ಬ್ರೇಕಿಂಗ್ ನ್ಯೂಸ್
12-12-20 01:10 pm Source: FILMIBEAT Bharath Kumar K ಸಿನಿಮಾ
ಬೆಂಗಳೂರು, ಡಿ.12: ಕನ್ನಡದ ದಿಗ್ಗಜ ನಟ ವಿಷ್ಣುವರ್ಧನ್ ಅವರನ್ನು ನಿಂದಿಸಿರುವ ತೆಲುಗು ನಟನ ವಿರುದ್ಧ ವಿಷ್ಣು ಸೇನಾ ಸಮತಿ ಸಿಡಿದೆದ್ದಿದೆ. ವಿಷ್ಣುದಾದ ಗೌರವಕ್ಕೆ ಧಕ್ಕೆ ಬರುವಂತೆ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ನಟನ ವಿರುದ್ಧ ಕನ್ನಡಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಕನ್ನಡದ ಹಿರಿಯ ನಟ ಜಗ್ಗೇಶ್, ಅನಿರುದ್ಧ್, ಪ್ರಥಮ್ ಸೇರಿದಂತೆ ಕನ್ನಡ ಪರ ಹೋರಾಟಗಾರರು ಸಹ ವಿಜಯ್ ರಂಗರಾಜು ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿರುವ ವಿಷ್ಣು ಸೇನಾ ಸಮಿತಿ ಈಗ ಕಾನೂನು ಹೋರಾಟಕ್ಕೆ ಮುಂದಾಗಿದೆ.

ವಿಷ್ಣು ಸೇನೆಯಿಂದ ಕಾನೂನು ಹೋರಾಟ
ಕನ್ನಡದ ಯಜಮಾನನ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿರುವ ನಟನ ವಿರುದ್ಧ ವಿಷ್ಣು ಸೇನೆ ಸಮತಿ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದು, ಸರಣಿ ದೂರುಗಳನ್ನು ದಾಖಲಿಸಲು ಕರೆ ನೀಡಿದೆ. ನಿಮ್ಮ ನಿಮ್ಮ ಏರಿಯಾದ ಪೊಲೀಸ್ ಠಾಣೆಯಲ್ಲಿ ತೆಲುಗು ನಟನ ವಿರುದ್ಧ ದಾಖಲಿಸಿ ಎಂದು ವಿಷ್ಣು ಸೇನೆ ಮನವಿ ಮಾಡಿದೆ. ಈ ಕುರಿತು ವಿಷ್ಣು ಸೇನೆ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಫೇಸ್‌ಬುಕ್‌ನಲ್ಲಿ ವಿವರವಾಗಿ ತಿಳಿಸಿ ಕೇಳಿಕೊಂಡಿದ್ದಾರೆ.
ಆ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದರಲ್ಲಿ ತಪ್ಪೇನಿಲ್ಲ
''ದೇವರಂತಹ ಯಜಮಾನ್ರ ಮೇಲೆ ಆರೋಪ ಮಾಡಿದ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದು ತಪ್ಪೇನಲ್ಲ. ಆದ್ದರಿಂದ ನಿಮ್ಮ ನಿಮ್ಮ ಏರಿಯಾದ ಪೊಲೀಸ್ ಸ್ಟೇಶನ್ಗಳಿಗೆ ಹೋಗಿ ಆತನ ವಿರುದ್ಧ ಒಂದು ದೂರು ಕೊಡಿ. ನಿಮ್ಮದು ಯಾವುದೇ ಸಂಘವಾಗಿದ್ದರೂ ಅಥವಾ ಸಂಘ ಇಲ್ಲದಿದ್ದರೂ ದೂರು ಕೊಡಲು ಅಡ್ಡಿಯೇನಿಲ್ಲ. ನಾನು ಮತ್ತು ವಕೀಲರು ಅದಕ್ಕೆ ಬೇಕಾದ ಡ್ರಾಫ್ಟ್ ರೆಡಿ ಮಾಡುತ್ತಿದ್ದೇವೆ. ಅದನ್ನು ನಿಮ್ಮೊಂದಿಗೆ ಮಧ್ಯಾಹ್ನದೊಳಗೆ ಹಂಚಿಕೊಳ್ಳುವೆ'' ಎಂದು ಮಾಹಿತಿ ನೀಡಿದ್ದಾರೆ.

ದೂರಿನ ಪ್ರತಿಯನ್ನು ಫಿಲಂ ಚೇಂಬರ್‌ಗೆ ಕಳುಹಿಸಿ
''ಆ ಡ್ರಾಫ್ಟ್ ನೋಡಿದ ಮೇಲೆ ದೂರು ಯಾವತರ ದಾಖಲಿಸಬೇಕು ಎಂಬುದೊಂದು ಐಡಿಯಾ ನಿಮಗೆ ಬರಬಹುದು. ಅಥವಾ ಡ್ರಾಫ್ಟ್ ಇಲ್ಲದೆಯೂ ದೂರು ದಾಖಲಿಸುವ ಕ್ರಮ ನಿಮಗೇ ಗೊತ್ತಿರಬಹುದು. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ದೂರು ದಾಖಲಿಸೋಣ. ದೂರು ದಾಖಲಾದ ಮೇಲೆ ಅದರ ಒಂದೊಂದು ಪ್ರತಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಳಿಸುವುದು ಮರೆಯಬೇಡಿ. ಇಷ್ಟು ಮಾತ್ರ ಮಾಡಬಹುದಲ್ವಾ?'' ಎಂದು ವಿಶೇಷ ರೀತಿಯಲ್ಲಿ ಹೋರಾಟಕ್ಕೆ ವಿಷ್ಣು ಸೇನೆ ಹೆಜ್ಜೆ ಇಟ್ಟಿದೆ.
This News Article is a Copy of FILMIBEAT
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm