201 ಎಂಸಿಎಂ ಸಾಮರ್ಥ್ಯದ ಬಾನಾಸುರ ಡ್ಯಾಮ್ ನಲ್ಲಿ 93 ಶೇಕಡಾ ನೀರನ್ನು ನಿಲ್ಲಿಸಲಾಗಿದೆ. ಕೇಂದ್ರ ನೀರಾವರಿ ಮಂಡಳಿಯ ಸೂಚನೆ ಪ್ರಕಾರ, ಜಲಾಶಯದಲ್ಲಿ ನಿಗದಿಗಿಂತ ಹೆಚ್ಚು ನೀರನ್ನು ನಿಲ್ಲಿಸಬಾರದು ಎಂದಿದ್ದರೂ, ಬಾನಾಸುರ ಡ್ಯಾಮ್ ನಲ್ಲಿ ಅತಿ ಹೆಚ್ಚು ನೀರನ್ನು ನಿಲ್ಲಿಸಿರುವುದೂ ಈಗ ಪ್ರಶ್ನೆಯಾಗಿದೆ.
As another tragedy left the otherwise picturesque Wayanad reeling in shock and suffering, a 13-year-old report that had specifically warned against indiscriminate quarrying and construction activities in Ecologically Sensitive Areas (ESAs) has once again re-emerged into the limelight.
15-01-25 06:37 pm
Mangaluru Correspondent
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
Keonics, Priyank Kharge; ದಯಾಮರಣಕ್ಕಾಗಿ ರಾಷ್ಟ್ರ...
15-01-25 12:19 pm
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 08:01 pm
Mangalore Correspondent
Mangalore crime, Jail; ಮಂಗಳೂರಿನ ಜೈಲಿನಲ್ಲಿ ಕೈದ...
15-01-25 12:09 pm
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm