ಬ್ರೇಕಿಂಗ್ ನ್ಯೂಸ್
26-05-25 06:14 pm HK News Desk ದೇಶ - ವಿದೇಶ
ಈಗೆರಡು ವಾರಗಳ ಹಿಂದೆ, ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರವನ್ನು ಒಂದು ಹಂತದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಸರಿಯಾ ತಪ್ಪಾ ಎಂದೆಲ್ಲ ಚರ್ಚೆ ನಡೆಯುತ್ತಿತ್ತು. ಇದರಲ್ಲಿ ಟ್ರಂಪ್ ಅವರ ಅಮೆರಿಕದ ಪ್ರಭಾವ ಎಷ್ಟು ಎಂಬ ಬಗ್ಗೆಯೂ ಅವರ ಹೇಳಿಕೆಗಳ ಆಧಾರದಲ್ಲಿ ಚರ್ಚೆಗಳು ನಡೆದವು. ಹೀಗೆಲ್ಲ ಆಗುತ್ತಿರಬೇಕಾದರೆ, ವಾಸ್ತವದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಬೇರೆಯದೇ ‘ಕದನ ವಿರಾಮ’ವೊಂದು ಆ ದೇಶದ ಸೋಲಿನ ಕತೆಯೊಂದರ ಮುನ್ನುಡಿಯಂತೆ ತೋರುತ್ತಿದೆ! ಈ ಕುರಿತು ಚರ್ಚೆ ದೊಡ್ಡಮಟ್ಟದಲ್ಲಿ ತೆರೆದುಕೊಳ್ಳಬಾರದು ಎಂಬಂತೆ ಡೊನಾಲ್ಡ್ ಟ್ರಂಪ್ ಗಲ್ಫ್ ದೇಶಗಳ ಭೇಟಿಯಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಅನಾವರಣ ಮಾಡುತ್ತ, ಅಮೆರಿಕವು ಜಾಗತಿಕ ವಿತ್ತ ಜಗತ್ತಿನಲ್ಲಿ ತನ್ನ ಎಂದಿನ ಹಿಡಿತ ಇರಿಸಿಕೊಂಡಿದೆ ಎಂಬ ಭಾವನೆಯನ್ನು ಮೂಡಿಸುವುದಕ್ಕೆ ಯತ್ನಿಸುತ್ತಿದ್ದಾರೆ. ಆದರೆ, ಈ ಎಲ್ಲ ಘಟನೆಗಳನ್ನು ಸೀಳುನೋಟಕ್ಕೊಳಪಡಿಸಿದಾಗ ನಮಗೆ ಸಿಗುತ್ತಿರುವ ಸೂಚನೆಗಳು ಯಾವವು?
ಚೀನಾ ಜತೆಗಿನ ತೆರಿಗೆ ಕದನ ವಿರಾಮ!
ಈ ವರ್ಷ ಜನವರಿಯಲ್ಲಿ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಎಲ್ಲ ದೇಶಗಳ ಜತೆಗೂ ಅಮೆರಿಕದ ತೆರಿಗೆ ಯುದ್ಧ ಶುರುವಾಯಿತಷ್ಟೆ. ಅದರಲ್ಲಿ, ಚೀನಾದ ಜತೆಗಿನ ತೆರಿಗೆ ಯುದ್ಧ ಮಾಧ್ಯಮಗಳ ಹೆಡ್ಲೈನ್ ಸೃಷ್ಟಿಗೆ ಅತ್ಯಂತ ರೋಚಕವಾಗಿ ಒದಗಿ ಬಂದಿತ್ತು. ಅಮೆರಿಕವು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಹಾಕಿದ್ದಕ್ಕೆ ಪ್ರತಿಯಾಗಿ ಚೀನಾವು ಅಮೆರಿಕದ ವಸ್ತುಗಳ ಮೇಲೆ ತೆರಿಗೆ ಹಾಕುವುದು ಹಾಗೂ ಇದರಿಂದ ಕ್ರುದ್ಧಗೊಂಡು ಡೊನಾಲ್ಡ್ ಟ್ರಂಪ್ ಮತ್ತಷ್ಟು ತೆರಿಗೆ ಹಾಕುವುದು ಇವೆಲ್ಲ ದಿನನಿತ್ಯದ ಕೆಸರೆರಚಾಟವಾಗಿಹೋಗಿತ್ತು. ಕೊನೆಯಲ್ಲಿ, ಅಮೆರಿಕವು ಚೀನಾದಿಂದ ಬರುವ ವಸ್ತುಗಳ ಮೇಲೆ ಬರೋಬ್ಬರಿ 145 ಶೇಕಡಾ ತೆರಿಗೆಯನ್ನು ಹಾಗೂ ಚೀನಾವು ಅಮೆರಿಕದ ವಸ್ತುಗಳ ಮೇಲೆ ಶೇ 126ರ ತೆರಿಗೆಯನ್ನು ಹಾಕಿ ಕುಳಿತಿದ್ದವು.
ಮೇ 11ರಂದು ಜಿನಿವಾದಲ್ಲಿ ಎರಡೂ ದೇಶದ ಪ್ರತಿನಿಧಿಗಳು ಕುಳಿತು ಮಾತನಾಡಿ, ಈ ತೆರಿಗೆ ಯುದ್ಧದಲ್ಲಿ 90 ದಿನಗಳ ಕದನ ವಿರಾಮವನ್ನು ಘೋಷಿಸಿದ್ದಾರೆ. ಸದ್ಯಕ್ಕೀಗ ತೆರಿಗೆ ಮಟ್ಟವು ಮೊದಲಿನ ಹಂತಕ್ಕೆ ಅಂದರೆ, ಚೀನಾದ ಮೇಲೆ ಅಮೆರಿಕದ ಶೇ. 30 ತೆರಿಗೆ ಹಾಗೂ ಅಮೆರಿಕದ ಮೇಲೆ ಚೀನಾದ ಶೇ. 10ರ ತೆರಿಗೆಯ ಹಂತದಲ್ಲಿ ನಿಂತಿದೆ.
ಈ ವಿದ್ಯಮಾನವನ್ನು ಎರಡೂ ದೇಶಗಳೂ ತಮ್ಮ ತಮ್ಮ ವಿಜಯ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಈ ಒಟ್ಟಾರೆ ಅಧ್ಯಾಯದಲ್ಲಿ ಹಿಂತೆಗೆಯಬೇಕಾಗಿ ಬಂದಿದ್ದು ಮಾತ್ರ ಅಮೆರಿಕ ಎಂಬುದೀಗ ಜಗಜ್ಜಾಹಿರ. ಏಕೆಂದರೆ ತೆರಿಗೆ ಯುದ್ಧ ಶುರುಮಾಡಿದ್ದು ಅಮೆರಿಕವೇ ಹೊರತು ಚೀನಾ ಅಲ್ಲ. ಹೀಗಿರುವಾಗ, ಈಗಿನ 90 ದಿನಗಳ ತೆರಿಗೆ ಯುದ್ಧದ ಕದನ ವಿರಾಮ ಘೋಷಿಸುವುದಕ್ಕೆ ಮುನ್ನ ಅಮೆರಿಕವು ಕೆಲವು ಉದ್ದೇಶಗಳನ್ನಾದರೂ ಈಡೇರಿಸಿಕೊಂಡಿದ್ದರೆ ಆಗ ಅದನ್ನು ಅದರ ಮೇಲುಗೈ ಎಂದು ವ್ಯಾಖ್ಯಾನಿಸಬಹುದಾಗಿತ್ತು. ಈ ಮೊದಲು ಟ್ರಂಪ್ ಹೇಳಿಕೊಂಡಿದ್ದ ಹಾಗೆ, ತೆರಿಗೆ ನೀತಿಗೆ ತತ್ತರಿಸಿ ಎಲ್ಲ ದೇಶಗಳೂ ತಲೆತಗ್ಗಿಸಿ ಅಮೆರಿಕದೊಂದಿಗೆ ಸಂಧಾನಕ್ಕೆ ಬರುತ್ತವೆ ಎಂಬ ಮಾತು ನಿಜವಾಗಿದೆಯೇ? ಹಾಗೇನೂ ಇಲ್ಲ, ಚೀನಾ ಸೇರಿದಂತೆ ಎಲ್ಲ ದೇಶಗಳೂ ಅಮೆರಿಕದೊಂದಿಗೆ ಸಮಬಲದಲ್ಲೇ ಮಾತನಾಡುತ್ತಿವೆ. ಹೋಗಲಿ, ಇಷ್ಟು ದಿನದ ತೆರಿಗೆ ಯುದ್ಧದ ಸಂದರ್ಭದಲ್ಲಿ ಅಮೆರಿಕವೇನಾದರೂ ತಾನು ವಸ್ತು ಉತ್ಪಾದಕ ಶಕ್ತಿಯಾಗುವ ಸೂಚನೆಗಳನ್ನು ಕೊಟ್ಟಿತೇ? ಎಂಥದೂ ಇಲ್ಲ. ಟ್ರಂಪ್ ಅಬ್ಬರಿಸಿದ್ದಷ್ಟೇ ಬಂತು. ಚೀನಾ ಸೇರಿದಂತೆ ಉಳಿದ ದೇಶಗಳ ಮೇಲೆ ಹಾಕಿದ ತೆರಿಗೆಯನ್ನು ನಿಜಾರ್ಥದಲ್ಲಿ ಬರಿಸುತ್ತಿರುವವರು ಅಮೆರಿಕದ ಪ್ರಜೆಗಳೇ! ಅವರು ಕೊಳ್ಳುವ ಎಲ್ಲ ವಸ್ತುಗಳ ಬೆಲೆ ಏರಿಕೊಂಡಿದೆ. ಈ ಸತ್ಯವನ್ನೀಗ ಖುದ್ದು ಆಡಳಿತಾರೂಢ ರಿಪಬ್ಲಿಕನ್ನರೇ ಒಪ್ಪಿಕೊಳ್ಳುತ್ತಿದ್ದಾರೆ.
ನಿಜ. ಅಮೆರಿಕದ ತೆರಿಗೆ ಸಮರದಿಂದ ಚೀನಾದ ರಫ್ತಿಗೆ ದೊಡ್ಡಮಟ್ಟದಲ್ಲೇ ಹೊಡೆತ ಬಿದ್ದಿದೆ. ಆದರೆ, ಅದೊಂದು ಏಕಚಕ್ರಾಧಿಕಾರದ ಕಮ್ಯುನಿಸ್ಟ್ ದೇಶ. ಜನರು ಇವೆಲ್ಲವನ್ನೂ ನುಂಗಿಕೊಳ್ಳುವಂತೆ ಅದು ಹಲವು ಕಾಲಗಳವರೆಗೆ ತನ್ನ ಆಡಳಿತದ ಶಕ್ತಿ ಉಪಯೋಗಿಸಿ ಯಶಸ್ವಿಯಾಗಬಲ್ಲದು. ಆದರೆ, ಅಮೆರಿಕ ಪ್ರಜಾಪ್ರಭುತ್ವದ ದೇಶ. ರಾಷ್ಟ್ರವಾದದ ಭಾವೋತ್ಕರ್ಷದಲ್ಲಿ ಟ್ರಂಪ್ ಅನ್ನು ಬೆಂಬಲಿಸಿದ್ದ ಮತದಾರರ ದೊಡ್ಡ ವರ್ಗವೊಂದು ಅದಾಗಲೇ ಬೆಲೆ ಏರಿಕೆಯಿಂದ ಕ್ರುದ್ಧವಾಗಿಬಿಟ್ಟಿದೆ.
ಅಮರಿಕದ ಸಮಸ್ಯೆ ಏನು?
ದೇಶದಲ್ಲೇ ವಸ್ತು-ಸೇವೆಗಳ ಉತ್ಪಾದನೆ ಆಗಬೇಕು, ಆ ಮೂಲಕ ತನ್ನ ಕರೆನ್ಸಿ ಹೊರಗೆ ಹರಿಯುವುದು ತಪ್ಪುವುದಲ್ಲದೇ ದೇಶದಲ್ಲೇ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದು ಆಶಯದ ಮಟ್ಟದಲ್ಲಿ ಉನ್ನತ ಚಿಂತನೆಯೇ ಸರಿ. ಆದರೆ, ಹಾಗೆ ವಸ್ತು ಸೇವೆಗಳ ಉತ್ಪಾದನೆಯ ರಾಷ್ಟ್ರವಾಗುವುದಕ್ಕೆ ಯಾವುದೇ ದೇಶದ ಜನ ಹೆಚ್ಚಿನ ಶ್ರಮಕ್ಕೆ, ಒಂದುಮಟ್ಟದ ತ್ಯಾಗಕ್ಕೆ ಸಿದ್ಧವಾಗಬೇಕಾಗುತ್ತದೆ. ಅಮೆರಿಕ ಅಂತಲ್ಲ, ಯಾವುದೇ ದೇಶವು ಉತ್ಪಾದಕ ಶಕ್ತಿಯಾಗಬೇಕೆಂದರೆ ಮೊದಲು ಆ ನಿಟ್ಟಿನಲ್ಲಿ ತಮ್ಮ ಜನಮಾನಸವನ್ನು ಅದಕ್ಕೆ ಸಿದ್ಧಗೊಳಿಸಿಕೊಳ್ಳಬೇಕು. ಫ್ಯಾಕ್ಟರಿಯಲ್ಲಿ ದುಡಿಯುವುದಕ್ಕೆ, ಡೆಸ್ಕ್ ಜಾಬುಗಳಿಗಿಂತ ಭಿನ್ನವಾದ ದೈಹಿಕ ಶ್ರಮ ಬೇಡುವ ಕೆಲಸಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದಕ್ಕೆ ಜನ ತಯಾರಿರಬೇಕು. ಹೀಗೆಲ್ಲ ಜನಮಾನಸವನ್ನು ಸಿದ್ಧಗೊಳಿಸದೇ, ಅದ್ಯಾವುದೋ ಒಂದು ಎಕ್ಸಿಕ್ಯುಟಿವ್ ಆರ್ಡರ್ ಮೂಲಕ ಅಮೆರಿಕದಲ್ಲೇ ಕಂಪನಿಗಳು ಕೆಲಸ ಮಾಡುವಂತೆ ಮಾಡಿಬಿಡುತ್ತೇನೆ ಎಂದು ಟ್ರಂಪ್ ಅಂದುಕೊಂಡಿರುವುದೇ ಅವಾಸ್ತವಿಕ. ವಾಸ್ತವವೇನೆಂದರೆ, ವಾಹನದ ಬಿಡಿಭಾಗಗಳೇ ಮೊದಲಾದ ಫ್ಯಾಕ್ಟರಿ ಕೆಲಸಗಳಿಗೆ ಅಮೆರಿಕವು ಮೆಕ್ಸಿಕೊ, ಕೆನಡಾದಂಥ ದೇಶಗಳನ್ನು ಅವಲಂಬಿಸಿದ್ದರೆ, ಬಹುತೇಕ ಸಿದ್ಧವಸ್ತುಗಳಿಗೆ ಚೀನಾವನ್ನು ಅವಲಂಬಿಸಿದೆ. ಇವನ್ನೆಲ್ಲ ಅಮೆರಿಕದಲ್ಲೇ ಮಾಡುವುದಕ್ಕೆ ಆ ಮಟ್ಟದ ದುಡಿಮೆಗೆ ಅಲ್ಲಿನ ಜನ ಸಿದ್ಧವಾಗಿಲ್ಲ ಹಾಗೂ ಒಂದೊಮ್ಮೆ ಅವರು ಕೆಲಸಕ್ಕೆ ಸಿಕ್ಕರೂ ಅದಕ್ಕೆ ತೆರಬೇಕಾದ ಬೆಲೆ ಅಧಿಕ. ಹಾಗೆಂದೇ ಖುದ್ದು ಅಮೆರಿಕದ ಕಂಪನಿಗಳು ಸಹ ಟ್ರಂಪ್ ಮಾತನ್ನು ಕೇಳುತ್ತಿಲ್ಲ. ಆ್ಯಪಲ್ ಕಂಪನಿ ಭಾರತದ ಬದಲು ಅಮೆರಿಕದಲ್ಲೇ ಉತ್ಪಾದನೆ ಮಾಡಬೇಕು ಎಂದು ಟ್ರಂಪ್ ಏನೋ ಹೇಳಿದರು. ಹಾಗಾದರೆ, ಭಾರತದ ಮೇಲೆ ಪ್ರತಿಕೂಲ ಪರಿಣಾಮವಾಗಿಬಿಡುತ್ತದೆಯಾ ಎಂದು ಚರ್ಚಿಸುವಾಗಲೇ ಮತ್ತೊಂದು ಸುದ್ದಿ ಬಂದಿದೆ. ಅದೇನೆಂದರೆ, ಆ್ಯಪಲ್ ಪೂರೈಕೆದಾರ ಕಂಪನಿಗಳಲ್ಲೊಂದಾಗಿರುವ ಫಾಕ್ಸಕಾನ್ 1.5 ಬಿಲಿಯನ್ ಡಾಲರುಗಳ ಹೆಚ್ಚುವರಿ ಹೂಡಿಕೆಯನ್ನು ಭಾರತದಲ್ಲಿ ಮಾಡಿದೆ. ಅರ್ಥಾತ್, ಕಂಪನಿಗಳು ತಮಗೆ ಲಾಭವಾಗುವಲ್ಲಿ, ಕೆಲಸಗಾರರು ಸುಲಭಕ್ಕೆ ಸಿಗುವಲ್ಲಿ ಬೀಡು ಬಿಡುತ್ತವೆಯೇ ಹೊರತು ಟ್ರಂಪ್ ರಾಜಕಾರಣಕ್ಕೆ ಕುಣಿಯಲಾರವು.
1950ರಿಂದ 1970 ಅಮೆರಿಕದ ಉತ್ಪಾದನಾ ವಲಯದ ಸುವರ್ಣಯುಗವಾಗಿತ್ತು. ಶೇ. 30ರಷ್ಟು ಉದ್ಯೋಗಗಳನ್ನು ಉತ್ಪಾದನಾ ವಲಯವೇ ಕೊಡುತ್ತಿತ್ತು. ಆದರೆ, ಆ ಕೌಶಲದ ಹೊಳಪನ್ನು ಅಮೆರಿಕದ ಪೀಳಿಗೆಗಳು ಕಳೆದುಕೊಂಡು ಹಲವು ದಶಕಗಳೇ ಆಗಿಬಿಟ್ಟಿವೆ. ಈಗೇನಿದ್ದರೂ ಅಮೆರಿಕದ ಉತ್ಪಾದನಾ ಶಕ್ತಿಯಿರುವುದು ರಕ್ಷಣಾ ವಲಯದಲ್ಲಿ ಮಾತ್ರ. ಅದರ ರಕ್ಷಣಾ ಉದ್ದಿಮೆ ಸಹ ಅತಿಯಾದ ಮಾರ್ಕೆಟಿಂಗ್ ಪ್ರಚಾರದಲ್ಲಿ ಬದುಕಿದೆಯೇನೋ ಎಂದು ಇತ್ತೀಚೆಗೆ ಅನುಮಾನಗಳು ಕಾಡುತ್ತಿವೆ. ಪಾಕಿಸ್ತಾನದಲ್ಲಿದ್ದ ಅಮೆರಿಕದ ರಕ್ಷಣಾ ಪರಿಕರಗಳು ಭಾರತದ ದಾಳಿಯನ್ನು ತಡೆಯುವುದಕ್ಕೆ ವಿಫಲವಾಗಿರುವುದು ಒಂದೆಡೆಯಾದರೆ, ಪೂರ್ಣಮಟ್ಟದ ಸೇನೆಯೇನೂ ಇರದ ಯೆಮೆನ್ ನ ಹೌತಿ ಉಗ್ರರು ಅಮೆರಿಕದ ಎಫ್ 35 ವಿಮಾನವನ್ನು ಹೆಚ್ಚು ಕಡಿಮೆ ಘಾತಿಸಿಬಿಡುವ ಸಾಮರ್ಥ್ಯ ತೋರಿರುವುದು ರಕ್ಷಣಾ ಉದ್ದಿಮೆಯಲ್ಲಿ ಸಹ ಅಮೆರಿಕವು ಸುಳ್ಳು ವರ್ಚಸ್ಸೊಂದನ್ನು ಕಟ್ಟಿಕೊಂಡಿರುವುದನ್ನು ಸೂಚಿಸುತ್ತಿವೆ.
ಎಲ್ಲಿದೆ ನಂಬಿಕಸ್ತ ಸಹಭಾಗಿತ್ವ?
ಕೇವಲ ಹೆಡ್ಲೈನ್ ಮಾತ್ರ ನಂಬಿಕೊಳ್ಳುವುದಾದರೆ ಡೊನಾಲ್ಡ್ ಟ್ರಂಪ್ ಡೀಲ್ ಮೇಲೆ ಡೀಲ್ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಅವ್ಯಾವುದಕ್ಕೂ ರೆಕ್ಕೆಪುಕ್ಕವಿಲ್ಲ. ಉದಾಹರಣೆಗೆ ಇತ್ತೀಚಿನ ಸೌದಿ ಭೇಟಿಯಲ್ಲಿ ಅಲ್ಲಿನ ಆಡಳಿತವು 1 ಟ್ರಿಲಿಯನ್ ಡಾಲರುಗಳಷ್ಟು ರಕ್ಷಣಾ ವ್ಯವಹಾರವನ್ನು ಅಮೆರಿಕದ ಜತೆ ಮಾಡುವುದಾಗಿ ಹೇಳಿದೆ. ಸೌದಿಯ ಒಟ್ಟಾರೆ ಜಿಡಿಪಿಯೇ ಅಷ್ಟಿರುವಾಗ ಇದರ ಅಸಲಿಯತ್ತನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು. ಅಲ್ಲದೇ, 2017ರಲ್ಲಿ ಇದೇ ಟ್ರಂಪ್ ಜತೆ ಸೌದಿ 110 ಬಿಲಿಯನ್ ಡಾಲರುಗಳ ಶಸ್ತ್ರ ಖರೀದಿಸುವ ಮಾತನಾಡಿತ್ತು. ಆಮೇಲೆ ಅದು ಹೆಡ್ಲೈನ್ ನಲ್ಲಿ ಮಾತ್ರವೇ ಉಳಿಯಿತೇ ಹೊರತು ದೊಡ್ಡಮಟ್ಟದ ಯಾವ ಖರೀದಿಗಳೂ ಆಗಲಿಲ್ಲ.
ಒಂದು ಕಾಲದಲ್ಲಿ ಅಮೆರಿಕವು ಉಗ್ರ ಎಂದು ಘೋಷಿಸಿದ ವ್ಯಕ್ತಿಯನ್ನು ಸಿರಿಯಾದ ನಾಯಕನನ್ನಾಗಿ ಒಪ್ಪಿಕೊಂಡು ಕೈಕುಲುಕುತ್ತಿರುವ ಟ್ರಂಪ್ ಅದನ್ನು ತಾವು ಸೌದಿಗೆ ಮಾಡುತ್ತಿರುವ ಉಪಕಾರ ಎಂಬಂತೆ ವ್ಯಾಖ್ಯಾನಿಸುತ್ತಿದ್ದಾರೆ. ಅದಾಗಲೇ ಅಮೆರಿಕದ ಮೇಲೆ ಅವಿಶ್ವಾಸದಿಂದಿರುವ ಇಸ್ರೇಲ್ ಇಂಥ ಬೆಳವಣಿಗೆಗಳಿಂದ ಇನ್ನಷ್ಟು ಮುನಿಸಿಕೊಂಡು ಅದ್ಯಾವ ಬುದ್ಧಿವಂತಿಕೆಯ ಪ್ರಹಾರವನ್ನು ಅಮೆರಿಕಕ್ಕೆ ಕೊಡಲಿದೆಯೋ ಗೊತ್ತಿಲ್ಲ. ಇತ್ತ, ಮೇ 20ರಂದು ಬ್ರಿಕ್ಸ್ ದೇಶಗಳ ಸಭೆಯಲ್ಲಿ ಎನರ್ಜಿ ಭದ್ರತೆಗೆ ಸೇರಿದಂತೆ ಹಲವು ಆಯಾಮಗಳಲ್ಲಿ ಮಾತನಾಡಿರುವ ಭಾರತವು, ತೈಲ ಹಾಗೂ ಶಕ್ತಿ ಸಂಪನ್ಮೂಲಗಳ ವ್ಯವಹಾರವನ್ನು ಸ್ಥಳೀಯ ಕರೆನ್ಸಿಗಳಲ್ಲೇ ನಡೆಸುವುದಕ್ಕೆ ಆದ್ಯತೆ ಇರಲಿ ಎನ್ನುವ ಮೂಲಕ ಪೆಟ್ರೊ ಡಾಲರಿಗೆ ಬಿಸಿ ಮುಟ್ಟಿಸಿದೆ. ಸೌದಿಯಂಥ ದೇಶಗಳು ಅದಾಗಲೇ ತೈಲ ವ್ಯವಹಾರದಲ್ಲಿ ಡಾಲರ್ ಹೊರತಾದ ಕರೆನ್ಸಿಯನ್ನು ಒಪ್ಪಿಕೊಳ್ಳುತ್ತಿವೆ.
ಒಟ್ಟಾರೆ, ಟ್ರಂಪ್ ಆರ್ಭಟಗಳು ಟಿವಿಯಲ್ಲಿ ನೋಡುವುದಕ್ಕೆ ಚೆಂದವೆನಿಸಬಹುದಾದರೂ ಜಗತ್ತೇನೂ ಅಮೆರಿಕದ ಧ್ವನಿಗೆ ಮೊದಲಿನಂತೆ ಹೆಜ್ಜೆ ಹಾಕುತ್ತಿಲ್ಲ ಎಂಬುದು ಸ್ಪಷ್ಟ.
(ಕೃಪೆ ; 'ವಿಕ ಮನಿ' ಸಂಚಿಕೆಯಲ್ಲಿ ಪ್ರಕಟಿತ ಲೇಖನ)
A 50% tariff on EU imports to the US has been delayed from June 1 until July 9 following a call with European Commission President Ursula von der Leyen, Donald Trump said.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm