ಬ್ರೇಕಿಂಗ್ ನ್ಯೂಸ್
08-01-21 03:08 pm Source: MYKHEL ಸಿನಿಮಾ
ಕಳೆದ ವರ್ಷದ ಜೂನ್ ವರೆಗೆ ಹೆಚ್ಚಿನ ಜನಕ್ಕೆ ಗೊತ್ತೇ ಇರದಿದ್ದ ನಟಿ ರಿಯಾ ಚಕ್ರವರ್ತಿ ಹೆಸರು ಆ ನಂತರ ಇಡೀ ವರ್ಷ ಚಾಲ್ತಿಯಲ್ಲಿತ್ತು, ಕಾರಣ ಸುಶಾಂತ್ ಸಿಂಗ್ ಸಾವು. ಸುಶಾಂತ್ ಸಿಂಗ್ ಸಾವಿನ ನಂತರ ರಿಯಾ ಚಕ್ರವರ್ತಿ ಅನುಭವಿಸಿದ ಮಾನಸಿಕ, ದೈಹಿಕ ಯಾತನೆ ಎಂಥವರಿಗೂ ಅರ್ಥವಾಗುವಂತಹದ್ದು. ಅದರಲ್ಲಿಯೂ ಕೆಲ ಮಾಧ್ಯಮಗಳು ರಿಯಾ ರನ್ನು ಮಾತಿನಲ್ಲಿ ಕುಕ್ಕಿದರು ಹದ್ದುಗಳಂತೆ. ಮೊದಲಿಗೆ ಪ್ರಿಯಕರನ ಸಾವು, ಮಾಧ್ಯಮಗಳ , ಸಾಮಾಜಿಕ ಜಾಲತಾಣ ಟ್ರೋಲ್‌ಗಳ ಪಾಲಿಗೆ ವಿಲನ್, ಕೆಲ ರಾಜಕಾರಣಿಗಳ ಪಾಲಿಗೆ ಆಟದ ಬೊಂಬೆಯಾಗಿ, ನಂತರ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಒಂದು ತಿಂಗಳ ಸೆರೆವಾಸ ಅನುಭವಿಸಬೇಕಾಯಿತು. 'ಮಗಳು ಆತ್ಮಹತ್ಯೆಯ ಮಾತನ್ನಾಡುತ್ತಿದ್ದಾಳೆ' ಎಂದಿದ್ದರು ರಿಯಾರ ತಾಯಿ.
ಆದರೆ ಇಷ್ಟೆಲ್ಲಾ ಆದ ಬಳಿಕ ರಿಯಾ ತುಸು ಸಾವರಿಸಿಕೊಂಡಂತಿದ್ದಾರೆ. ರಿಯಾರ ಮುಖದಲ್ಲಿ ಮತ್ತೆ ಸಣ್ಣ ನಗು ಅರಳಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಿಯಾರ ಎರಡು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ರಿಯಾ ಮುಖದಲ್ಲಿ ನಗು
ಬಹಳ ದಿನಗಳ ಬಿಳಿಕ ರಿಯಾ ರ ಗೆಳೆಯ, ಕುಟುಂಬಕ್ಕೂ ಆಪ್ತವಾಗಿರುವ ಎಂಟಿವಿ ರೋಡೀಸ್ ಖ್ಯಾತಿಯ ರಾಜೀವ್ ಲಕ್ಷ್ಮಣನ್ ಅನ್ನು ಭೇಟಿಯಾಗಿದ್ದಾರೆ ರಿಯಾ. ಈ ಸಂದರ್ಭದ ಚಿತ್ರಗಳನ್ನುನ ರಾಜೀವ್ ಲಕ್ಷ್ಮಣನ್ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ರಿಯಾ ಮುಖದಲ್ಲಿ ಹಳೆಯ ನಗು ಗಮನ ಸೆಳೆಯುತ್ತಿದೆ.
ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗಿ
ರಾಜೀವ್ ಲಕ್ಷ್ಮಣ್ ನ ಮಗನ ಮೊದಲನೇ ವರ್ಷದ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿದ್ದಾರೆ ರಿಯಾ, ಜೊತೆಗೆ ರಾಜೀವ್, ರಘು ರಾಮ್ ಹಾಗೂ ಕುಟುಂಬದೊಂದಿಗೆ ಕೆಲ ಕಾಲ ಕಳೆದಿದ್ದಾರೆ.
'ಚೆಹ್ರೆ' ಸಿನಿಮಾ ಬಿಡುಗಡೆಗೆ ತಯಾರು
'ಚೆಹ್ರೆ' ಎಂಬ ಸಿನಿಮಾದಲ್ಲಿ ಕಳೆದ ವರ್ಷ ಲಾಕ್‌ಡೌನ್‌ಗೆ ಮುನ್ನವೇ ನಟಿಸಿದ್ದಾರೆ ರಿಯಾ ಚಕ್ರವರ್ತಿ. ಈ ಸಿನಿಮಾದ ಬಿಡುಗಡೆ ಬಾಕಿ ಇದೆ. ಇದೇ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ ಸಹ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ಕೆಲವೇ ದಿನಗಳಲ್ಲಿ ಆಗಲಿದೆ ಎಂದಿದ್ದಾರೆ ನಿರ್ದೇಶಕ ರೂಮಿ. ರಿಯಾ ಚಕ್ರವರ್ತಿಗೆ ಇನ್ನೂ ಹಲವು ಸಿನಿಮಾಗಳು ಒದಗಿ ಬರುತ್ತಿವೆ. ಯಾವುದನ್ನೂ ಅಂತಿಮ ಮಾಡಿಲ್ಲ ರಿಯಾ.
ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ರಿಯಾ
ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ರಿಯಾ ಚಕ್ರವರ್ತಿ ಒಂದು ತಿಂಗಳ ಜೈಲುವಾಸದ ಬಳಿಕ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಸಹ ಇದೇ ಪ್ರಕರಣದಲ್ಲಿ ಮೂರು ತಿಂಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.
This News Article is a Copy of FILMIBEAT
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm