ಬ್ರೇಕಿಂಗ್ ನ್ಯೂಸ್
29-12-20 12:18 pm Source: FILMIBEAT Shruthi Gk ಸಿನಿಮಾ
ಮುಂಗಾರು ಮಳೆ.. ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಿದ ಸಿನಿಮಾ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಬಂದ ಮುಂಗಾರು ಮಳೆ ಸಿನಿಮಾಗೆ ಕನ್ನಡ ಸಿನಿಪ್ರಿಯರು ಮನ ಸೋತಿದ್ದರು. ಚಿತ್ರದ ಕಥೆ, ಡೈಲಾಗ್, ಗಣೇಶ್ ಅಭಿನಯ, ಲೊಕೇಶನ್, ಮಳೆ, ಅದ್ಭುತವಾದ ಸಂಗೀತಕ್ಕೆ ಪ್ರೇಕ್ಷಕರು ತಲೆಬಾಗಿದ್ದರು. 2006ರಲ್ಲಿ ರಿಲೀಸ್ ಆದ ಮುಂಗಾರು ಮಳೆ ಸಿನಿಮಾಗೆ ಈಗ 14 ವರ್ಷದ ಸಂಭ್ರಮ. ಹೌದು, ಇವತ್ತಿಗೆ ಸರಿಯಾಗಿ 14 ವರ್ಷಗಳ ಹಿಂದೆ ಮುಂಗಾರು ಮಳೆ ಸಿನಿಮಾ ರಿಲೀಸ್ ರಾಜ್ಯದಾದ್ಯಂತ ಬಿಡುಗೆಯಾಗಿತ್ತು.
ಗಣೇಶ್ ಗೆ ಸ್ಟಾರ್ ಗಿರಿ ತಂದುಕೊಟ್ಟ ಸಿನಿಮಾ
ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡ ಮುಂಗಾರು ಮಳೆ ಚಿತ್ರ, ಗಣೇಶ್ ಸಿನಿ ಬದುಕನ್ನೇ ಬದಲಾಯಿಸಿದ ಸಿನಿಮಾವಾಗಿದೆ. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದರು. ನಿರ್ದೇಶಕ ಯೋಗರಾಜ್ ಭಟ್ ಅವರಿಗೂ ಸ್ಟಾರ್ ಗಿರಿ ತಂದುಕೊಟ್ಟ ಚಿತ್ರವಿದು.

ಪೂಜಾ ಗಾಂಧಿ ನಟನೆಯ ಚೊಚ್ಚಲ ಸಿನಿಮಾ
ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಪೂಜಾ ಗಾಂಧಿ ಕಾಣಿಸಿಕೊಂಡಿದ್ದಾರೆ. ಪೂಜಾ ಗಾಂಧಿಗೆ ಇಂದು ಚೊಚ್ಚಲ ನಟನೆಯ ಸಿನಿಮಾ. ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಗಳಿಸಿ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಪ್ರೀತಮ್ ಮತ್ತು ನಂದಿನಿಯ ನವಿರಾದ ಪ್ರೇಮಕಥೆಗೆ ಚಿತ್ರಪ್ರೇಮಿಗಳು ಮನಸೂರೆಗೊಂಡಿದ್ದರು.

ಗಾಳಿಪಟ ಮೂಲಕ ಮತ್ತೆ ಒಂದಾದ ಗಣೇಶ್-ಭಟ್ರು
ಈ ಸಿನಿಮಾ ಬಳಿಕ ಗಣೇಶ್ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದರು. ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮುಂಗಾರು ಮಳೆ ಬಳಿಕ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿ ಗಾಳಿಪಟ ಸಿನಿಮಾ ಮೂಲಕ ಮತ್ತೆ ಒಂದಾದರು. ಆದರೆ ಈ ಸಿನಿಮಾ ಮುಂಗಾರು ಮಳೆಯಷ್ಟು ಯಶಸ್ಸು ಕಾಣಲಿಲ್ಲ.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm