ಬ್ರೇಕಿಂಗ್ ನ್ಯೂಸ್
09-01-21 03:36 pm Source: FILMIBEAT Bharath Kumar K ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಜೊತೆ ಶ್ರೀನಿಧಿ ಶೆಟ್ಟಿ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಯೂನಿರ್ವಸಲ್ ವಿಧಾನದಲ್ಲಿ ಕೆಜಿಎಫ್ ಟೀಸರ್ ರಿಲೀಸ್ ಆಗಿದ್ದು, ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಈ ಟೀಸರ್‌ನಲ್ಲಿ ಶ್ರೀನಿಧಿ ಶೆಟ್ಟಿಯ ಲುಕ್ ಸಹ ಅನಾವರಣಗೊಂಡಿದ್ದು, ಕುತೂಹಲ ಮೂಡಿದೆ. ಕೆಜಿಎಫ್ ಗುಂಗಿನಲ್ಲಿರುವಾಗಲೇ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿರುವ ಇನ್ನೊಂದು ಚಿತ್ರ ಟೀಸರ್ ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಹಲವು ಸರ್ಪ್ರೈಸ್‌ಗಳಿವೆ.
ಕೋಬ್ರಾ ಟೀಸರ್ ಬಿಡುಗಡೆ
ತಮಿಳು ನಟ ವಿಕ್ರಂ ನಟನೆಯ ಕೋಬ್ರಾ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕೋಬ್ರಾ ಚಿತ್ರದಲ್ಲಿ ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಅಜಯ್ ಜ್ಞಾನಮುತ್ತು ಈ ಚಿತ್ರ ನಿರ್ದೇಶಿಸಿದ್ದು, ಎಆರ್ ರೆಹಮಾನ್ ಸಂಗೀತ ಒದಗಿಸಿದ್ದಾರೆ.
ಕ್ಲಾಸ್ ಲುಕ್‌ನಲ್ಲಿ ಶ್ರೀನಿಧಿ ಶೆಟ್ಟಿ
ಕೆಜಿಎಫ್ ಸಿನಿಮಾದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ ಕೋಬ್ರಾ ಸಿನಿಮಾದಲ್ಲಿ ಕ್ಲಾಸ್ ಆಗಿ ನಟಿಸಿದ್ದಾರೆ. ಸಿಂಪಲ್ ಆಗಿ ಸಂಪ್ರದಾಯಸ್ಥ ಹುಡುಗಿಯಾಗಿ ಅಭಿನಯಿಸಿದ್ದಾರೆ. ಕೆಜಿಎಫ್ ಪಾತ್ರಕ್ಕೂ ಕೋಬ್ರಾ ಸಿನಿಮಾದ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದೆ.
ಕ್ರಿಕೆಟರ್ ಇರ್ಫಾನ್ ಪಠಾಣ್
ಸರ್ಪ್ರೈಸ್ ಎಂಬಂತೆ ಕೋಬ್ರಾ ಚಿತ್ರದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಪಠಾಣ್ ಕಾಣಿಸಿಕೊಂಡಿದ್ದು, ಕುತೂಹಲ ಹೆಚ್ಚಿಸಿದೆ.
ಪಠಾಣ್ ಮೊದಲ ಚಿತ್ರ, ಶ್ರೀನಿಧಿ ಮೂರನೇ ಚಿತ್ರ
ಬಹುಮುಖ ಪ್ರತಿಭೆ ವಿಕ್ರಂ ಈ ಚಿತ್ರದಲ್ಲಿ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಪಠಾಣ್ ಅವರ ಚೊಚ್ಚಲ ಸಿನಿಮಾ ಇದು. ಕೆಜಿಎಫ್ ಬಳಿಕ ಶ್ರೀನಿಧಿ ಶೆಟ್ಟಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಸೋನಿ ಪಿಕ್ಚರ್ಸ್ ಈ ಚಿತ್ರ ನಿರ್ಮಿಸಿದ್ದು ಬಿಡುಗಡೆಗೆ ಬಗ್ಗೆ ಮಾಹಿತಿ ನೀಡಿಲ್ಲ.
This News Article is a Copy of FILMIBEAT
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
05-09-25 10:53 pm
Mangalore Correspondent
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm
16 ವರ್ಷಗಳ ಹಳೆ ಪ್ರಕರಣದಲ್ಲಿ ಶಿಕ್ಷೆ ; ಬ್ರಹ್ಮಾವರದ...
05-09-25 12:34 pm
ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈ...
05-09-25 11:43 am