ಬ್ರೇಕಿಂಗ್ ನ್ಯೂಸ್
27-10-20 04:37 pm Headline Karnataka News Network ಸಿನಿಮಾ
ಮಂಗಳೂರು, ಅಕ್ಟೋಬರ್ 27: ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಹಾಗೂ ಲವ್ ಜಿಹಾದ್ ಗೆ ಪ್ರೋತ್ಸಾಹ ನೀಡುವ ಲಕ್ಷ್ಮೀ ಬಾಂಬ್ ಚಲನಚಿತ್ರ ಪ್ರಸಾರ ಆಗದಂತೆ ನಿಷೇಧ ಹೇರಬೇಕು ಎಂದು ಹಿಂದೂ ಮಹಾಸಭಾ ಕರ್ನಾಟಕ ಆಗ್ರಹಿಸಿದೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಹಿಂದು ಮಹಾಸಭಾ ಮುಖಂಡರಾದ ಧರ್ಮೇಂದ್ರ ಹಾಗೂ ರಾಜೇಶ್ ಪವಿತ್ರನ್, ಅಕ್ಷಯ್ ಕುಮಾರ್ ನಟಿಸಿರುವ ಲಕ್ಷ್ಮೀ ಬಾಂಬ್ ಚಲನಚಿತ್ರ ನವೆಂಬರ್ 9ರಂದು ತೆರೆಕಾಣಲಿದೆ. ಚಲನಚಿತ್ರದ ಹೆಸರನ್ನು ಉದ್ದೇಶಪೂರ್ವಕ ಹಿಂದುಗಳನ್ನು ಅಣಕಿಸಲೆಂದೇ ಲಕ್ಷ್ಮೀ ಬಾಂಬ್ ಎಂದು ಇಡಲಾಗಿದೆ. ಚಿತ್ರವನ್ನು ದೀಪಾವಳಿ ತೆರೆಗೆ ಬರುವಂತೆ ಮಾಡಿರುವುದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಆರೋಪಿಸಿದ್ದಾರೆ.
ಬಹುಸಂಖ್ಯಾತ ಹಿಂದೂಗಳು ಆರಾಧಿಸುವ ಲಕ್ಷ್ಮಿ ದೇವಿಯ ಹೆಸರನ್ನು ಈ ಚಲನಚಿತ್ರಕ್ಕೆ ಇಟ್ಟಿರುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಈ ಚಲನಚಿತ್ರದಲ್ಲಿ ನಾಯಕಿಯ ಹೆಸರು ಪ್ರಿಯಾ ಯಾದವ್ ಹಾಗೂ ನಾಯಕನ ಹೆಸರು ಆಸಿಫ್ ಎಂದು ಇಟ್ಟಿರುವುದು ಕಂಡುಬಂದಿದ್ದು ಇದರಲ್ಲಿ ಮುಸಲ್ಮಾನ ಯುವಕ ಹಾಗೂ ಹಿಂದು ಯುವತಿಯ ಸಂಬಂಧವನ್ನು ತೋರಿಸಲಾಗಿದೆ. ಈ ಮೂಲಕ ಉದ್ದೇಶಪೂರ್ವಕವಾಗಿ ಲವ್ ಜಿಹಾದ್ ಜಾಡ್ಯಕ್ಕೆ ಪ್ರೇರಣೆ ನೀಡಿದಂತಾಗಿದೆ. ಆದ್ದರಿಂದ ಲಕ್ಷ್ಮೀ ಬಾಂಬ್ ಚಲನಚಿತ್ರದ ಪ್ರದರ್ಶನದ ಮೇಲೆ ಕೂಡಲೇ ನಿರ್ಬಂಧ ಹೇರಬೇಕೆಂದು ಹಿಂದೂ ಮಹಾಸಭಾ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಳ್ಳಿ ಧರ್ಮೇಂದ್ರ, ರಾಜೇಶ್ ಪವಿತ್ರನ್, ಜಗನ್ ಕುಮಾರ್, ಧನರಾಜ್ ಪೂಜಾರಿ, ಅಕ್ಷಿತ್ ಶೆಟ್ಟಿ, ವಸಂತ, ಸುಧೀರ್ ಶೆಟ್ಟಿ, ಕಮಲಾಕ್ಷ ಎಂ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Laxmi Bomb the upcoming Indian Hindi-language comedy horror film is now in controversy as Hindu Activits in Mangalore allege of Hurting Religious Sentiments. The movie script is written and directed by Raghava Lawrence
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
03-09-25 10:04 pm
HK News Desk
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
03-09-25 05:40 pm
Bangalore Correspondent
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm